ಕುಂದಾಪುರ: ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಕೆಸರಲ್ಲೊಂದಿನ’, ‘ಕಂಬಳ’ – ಅಣಕು ಪ್ರದರ್ಶನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವಿದ್ಯಾರ್ಥಿ ಸಮುದಾಯಕ್ಕೆ ನೆಲಪರ ಬದುಕಿನ ಸೊಗಡನ್ನು ಪರಿಚಯಿಸುವ ಉದ್ದೇಶದಿಂದ ಸ.ಹಿ.ಪ್ರಾ. ಶಾಲೆ, ಬವಳಾಡಿಯಲ್ಲಿ ನಡೆದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಶ್ರೀ ವಿವೇಕಾನಂದ ಯುವಕ ಮಂಡಲ, ಗಂಟಿಹೊಳೆ, ಬವಳಾಡಿ, ಶ್ರೀ ಜಟ್ಟಿಗೇಶ್ವರ ಕಲಾ ಮತ್ತು ಕ್ರೀಡಾ ಸಂಘ, ಬವಳಾಡಿ ಇವರ ಸಹಯೋಗದೊಂದಿಗೆ ’ಕೆಸರಲ್ಲೊಂದಿನ’ ಮತ್ತು ’ಕಂಬಳ ಅಣಕು ಪ್ರದರ್ಶನ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

Click Here

Call us

Call us

ಬಿಜೂರು ಗ್ರಾಮ ಪಂಚಾಯತ್ ಸದಸ್ಯರಾದ ವೀರೇಂದ್ರ ಶೆಟ್ಟಿ ಗಂಟಿಹೊಳೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾಂಪ್ರದಾಯಿಕ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ನಿವೃತ್ತ ಮುಖ್ಯೋಪಧ್ಯಾಯರಾದ ನಾರಾಯಣ ಶೆಟ್ಟಿ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಸದಸ್ಯರು ಹಾಗೂ ಉದ್ಯಮಿಗಳಾದ ಬಿ.ಎಸ್. ಸುರೇಶ್ ಶೆಟ್ಟಿ ಶುಭ ಹಾರೈಸಿದರು.

Click here

Click Here

Call us

Visit Now

ಈ ಸಂದರ್ಭದಲ್ಲಿ ಪ್ರಜ್ವಲ್ ಶೆಟ್ಟಿ, ಉದ್ಯಮಿಗಳು, ಬವಳಾಡಿ, ಶೇಖರ ಆಚಾರಿ ಬವಳಾಡಿ, ಬಾಬು ಶೆಟ್ಟಿ ಗಂಟಿಹೊಳೆ, ಶ್ರೀಕಾಂತ ಶೆಟ್ಟಿ ಗಂಟಿಹೊಳೆ, ಸ.ಹಿ.ಪಾ. ಶಾಲೆ, ಬವಳಾಡಿಯ ಎಸ್.ಡಿ.ಎಮ್.ಸಿ., ಸದಸ್ಯರಾದ ಶೋಭಾ, ಗುಲಾಬಿ, ಸುಜಾತ ದುರ್ಗೇಶ್, ಲೋಹಿತ್ ಶೆಟ್ಟಿ ಗಂಟಿಹೊಳೆ, ಶರತ್ ಕುಮಾರ್, ಕೆಲ್ಸಿಮನೆ ಬವಳಾಡಿ, ನಾಗರಾಜ ಪೂಜಾರಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಬಿಜೂರು, ಸೂಲಿಯಣ್ಣ ಯಾನೆ ಸುರೇಶ್ ಶೆಟ್ಟಿ, ಕೋಣ್ಕೇರಮನೆ, ಬವಳಾಡಿ, ನಾಗರಾಜ ಪೂಜಾರಿ ಮೇಲ್ತಾರ್ ಬವಳಾಡಿ, ಸಂತೋಷ್ ಕುಲಾಲ್, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಚೇತನ್ ಶೆಟ್ಟಿ ಕೋವಾಡಿ, ಸಹ ಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ನಿಕಟ ಪೂರ್ವ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರವೀಣ್ ಮೊಗವೀರ ಗಂಗೊಳ್ಳಿ, ಕಾಲೇಜಿನ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಶಿಬಿರಾರ್ಥಿ ಶಬರಿ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ಕಂಬಳ ಅಣಕು ಪ್ರದರ್ಶನ
ರಾಜು ದೇವಾಡಿಗ ಮಿಯ್ಯಾಣಿ ಕಂಚಿಕಾನು, ಉಪಾಧ್ಯಕ್ಷರು, ಕಂಬಳ ಸಮಿತಿ ಬೈಂದೂರು, ಸಂದೇಶ್ ದೇವಾಡಿಗ ಕಂಚಿಕಾನು ಕಾರ್ಯದರ್ಶಿ ಕಂಬಳ ಸಮಿತಿ ಬೈಂದೂರು ಇವರ ನೇತೃತ್ವದಲ್ಲಿ ಕಂಬಳದ ಅಣಕು ಪ್ರದರ್ಶನ ನಡೆಯಿತು.

ಅನೇಕ ಕಂಬಳ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲಗೆ ವಿಭಾಗದಲ್ಲಿ ಬಹುಮಾನ ಪಡೆದ ದಿವಂಗತ ಸುಕ್ರ ಪೂಜಾರಿಯವರ ಕೋಣಗಳು ಅಣಕು ಪ್ರದರ್ಶನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

Call us

Leave a Reply

Your email address will not be published. Required fields are marked *

1 × four =