ಕುಂದಾಪುರ : ಗಾಣಿಗ ಸೇವಾ ಸಂಘದ ನೇತೃತ್ವದಲ್ಲಿ ಸಾಮೂಹಿಕ ಉಪನಯನ,

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ವಟುಗಳಿಗೆ ಉಪನಯನ ದೀಕ್ಷೆ ಅತ್ಯಂತ ಪವಿತ್ರ ಕಾರ್ಯವಾಗಿದೆ.ಈ ದೀಕ್ಷೆ ಪಡೆದ ವಟುಗಳು ಜೀವನ ಧರ್ಮಗಳ ಮೌಲ್ಯವನ್ನು ಅರಿತು ನಡೆಯಬೇಕು.ಆಚಾರ-ವಿಚಾರಗಳನ್ನು ಸರಿಯಾಗಿ ಪಾಲಿಸಬೇಕು ಎಂದು ಕುಂದಾಪುರ ವ್ಯಾಸರಾಜ ಮಠದ ಪುರೋಹಿತ ವಿಜಯ ಪೇಜತ್ತಾಯ ಹೇಳಿದರು.

Call us

Call us

Click Here

Visit Now

ಅವರು ಭಾನುವಾರ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಆಶ್ರಯದಲ್ಲಿ ಕುಂದಾಪುರ ವ್ಯಾಸರಾಜ ಮಠದಲ್ಲಿ ನಡೆದ ಸಮಾಜದ ವಟುಗಳಿಗೆ ಸಾಮೂಹಿಕ ಉಪನಯನ,ಸಾಮೂಹಿಕ ಸತ್ಯನಾರಾಯಣ ಪೂಜೆ,ಶ್ರೀ ರಾಮ ನವಮಿ ಆಚರಣೆಯ ಸಂದರ್ಭದಲ್ಲಿ ಧಾರ್ಮಿಕ ಸಂದೇಶ ನೀಡಿ ಮಾತನಾಡಿದರು.

Click here

Click Here

Call us

Call us

ಶ್ರೀ ರಾಮ ಒಬ್ಬ ಆದರ್ಶ ಪುರುಷ.ಶ್ರೀ ರಾಮ ತನಗೆ ಬಂದ ಕಷ್ಟವನ್ನು ನಗುಮೊಗದಿಂದ ಸ್ವೀಕರಿಸಿ,ನಂಬಿದ ಮೌಲ್ಯಗಳನ್ನು ಕಾಯ್ದುಕೊಂಡು ಬಂದವ.ಶ್ರೀ ರಾಮ ನವಮಿ ಆಚರಣೆಯ ಮೂಲಕ ಅವನ ಆದರ್ಶವನ್ನು ಪಾಲಿಸಬೇಕು ಎಂದರು.ಸಮಾಜದ ೩೬ ವಟುಗಳಿಗೆ ಉಪನಯನ ಮಾಡಲಾಯಿತು.ಇದೇ ಸಂದರ್ಭದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಯ ಪ್ರಸಾದವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೆ.ಕೊಗ್ಗ ಗಾಣಿಗ,ಪ್ರಧಾನ ಕಾರ್ಯದರ್ಶಿ ಕೆ.ಭಾಸ್ಕರ್,ಕೋಶಾಧಿಕಾರಿ ಪರಮೇಶ್ವರ ಗಾಣಿಗ,ವ್ಯಾಸರಾಜ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಶ್ರೀನಿವಾಸ ಗಾಣಿಗ,ಕೋಶಾಧಿಕಾರಿ ಗಣಪಯ್ಯ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

4 × four =