ಕುಂದಾಪುರ ಕ್ರೈಸ್ಟ್ ವಲಯ ಮಟ್ಟದ ಕ್ರಿಕೆಟ್ ಪಂದ್ಯಾಟ: ಧರ್ಮಗುರು ಚಾಲನೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಐಸಿವೈಎಂ ಸಂಘಟನೆಯ ಆಶ್ರಯದಲ್ಲಿ ಕುಂದಾಪುರ ಕ್ರೈಸ್ಟ್ ವಲಯ ಮಟ್ಟದ 30 ಗಜದ ಕ್ರಿಕೆಟ್ ಪಂದ್ಯಾಟ ಹೋಲಿ ರೋಜರಿ ಚರ್ಚ್ ಮೈದಾನದಲ್ಲಿ ನಡೆಯಿತು.

Call us

ಪಂದ್ಯಾಟವನ್ನು ಧರ್ಮಗುರು ಸ್ಟ್ಯಾನಿ ತಾವ್ರೊ ಬ್ಯಾಟಿಂಗ್ ಮಾಡಿ ಉದ್ಘಾಟಿಸಿದರು. 18 ತಂಡಗಳು ಭಾಗವಹಿಸಿದ್ದವು, ಬಸ್ರೂರು ‘ ಬಿ ‘ ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ಷಿಪ್ ಪಡೆಯಿತು. ಬಸ್ರೂರು ‘ ಎ ‘ ತಂಡ ದ್ವೀತಿಯ ಸ್ಥಾನ ಪಡೆದಿದೆ.

ಪುರುಷರಲ್ಲಿ ಸ್ಟೀಫನ್ ಕರ್ವಾಲ್ಲೊ ಪಂದ್ಯ ಶ್ರೇಷ್ಠ, ಮಹಿಳೆಯರಲ್ಲಿ ಆಶಾ ಡಿಮೆಲ್ಲೊ ಪಂದ್ಯ ಶ್ರೇಷ್ಠ, ಜೊಯೆಲ್ ಕರ್ವಾಲ್ಲೊ ಉತ್ತಮ ದಾಂಡಿಗ, ಪ್ರವೀಣ್ ಡಿಸೋಜ ಉತ್ತಮ ಎಸೆತಗಾರ, ಸ್ಟೀಫನ್ ಕರ್ವಾಲ್ಲೊ ಉತ್ತಮ ಸರಣಿ ಆಟಗಾರನಾಗಿ ಆಯ್ಕೆಯಾದರು.ವಿಜೇತರಿಗೆ ನಗದು ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕುಂದಾಪುರ ಚರ್ಚ್‍ನ ಸಹಾಯಕ ಧರ್ಮಗುರು ವಿಜಯ್ ಡಿಸೋಜ, ಪ್ರಾಂಶುಪಾಲ ಪ್ರವೀಣ್ ಅಮ್ರತ್ ಮಾರ್ಟಿಸ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಲುವಿಸ್ ಜೆ. ಫರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, 20 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಐಸಿವೈಎಂ ಅಧ್ಯಕ್ಷ ರೆನ್ಸನ್ ಡಿಸೋಜ, ಕಾರ್ಯದರ್ಶಿ ಗ್ಲೆನ್ ಡಿಸೋಜ, ಕ್ರೀಡಾ ಕಾರ್ಯದರ್ಶಿ ಜೊಸ್ವಿನ್ ಡಿಸೋಜ, ಸಚೇತಕರಾದ ಜೆಸನ್ ಪಾಯ್ಸ್, ಶಾಂತಿ ಬಾರೆಟ್ಟೊ ಇದ್ದರು.

Leave a Reply

Your email address will not be published. Required fields are marked *

17 + 14 =