ಕುಂದಾಪುರ: ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳದಿಂದ ದಾಳಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಿಲ್ಲೆಯಲ್ಲಿ ಕೋಟ್ಪಾ 2003 ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳದ ವತಿಯಿಂದ ಕುಂದಾಪುರ ತಾಲೂಕಿನ ನಗರ ವ್ಯಾಪ್ತಿ ಪ್ರದೇಶಗಳಲ್ಲಿ ತಂಬಾಕು ಮಾರಾಟದ ಅಂಗಡಿ, ಹೋಟೇಲ್, ಬಾರ್ ಮತ್ತು ರೆಸ್ಟೋರೆಂಟ್ಗಳಿಗೆ ದಾಳಿ ನಡೆಸಿ ಸೆಕ್ಷನ್ 4, 6 (ಎ) ಮತ್ತು 6(ಬಿ) ಅಡಿಯಲ್ಲಿ 28 ಪ್ರಕರಣ ದಾಖಲಿಸಿ 2800 ರೂ. ದಂಡ ವಸೂಲಿ ಮಾಡಲಾಯಿತು. ಅದರಂತೆ ಸೆಕ್ಷನ್ 4, 6 (ಎ) ಮತ್ತು 6(ಬಿ) ನಾಮಫಲಕಗಳನ್ನು ಸದರಿ ದಾಳಿಯಲ್ಲಿ ವಿತರಿಸಲಾಯಿತು.

ದಾಳಿಯಲ್ಲಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ್, ಕೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಉಮೇಶ್ ಕುಮಾರ್, ಹಿರಿಯ ಆರೋಗ್ಯ ಸಹಾಯಕ ರಮೇಶ್ ಶೆಟ್ಟಿ, ಜಿಲ್ಲಾ ರಾಷ್ಟ್ರೀಯ ತಂಬಾಕು ನಿಯಂತ್ರಣಾ ಘಟಕದ ವತಿಯಿಂದ, ಎನ್.ಟಿ.ಸಿ.ಪಿ. ಜಿಲ್ಲಾ ಸಲಹೆಗಾರ್ತಿ ಮಂಜುಳಾ ಶೆಟ್ಟಿ, ಪೊಲೀಸ್ ಠಾಣೆಯ ಆರಕ್ಷಕರಾದ ಜಗದೀಶ್ ಮತ್ತು ಬೇಬಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

15 + seventeen =