ಕುಂದಾಪುರ ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರಲ್ಲಿ ಕಳೆದ 20 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಬದಲಿಗೆ ಕ್ಷೇತ್ರದಲ್ಲಿ ಮೊದಲಿದ್ದ ಮಹಿಳಾ ಪೋಲಿಸ್ ಠಾಣೆ ಇಲ್ಲಿಂದ ಸ್ಥಳಾಂತರಗೊಂಡಿದೆ. ಜಿಲ್ಲೆಯಲ್ಲಿ ಉಡುಪಿ ಬಿಟ್ಟರೆ ಅತೀ ಹೆಚ್ಚು ವಾಹನ ನೋಂದಣಿಯಾಗುವ ಕುಂದಾಪುರದಲ್ಲಿ ಬಹು ವರ್ಷಗಳಿಂದ ಎಆರ್‌ಟಿಓ ಕಛೇರಿ ಬೇಡಿಕೆ ಇದೆ. ಆದರ ಈ ಕುರಿತು ಕನಿಷ್ಠ ಕಾಳಜಿಯನ್ನು ಕೂಡಾ ಇಲ್ಲಿನ ಶಾಸಕರು ಹಾಗೂ ಸಂಸದರು ಹೊಂದಿಲ್ಲ. ಸರಕಾರಿ ಕಛೇರಿಗಳು ಇರುವುದು ಜನರಿಗೆ ಸರಕಾರಿ ಸೌಲಭ್ಯಗಳನ್ನು ಒದಗಿಸಲೇ ಹೊರತು ಅಧಿಕಾರಿಗಳ ಸಂಪತ್ತು ಹೆಚ್ಚಿಸಿಕೊಳ್ಳಲು ಅಲ್ಲ. ಕುಂದಾಪುರ ಕ್ಷೇತ್ರದಾದ್ಯಂತ ಸರಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾಗಿದ್ದ ಜನಪ್ರತಿನಿಧಿಗಳು ಪರೋಕ್ಷವಾಗಿ ಅದನ್ನು ಬೆಂಬಲಿಸುತ್ತಿದ್ದಾರೆ. ಇಲ್ಲಿನ ಮೂಲಭೂತ ಸಮಸ್ಯೆಗಳಾದ ಸಿಆರ್‌ಝಡ್, ಡೀಮ್ಡ್ ಫಾರೆಸ್ಟ್, ಕಸ್ತೂರಿರಂಗನ್ ವರದಿ ಜಾರಿಯ ಕುರಿತು ಕುಂದಾಪುರ ಕಾಂಗ್ರೆಸ್ ಸಮಿತಿ ಆತಂಕಿತವಾಗಿದೆ. ಈ ಬಾರಿ ಕುಂದಾಪುರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಇಲ್ಲಿನ ಅಭಿವೃದ್ಧಿ ಕುರಿತಾದ ಮತ್ತು ಭ್ರಷ್ಟಾಚಾರದ ವಿರುದ್ಧದ ಕೆಲಸ ಮಾಡಲು ಅನುವು ಮಾಡಿಕೊಡಿ ಎಂದು ಇಂಟಕ್ ರಾಜ್ಯಾಧsಕ್ಷ ರಾಕೇಶ್ ಮಲ್ಲಿ ಹೇಳಿದ್ದಾರೆ.

Call us

Call us

Visit Now

ಅವರು ಬೀಜಾಡಿ ತಾಲೂಕ್ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

Click here

Call us

Call us

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಉಪಾಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಕಾಂಗ್ರೆಸ್ ಹಿಂದುಳಿದ ವರ್ಗ ರಾಜ್ಯ ಉಪಾಧ್ಯಕ್ಷ ಮಾಣಿ ಗೋಪಾಲ್, ಪ್ರಚಾರ ಸಮಿತಿ ಅಧ್ಯಕ್ಷ ವಿಕಾಸ್ ಹೆಗ್ಡೆ, ಕಾಂಗ್ರೆಸ್ ಐಟಿಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಕೆಎಫ್‌ಡಿಸಿ ಮಾಜಿ ಅಧ್ಯಕ್ಷ ಬಿ. ಹೆರಿಯಣ್ಣ, ತಾ.ಪಂ. ಮಾಜಿ ಸದಸ್ಯ ಅಶೋಕ್ ಪೂಜಾರಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಕ್ವಾಡಿ ರಮೇಶ್ ಶೆಟ್ಟಿ, ಕಾರ್ಯದರ್ಶಿ ಅಭಿಷೇಕ್ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಹಿರಿಯ ಕಾಂಗ್ರೆಸ್ಸಿಗರಾದ ಕೃಷ್ಣದೇವ ಕಾರಂತ, ಶೇಖರ ಛಾತ್ರಬೆಟ್ಟು, ಗುಲಾಬಿಯಮ್ಮ, ಹಿಂದುಳಿದ ವರ್ಗ ಅಧ್ಯಕ್ಷ ಕೃಷ್ಣ ಪೂಜಾರಿ, ಮುಖಂಡರಾದ ಸುಜಾತ ವಾಸುದೇವ್, ಶ್ರೀಮತಿ ಸಾಕು, ಸಂತೋಷ್ ಸಾಲಿಯಾನ್, ಸೀತಾರಾಮ ಪೂಜಾರಿ, ವೆಂಕಟೇಶ ಕುಮಾರ್, ಜಸ್ಸಿಂತಾ ಸಿಮೆಲ್ಲೋ ಸೀತಾ ಪೂಜಾರ್ತಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

18 − 1 =