ಕುಂದಾಪುರ: ಕೆರೆಗಳ ಮೀನು ಪಾಶುವಾರು ಹಕ್ಕು ನೇರ ಗುತ್ತಿಗೆ- ಅರ್ಜಿ ಆಹ್ವಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕೋಡಿಕೆರೆ ಮತ್ತು ಕೋಟೆಕೆರೆಗಳ ಮೀನು ಪಾಶುವಾರು ಹಕ್ಕನ್ನು 2019-20 ನೇ ಮೀನುಗಾರಿಕೆ ಫಸಲಿ ವರ್ಷದಿಂದ 2023-24 ನೇ ಮೀನುಗಾರಿಕೆ ಫಸಲಿ ವರ್ಷದವರೆಗೆ ಗರಿಷ್ಟ 5 ವರ್ಷಗಳಿಗೆ ಸರ್ಕಾರದ ನಿಯಮ, ಷರತ್ತು ಮತ್ತು ನಿಬಂಧನೆಗೊಳಪಟ್ಟಂತೆ ಅರ್ಹ ಮೀನುಗಾರಿಕೆ ಸಹಕಾರಿ ಸಂಘಕ್ಕೆ ಗುತ್ತಿಗೆ ನೀಡಲಾಗುವುದು.

ಗುತ್ತಿಗೆ ಪಡೆಯಲಿಚ್ಛಿಸುವ ಅರ್ಹ ಮೀನುಗಾರರ ಸಹಕಾರ ಸಂಘದವರು ಮಾತ್ರ ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಮೇ 23 ರ ಒಳಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಶ್ರೇಣಿ-೨, ಕುಂದಾಪುರ, ಕಚೇರಿಗೆ ಕಚೇರಿ ವೇಳೆಯಲ್ಲಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ: 08254-230534 ಅನ್ನು ಸಂಪರ್ಕಿಸುವಂತೆ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

16 − 13 =