ಕುಂದಾಪುರ ಕ್ಷೇತ್ರದಲ್ಲಿ 79.07%, ಬೈಂದೂರು ಕ್ಷೇತ್ರದಲ್ಲಿ 77.05% ಮತದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ್ಯಂತ ಬಹುಪಾಲು ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.79.07% ಮತದಾನ ನಡೆದಿದ್ದರೇ, ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.77.05% ಮತದಾನ ನಡೆದಿದೆ.

ಪ್ರತಿಮತಗಟ್ಟೆಗಳಲ್ಲಿಯೂ ಹೊಸ ಮತದಾರರು ಮೊದಲ ಭಾರಿಗೆ ಮತದಾನ ಮಾಡುವ ಮೂಲಕ ಸಂಭ್ರಮ ಪಟ್ಟರೇ, ಶತಕದ ಆಸುಪಾಸಿನಲ್ಲಿರುವ ಹಿರಿಯ ಜೀವಗಳೂ ಕೂಡ ಹುರುಪಿನಿಂದ ಮತದಾನ ಮಾಡಿ ಮತದಾನಕ್ಕೆ ಪ್ರೇರೆಪಿಸಿದರು. ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಬಿರುಸಿನ ಮತದಾನ ನಡೆದಿದ್ದು, ಆ ಬಳಿಕ ನಿಧಾನವಾಗಿ ಮತದಾನ ಸಾಗಿತ್ತು.

Leave a Reply

Your email address will not be published. Required fields are marked *

five × four =