ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಗೋವಿಗಾಗಿ ಮೇವು ಅಭಿಯಾನದ ಅಂಗವಾಗಿ ನೀಲಾವರದ ಪೇಜಾವರ ಮಠದ ಗೋಶಾಲೆಗೆ ಹಸಿ ಹುಲ್ಲು ನೀಡಲಾಯಿತು.
ಹಸಿ ಹುಲ್ಲುಗಳ ಕೊಡುಗೆ ಸ್ವೀಕರಿಸಿದ ಪೇಜಾವರ ಮಠದ ಯತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು, ಆಶೀರ್ವಚನ ನೀಡಿದರು.
ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಕುಂದಾಪುರ, ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಾ ಪೈ, ಪ್ರಧಾನ ಕಾರ್ಯದರ್ಶಿ ಅನಿತಾ ಶ್ರೀಧರ್, ಕೋಶಾಧಿಕಾರಿ ಆಶಾ ಗೋವಿಂದ ಮೊಗವೀರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಲತಾ ಸುರೇಶ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಪಿ.ಗುಣರತ್ನಾ, ಪುಷ್ಪಾ ಶೇಟ್, ಇಂದಿರಾ, ಶಾಂತಾ ಇದ್ದರು.