ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜಿನಲ್ಲಿಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಇವರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕುಸ್ತಿ ಪಂದ್ಯಾಟ-2020-21ನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ವಿಶ್ವಸ್ಥರಾದ ರಾಜೇಂದ್ರ ತೋಳಾರ್ ಇತ್ತೀಚೆಗೆ ಉದ್ಘಾಟಿಸಿದರು.
ಕುಸ್ತಿ ಪಂದ್ಯಾಟದಲ್ಲಿ ಶ್ರೀ ವೆಂಕಟ್ರಮಣ ಪದವಿ ಪೂರ್ವ ಕಾಲೇಜು ಕುಂದಾಪುರ ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ಶ್ರೀ ಶಾರದಾ ಕಾಲೇಜು ಬಸ್ರೂರು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆಯಿತು.
ಕುಸ್ತಿ ಪಂದ್ಯಾಟದ ಫಲಿತಾಂಶ:
57 ಕೆ.ಜಿ ವಿಭಾಗ- ಪ್ರಥಮ- ಶ್ರೀನಿವಾಸ,ಶ್ರೀ ಶಾರದಾಕಾಲೇಜು ಬಸ್ರೂರು ದ್ವಿತೀಯ-ಮಹಮ್ಮದ್ ಸಯೀದ್,ಎಕ್ಷಲೆಂಟ್ ಪದವಿಪೂರ್ವಕಾಲೇಜು,ಸುಣ್ಣಾರಿ,ತೃತೀಯ- ಸುದೀಪ್,ಶ್ರೀ ವೆಂಕಟರಮಣ ಪದವಿ ಪೂರ್ವಕಾಲೇಜು, ಕುಂದಾಪುರ
61ಕೆ.ಜಿ ವಿಭಾಗ- ಪ್ರಥಮ-ರವೀಶ್,ಶ್ರೀ ಶಾರದಾಕಾಲೇಜು ಬಸ್ರೂರು ದ್ವಿತೀಯ-ಸುದೀಪ್,ಶ್ರೀ ಶಾರದಾಕಾಲೇಜು ಬಸ್ರೂರುತೃತೀಯ-ದೀನದಯಾಳ್ ನಿಶಾದ್,ಮಹಾತ್ಮಗಾಂಧಿ ಪದವಿ ಪೂರ್ವಕಾಲೇಜು,ಉಡುಪಿ.
65 ಕೆ.ಜಿ ವಿಭಾಗ- ಪ್ರಥಮ-ಅಜಯ್‌ಕುಮಾರ್,ಸರಕಾರಿ ಪದವಿ ಪೂರ್ವಕಾಲೇಜು,ಕುಂದಾಪುರ, ದ್ವಿತೀಯ-ಅವಿನಾಶ್,ಶ್ರೀ ಶಾರದಾಕಾಲೇಜು ಬಸ್ರೂರುತೃತೀಯ-ವರುಣ್, ಶ್ರೀ ವೆಂಕಟರಮಣ ಪದವಿ ಪೂರ್ವಕಾಲೇಜು, ಕುಂದಾಪುರ
70 ಕೆ.ಜಿ ವಿಭಾಗ- ಪ್ರಥಮ-ಪ್ರಿನ್ಸನ್‌ಡಿಸೋಜಾ,ಶ್ರೀ ಶಾರದಾಕಾಲೇಜು ಬಸ್ರೂರು ದ್ವಿತೀಯ-ಪ್ರಜ್ವಲ್‌ಆರ್,ಶ್ರೀ ಶಾರದಾಕಾಲೇಜು ಬಸ್ರೂರುತೃತೀಯ-ಸೂರಜ್‌ಆರ್.,ಶ್ರೀ ವೆಂಕಟರಮಣ ಪದವಿ ಪೂರ್ವಕಾಲೇಜು, ಕುಂದಾಪುರ.
74 ಕೆ.ಜಿ ವಿಭಾಗ- ಪ್ರಥಮ- ಶ್ಯಮಂತ್,ಎಸ್.ಎಮ್.ಎಸ್ ಪದವಿ ಪೂರ್ವಕಾಲೇಜು,ಬ್ರಹ್ಮಾವರ, ದ್ವಿತೀಯ-ಸುಶಾಂತ್ ಶೆಟ್ಟಿ,ಶ್ರೀ ವೆಂಕಟರಮಣ ಪದವಿ ಪೂರ್ವಕಾಲೇಜು, ಕುಂದಾಪುರ, ತೃತೀಯ-ಶ್ರೀವತ್ಸ,ಶ್ರೀ ವೆಂಕಟರಮಣ ಪದವಿ ಪೂರ್ವಕಾಲೇಜು, ಕುಂದಾಪುರ.
79 ಕೆ.ಜಿ ವಿಭಾಗ- ಪ್ರಥಮ- ನಿಖಿಲ್,ಶ್ರೀ ವೆಂಕಟರಮಣ ಪದವಿ ಪೂರ್ವಕಾಲೇಜು, ಕುಂದಾಪುರದ್ವಿತೀಯ-ಕೌಶಿಕ್,ಶ್ರೀ ವೆಂಕಟರಮಣ ಪದವಿ ಪೂರ್ವಕಾಲೇಜು, ಕುಂದಾಪುರ, ತೃತೀಯ-ಉಲ್ಲಾಸ್,ಶ್ರೀ ಶಾರದಾಕಾಲೇಜು ಬಸ್ರೂರು.
89 ಕೆ.ಜಿ.ವಿಭಾಗ- ಪ್ರಥಮ-ಮಂಜುನಾಥ್,ಶ್ರೀ ವೆಂಕಟರಮಣ ಪದವಿ ಪೂರ್ವಕಾಲೇಜು, ಕುಂದಾಪುರ, ದ್ವಿತೀಯ-ವಿಕ್ರಮ್,ಮಹಾತ್ಮಗಾಂಧಿ ಪದವಿ ಪೂರ್ವಕಾಲೇಜು,ಉಡುಪಿ,ತೃತೀಯ-ಹೇರಂಭ,ಶ್ರೀ ವೆಂಕಟರಮಣ ಪದವಿ ಪೂರ್ವಕಾಲೇಜು, ಕುಂದಾಪುರ.
92 ಕೆ.ಜಿ ವಿಭಾಗ- ಪ್ರಥಮ-ವಿನಯ್,ಶ್ರೀ ವೆಂಕಟರಮಣ ಪದವಿ ಪೂರ್ವಕಾಲೇಜು, ಕುಂದಾಪುರ, ದ್ವಿತೀಯ-ದಿಶಾನ್ ಶೆಟ್ಟಿ, ಶ್ರೀ ವೆಂಕಟರಮಣ ಪದವಿ ಪೂರ್ವಕಾಲೇಜು, ಕುಂದಾಪುರ, ತೃತೀಯ-ಸಾಗರ್‌ಎನ್.ಜಿ,ಶ್ರೀ ಶಾರದಾಕಾಲೇಜು ಬಸ್ರೂರು.
97 ಕೆ.ಜಿ ವಿಭಾಗ – ಪ್ರಥಮ-ರಾಘವೇಂದ್ರ,ಶ್ರೀ ವೆಂಕಟರಮಣ ಪದವಿ ಪೂರ್ವಕಾಲೇಜು, ಕುಂದಾಪುರ, ದ್ವಿತೀಯ-ತನ್ಮಯ್ ಟಿ.ಶ್ರೀ ವೆಂಕಟರಮಣ ಪದವಿ ಪೂರ್ವಕಾಲೇಜು, ಕುಂದಾಪುರ.
125 ಕೆ.ಜಿ ವಿಭಾಗ – ಪ್ರಥಮ-ಮಹಮ್ಮದ್‌ಅಫ್ರಾನ್, ಎಕ್ಸಲೆಂಟ್ ಪದವಿ ಪೂರ್ವಕಾಲೇಜು,ಸುಣ್ಣಾರಿ ದ್ವಿತೀಯ-ಕಾರ್ತಿಕ್ ಭಟ್ ಕೆ., ಶ್ರೀ ವೆಂಕಟರಮಣ ಪದವಿ ಪೂರ್ವಕಾಲೇಜು, ಕುಂದಾಪುರ
ಕಾರ್ಯಕ್ರಮದಅಧ್ಯಕ್ಷತೆಯನ್ನು ಭಂಡಾರ್ಕಾರ‍್ಸ್ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡವಹಿಸಿದ್ದರು.
ಪಂದ್ಯಾಟದ ನಂತರ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಉಡುಪಿ ಜಿಲಾ ಕ್ರೀಡಾ ಸಂಯೋಜಕರಾದ ದಿನೇಶ್ ಕುಮಾರ್ ಶೆಟ್ಟಿ ಕ್ರೀಡಾಳುಗಳಿಗೆ ಬಹುಮಾನ ವಿತರಿಸಿದರು. ದೈಹಿಕ ನಿರ್ದೇಶಕ ಸತೀಶ್ ಬೆಂಗ್ರೆ ಕುಸ್ತಿ ಪಂದ್ಯಾಟದತೀರ್ಪುಗಾರರಾಗಿ ಸಹಕರಿಸಿದರು.
ಈ ಸಂದರ್ಭದಲಿ ಕಾರ್ಯಕ್ರಮದಲ್ಲಿ ಉಡುಪಿ ಮಹಾತ್ಮಗಾಂಧಿ ಕಾಲೇಜು, ದೈಹಿಕ ನಿರ್ದೇಶಕರಾದ ಸತಿಶ ಹೆಗಡೆ, , ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್ .ಪಿ. ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಕಾಲೇಜಿನ ದೈಹಿಕ ನಿರ್ದೇಶಕರಾದ ಶಂಕರನಾರಾಯಣ ಸ್ವಾಗತಿಸಿದರು. ದೈಹಿಕ ನಿರ್ದೇಶಕಿ ವನಿತಾ ವಂದಿಸಿದರು. ವಿದ್ಯಾರ್ಥಿ ಆಕಾಶ್ ಜೋಗಿ ಕಾರ್ಯಕ್ರಮ ನಿರೂಪಿಸಿದರು.