ಕುಂದಾಪುರ: ಕೃಷಿ ಕೂಲಿಕಾರರ 6ನೇ ರಾಜ್ಯ ಸಮ್ಮೇಳನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶದಲ್ಲಿ ಸರಕಾರ ನಡೆಸುತ್ತಿರುವ ಬಿಜೆಪಿ ಗೋರಕ್ಷಣೆ ಹೆಸರಲ್ಲಿ ಹಿಂದೂ, ಮುಸ್ಲಿಂ ಎಂದು ವಿಭಾಜಿಸುತ್ತಿದ್ದು, ಗೋ ರಕ್ಷಣೆ ಹೆಸರಲ್ಲಿ ದಲಿತರ ಮೇಲೆ ದಾಳಿ ಮೂಲಕ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ದಲಿತರ ಪ್ರಾಣಕ್ಕೆ ಪಶುವಿನಷ್ಟು ಕಿಮ್ಮತ್ತು ಸಿಗುತ್ತಿಲ್ಲ. ಬಿಜೆಪಿ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖದಂತಿದ್ದು, ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನ ಮಾಡದೆ ಬಡವರ ಉದ್ಯೋಗ ಕಸಿಯುವ ಮೂಲಕ ಅವರ ಹೊಟ್ಟೆ ಮೇಲೆ ಹೊಡೆಯಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಬಡವರ ಮೇಲೆ ದಾಳಿ ನಡೆಸುತ್ತಿದೆ ಎಂದು ಕೇರಳ ಮಾಜಿ ಸಂಸದ ಎ. ವಿಜಯರಾಘವನ್ ಆರೋಪಿಸಿದರು.

Click Here

Call us

Call us

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಉಡುಜಿ ಜಿಲ್ಲೆ, ಕುಂದಾಪುರ ಶಾಖೆ ಆಶ್ರಯದಲ್ಲಿ ಕುಂದಾಪುರ ನೆಹರು ಮೈದಾನದಲ್ಲಿ ನಡೆದ 6ನೇ ಕೃಷಿ ಕೂಲಿಕಾರರ ರಾಜ್ಯ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕನಿಷ್ಟ ಉದ್ಯೋಗ ಇನ್ನೂರು ದಿನಕ್ಕೆ ಹೆಚ್ಚಿಸಿ, ಕೂಲಿ ಮುನ್ನೂರು ರೂ.ಗೆ ಏರಿಸಿ, ಕೂಲಿ ಕಾರ್ಮಿಕರ ಆಹಾರ ಭದ್ರತೆ ಹಕ್ಕು ಕಾಪಾಡಬೇಕಿದ್ದ ಕೇಂದ್ರ, ರಾಜ್ಯ ಸರಕಾರ ಉದ್ಯೋಗ ಖಾತ್ರಿ ಯೋನೆಯ ಅನುದಾನಕ್ಕೆ ಕಡಿತ ಹಾಕುವ ಮೂಲಕ ಯೋಜನೆ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದು, ಇದರಿಂದ ಬಡವರ ಬದಕು ಮತ್ತಷ್ಟು ಬರ್ಭರವಾಗುತ್ತಿದೆ ಎಂದು ಹೇಳಿದರು.

Click here

Click Here

Call us

Visit Now

ದೇಶದಲ್ಲಿ ಸಾಕಷ್ಟು ಇಂಜಿನಿಯರ್, ಮೆಡಿಕಲ್, ಸ್ನಾತಕೋತ್ತರ ಕಾಲೇಜುಗಳಿದ್ದರೂ, ಅವೆಲ್ಲಾ ಕಾರ್ಪೊರೇಟರ್ ವರ್ಗಕ್ಕೆ ಅನುಕೂಲಕರವಾಗಿದ್ದು,ಬಡವರಿಗೆ ಕನ್ನಡಿ ಗಂಟಾಗಿದೆ. ದುಭಾರಿ ಡೊನೇಶನ್, ಥರಹೇವಾರಿ ಶುಲ್ಕುಗಳಿಂದ ಬಡವರ ಉನ್ನತ ಶಿಕ್ಷಣ ಮರೀಚಿಕೆಯಾಗಿದ್ದು, ಬಡವರ್ಗದ ಕುಟುಂಬದಿಂದ ಇಂಜಿಯರ್, ಡಾಕ್ಟರ್ ಆಗೋಕೆ ಸಾಧ್ಯವಾಗುತ್ತಿಲ್ಲ. ಶುಲ್ಕ ರಹಿಸಿ ಉನ್ನತ ಶಿಕ್ಷಣದ ಮೂಲಕ ಸರಕಾರ ಬಡವರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಬೇಕಿದ್ದ ಸರಕಾರ ಬಡವರ ಬದುಕಿನ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದರು.
ಬಡವರಿಗೆ ಉನ್ನತ ಶಿಕ್ಷಣ ಸಿಗೋದಿಲ್ಲ. ಕೂಲಿ ಕಾರ್ಮಿಕರ ಆಹಾರ ಭದ್ರತೆ ನೀಡಬೇಕಿದು, ಕೇಂದ್ರ ಸರಕಾರ ಪಡಿತರ ಚೀಟಿಗೆ ಆಧಾರ ಲಿಂಕ್ ಕೇಳುತ್ತದೆ. ಉದ್ಯೋಗ ನೀಡಿ ಎಂದರೆ ನೋಟ್ ರದ್ದಮಾಡುವ ಮೂಲಕ ಬ್ಯಾಂಕ್ ಮುಂದೆ ಕ್ಯೂನಿಲ್ಲಿಸುತ್ತಿದೆ. ಕೇರಳ ರಾಜ್ಯದಲ್ಲಿ ಭೂರಹಿತರಿಗೆ ಭೂಮಿ, ನಿವೇಶನ ರಹಿತರಿಗೆ ಬಡವರಿಗೆ ಉದ್ಯೋಗ ಭರವಸೆ ನೀಡುವ ಮೂಲಕ ದೇಶದಲ್ಲೇ ಮಾದರಿ ಎನಿಸಿದ್ದು, ಕೇರಳ ರಾಜ್ಯದಲ್ಲಾದ ಬದಲಾವಣೆ ದೇಶದಲ್ಲಿ ಯಾಕಾಗೋದಿಲ್ಲ ಎಂದು ಪ್ರಶ್ನಿಸಿದರು.

ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕೇರಳ ರಾಜ್ಯದ ಆಹಾರ ಸಚಿವೆ ಶೈಲಜಾ ಟೀಚರ್, ವರ್ಣ ವ್ಯವಸ್ಥೆ ದೇವರು ಸೃಷ್ಟಿಯಲ್ಲ. ಸಮಾಜದ ಕೆಲವೇ ವರ್ಗದ ಜನರ ಅನೂಕೂಲಕ್ಕಾಗಿ ಸ್ವಯಂ ಸೃಷ್ಟಿ ಮಾಡಿಕೊಂಡ ವ್ಯವಸ್ಥೆ ಇದಾಗಿದ್ದು, ಸ್ವಾತಂತ್ರ್ಯದ ನಂತರ ದೇಶ ಆಳಿದ ಪಕ್ಷಗಳು ಜಾತಿ, ಅಸ್ಪಶ್ರ್ಯತೆಯ ಪರವಾಗಿರಲಿಲ್ಲ. ಭೂ ಮಾಲಿಕ ಎದುರು ಹಾಕಿಕೊಳ್ಳುವ ಇಚ್ಚಾ ಶಕ್ತಿ ತೋರಿಸಲಿಲ್ಲ ಎಂದು ಎಂದು ಹೇಳಿದರು.

ದೇಶದಲ್ಲಿರುವ ಧಾರ್ಮಿಕ ಮೂಲಭೂತವಾದಿಗಳು ಧರ್ಮ ಸಂಘರ್ಷಕ್ಕೆ ಕಾರಣವಾಗುತ್ತಿದ್ದಾರೆ. ಪಾಳಯಗಾರಿಕೆ ಹಾಗೂ ಜಮೀನ್ದಾರಿಕೆಯಿಂದಾಗಿ ಮುಂದುವರಿದುಕೊಮದು ಬರುತಿದ್ದ, ಸಾಮಾಜಿಕ ಮೌಲ್ಯ ಕುಸಿಯುತ್ತಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಇದ್ದ ಜಾತಿಯಾಧಾರಿತ ಶೋಷಣೆ ಇನ್ನೂ ಕೂಡ ನಿಂತಿಲ್ಲ ಎಂದು ಖೇದ ವ್ಯಕ್ತ ಪಡಿಸಿದರು.
ಪೂರ್ವ ಸಿದ್ದತೆ ಇಲ್ಲದೆ ಕೇಂದ್ರ ಸರ್ಕಾರ ನೋಟ್ ನಿಷೇದ ಬಡವರ, ರೈಣತಾಪಿ ಹಾಗೂ ಕೂಲಿಕಾರರ ಬದುಕಿನ ಮೇಲೆ ಬರೆ ಎಳೆದಿದೆ. ಕಪ್ಪು ಹಳ ನಿರ್ಮೂಲನೆ ಮಡುತ್ತೇವೆ ಎಂದು ನೋಟ್ ಬ್ಯಾನ್ ಮಾಡುವ ಮೂಲಕ ಬಡವರ ಜೀವಿಸುವ ಹಕ್ಕು ಬ್ಯಾನ್ ಮಾಡಲಾಗಿದೆ ಎಂದು ಆರೋಪಿಸಿದರು.

Call us

ಬಿಜೆಪಿ ಮತ್ತು ಕಾಂಗ್ರೆಸ್ ಬಡವ ಪರವಾಗಿಲ್ಲದೆ ಶ್ರೀಮಂತರ ಹಿತಕ್ಕೆ ಒತ್ತು ನೀಡುತ್ತದೆ. ಕೇಂದ್ರ ಬಿಜೆಪಿ ಸರಕಾರ ನೀತಿ ಕಾರ್ಪರೇಟರ್ ವಲಯದ ಹಿತಕಾಯುವುದಾಗಿದ್ದು, ಬಡವರ ಹೆಸರಲ್ಲಿ ಶ್ರೀಮಂತರ ಓಲೈಕೆ ನಡೆಯುತ್ತಿದೆ. ಬಡವರಿಗೆ, ಆಹರ ಭದ್ರತೆ, ಕೂಲಿ ಕಾರ್ಮಿಕರಿಗೆ ಕೆಲಸ ಹಾಗೂ ಜೀವನ ಭದ್ರತೆ ನೀಡಲು ಸರಕಾರ ಎಡವುತ್ತಿದೆ ಎಂದು ಹೇಳಿದರು.

ಕೃಷಿ ಕೂಲಿಕಾರರ ಸಂಘ ರಾಜ್ಯಾದ್ಯಕ್ಷ ನಿತ್ಯಾನಂದ ಸ್ವಾಮಿ ಅಧ್ಯಕ್ಷತೆ ವಹಿಸಿ, ಇತ್ತೀಚೆಗೆ ಅಗಲಿದ ಫೆಡಿರಲ್ ಕ್ರಿಸ್ಟೋ ಶ್ರದ್ಧಾಂಜಲಿ ನಿರ್ಣಯ ಮಂಡಿಸಿದರು. ದೆಹಲಿ ಕೃಷಿ ಕೂಲಿಕಾರರ ಸಂಘ ಅಧ್ಯಕ್ಷ ಎಸ್.ತಿರುನಾವಕ್ಕರಸು, ಮಾಜಿ ಶಾಸಕ ಬಿ.ವಿ.ಶ್ರೀರಾಮ ರೆಡ್ಡಿ, ಪ್ರಾಂತ ಕೃಷಿ ಕೂಲಕಾರರ ಸಂಘ ಅಧ್ಯಕ್ಷ ದಾಸ ಭಂಡಾರಿ, ಪ್ರಧಾನ ಕಾರ‍್ಯದರ್ಶಿ ಚಂದ್ರಪ್ಪ ಹೊಸ್ಕೇರಿ ಇದ್ದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಶಂಕರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಾಂತ ಕೃಷಿ ಕೂಲಿಕಾರರ ಸಂಘ ಪ್ರಧಾನ ಕಾರ‍್ಯದರ್ಶಿ ವೆಂಕಟೇಶ್ ಕೋಣಿ ಹಾಗೂ ಸುರೇಶ್ ಕಲ್ಲಾಗರ ನಿರೂಪಿಸಿದರು. ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ ತಂಡದವರಿಂದ ಸುಗಮ ಸಂಗೀತ ಕಾರ‍್ಯಕ್ರಮ ಜರುಗಿತು.

????????????????????????????????????

Leave a Reply

Your email address will not be published. Required fields are marked *

eighteen − seven =