ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: 2017-18 ನೇ ಸಾಲಿನ ಬಿ.ಎಡ್/ಎಂ.ಎಡ್ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಅಂತರ್ ಬಿ.ಎಡ್/ ಎಂ.ಎಡ್ ಕಾಲೇಜ್ನ ಆಟೋಟ ಸ್ಪರ್ಧೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು ಅದರಲ್ಲಿ ನಮ್ಮ ಸಂಸ್ಥೆಯ ಪ್ರಶಸ್ತಿಯನ್ನು ಪಡೆದಿರುತ್ತಾರೆ. 100 ಮೀ ದ್ವಿತೀಯ, 200 ಮೀ ಪ್ರಥಮ, ಗುಂಡು ಎಸೆತ ದ್ವಿತೀಯ, ಪುರುಷರ ವಿಭಾಗದಲ್ಲಿ ಪ್ರಶಸ್ತಿ ಪಡೆದಿರುತ್ತಾರೆ. 100 ಮೀ ದ್ವಿತೀಯ, 400 ಮೀ ದ್ವಿತೀಯ ಮತ್ತು ತೃತೀಯ, 800 ಮೀ ಪ್ರಥಮ, ತೃತೀಯ 400 ರಿಲೇ ಪ್ರಥಮ, ಗುಂಡು ಎಸೆತ ಪ್ರಥಮ ಶಟಲ್ ಬ್ಯಾಡ್ಮಿಟನ್ ದ್ವಿತೀಯ ಸ್ಥಾನವನ್ನು ಮಹಿಳಾ ವಿಭಾಗ ಪಡೆದಿರುತ್ತಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಮಹಿಳೆ ವಿಭಾಗದಲ್ಲಿ ಸಮಗ್ರ ಪ್ರಸಸ್ತಿ. ಪ್ರಥಮ ಸ್ಥಾನ, ಮಹಿಳಾ ಚಾಂಪಿಯನ್ ಶಿಪ್ನಲ್ಲಿ 3ನೇ ಸ್ಥಾನ ಹಾಗೂ ಕಾಲೇಜ್ನ ಸಮಗ್ರ ಪ್ರಶಸ್ತಿಯಲ್ಲಿ ಮೂರನೇ ಸ್ಥಾನವನ್ನು ಪಡೆದಿರುತ್ತಾರೆ. ಪ್ರಶಸ್ತಿ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ಕೋಡಿ ಕುಂದಾಪುರ ಇದರ ಅಧ್ಯಕ್ಷರು, ಸಂಚಾಲಕರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.