ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಒಂದು ವರ್ಷದಿಂದ ತಾಲೂಕು ಆಸ್ಪತ್ರೆ ಕುರಿತು ಪ್ರಶ್ನೆ ಕೇಳುತ್ತಿದ್ದರೂ, ಉತ್ತರಿಸಬೇಕಾದ ಜಿಲ್ಲಾ ಆರೋಗ್ಯಾಧಿಕಾರಿ ಸಭೆಗೆ ಬಂದಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿ ಸಭೆಗೆ ಹಾಜರಾಗದೆ ತಾಪಂ ಸದಸ್ಯರ ಕಡೆಗಣಿಸಿದ್ದಾರೆ. ಸಭೆಗೆ ಬಾರದ ಜಿಲ್ಲಾ ಆರೋಗ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ನಿರ್ಣಯ ಮಾಡಿ, ಜಿಲ್ಲಾಧಿಕಾರಿ, ಜಿಪಂ ಸಿಎಸ್, ಆರೋಗ್ಯ ಸಚಿವರು ಮತ್ತು ಸರ್ಕಾರಕ್ಕೆ ನಿರ್ಣಯ ಪ್ರತಿ ಕಳುಹಿಸಿಕೊಡುವಂತೆ ತಾಲೂಕು ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.
ಕುಂದಾಪುರ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ 22ನೇ ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯ ಕರಣ್ ಪೂಜಾರಿ ಮಾತನಾಡಿ, ಕಳೆದ ಒಂದು ವರ್ಷದಿಂದ ತಾಲೂಕು ಪಂಚಾಯಿತಿ ಸಮಾನ್ಯ ಸಭೆಯಲ್ಲಿ ಕುಂದಾಪುರ ತಾಲೂಕು ಆಸ್ಪತ್ರೆ ಕುರಿತು ಕೇಳಲಾದ ಪ್ರಶ್ನೆಗೆ ಜಿಲ್ಲಾ ಆರೋಗ್ಯಾಧಿಕಾರಿ ಸಭೆಗೆ ಉತ್ತರಿಸುವಂತೆ 143ರ ಪ್ರಕಾರ ಕೇಳಲಾಗಿದ್ದರೂ ಸಭೆಗೆ ಬಂದಿಲ್ಲ. ಈ ಬಗ್ಗೆ ಕಾನೂನು ಕ್ರಮ ತಗೆದುಕೊಳ್ಳಲು ನಿರ್ಣಯ ಮಾಡುವಂತೆ ಒತ್ತಾಯಿಸಿದರು.
ತಾಪಂ ಸದಸ್ಯೆ ಜ್ಯೂತಿ ಪುತ್ರನ್ ಮಾತನಾಡಿ, ಸಭೆಗೆ ಆರೋಗ್ಯಾಧಿಕಾರಿ ಹಾಜರಾಗಿ ಉತ್ತರಿಸಬೇಕಿದ್ದರೂ ಕಳೆದ ಒಂದು ವರ್ಷದಿಂದ ಅವರ ಸಭೆಗೆ ಕರೆಸಲು ಆಗಲಿಲ್ಲ. ತಾಪಂ ಸಮಾನ್ಯ ಸಭೆಗೆ ಹಾಗೂ ತಾಪಂ ಸದಸ್ಯರ ಅವಮಾನಿಸಿದ ಜಿಲ್ಲಾ ಆಗೋಗ್ಯಾಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಶಿಪಾರಸ್ಸು ಮಾಡವಂತೆ ಒತ್ತಾಯಿಸಿದ್ದು, ಪೂರಕವಾಗಿ ಮಾತನಾಡಿದ ವಾಸುದೇವ ಪೈ ಜಿಲ್ಲಾ ಆರೋಗ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದು, ಅಧ್ಯಕ್ಷೆ ಇಂದಿರಾ ಶೆಟ್ಟಿ ಜಿಲ್ಲಾ ಆರೋಗ್ಯಾಧಿಕಾರಿ ವಿರುದ್ಧ ನಿರ್ಣಯ ಮಾಡಿ ಸರ್ಕಾರ ಹಾಗೂ ಸಂಬಂಧಪಟ್ಟವರಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.
ತಲ್ಲೂರು ಗ್ರಾಮದಲ್ಲಿ ಹೌಸ್ ಸೈಟ್ ವಿತರಣೆ ಮಾಡಿದ್ದು, ಹಿಂದೆ ಇದ್ದವರು ಸೈಟ್ ಬಿಟ್ಟಿದ್ದು, ಬೇರೊಬ್ಬರು ಸೈಟ್ನಲ್ಲಿ ವಾಸಮಾಡುತ್ತಿದ್ದಾರೆ. ಹಲವು ವರ್ಷದಿಂದ ಸೈಟ್ನಲ್ಲಿ ವಾಸ ಮಾಡುವವರಿಗೆ ಜಾಗದ ಹಕ್ಕುಪತ್ರ ನೀಡುವಂತೆ ಕರಣ್ ಪೂಜಾರಿ ಒತ್ತಾಯಿಸಿದ್ದು, ಪ್ರೊಸೀಜರ್ ಪ್ರಕಾರ ಸೈಟ್ ನೀಡಲಾಗುತ್ತಿದ್ದು. ಅರಣ್ಯ ಇಲಾಖೆಗೆ ಕ್ಲಿಯರೆನ್ಸಿಗೆ ಕೇಳುಲಾಗಿದೆ. ಎಲ್ಲಾ ಸಾಧ್ಯತೆಗಳ ಪರಿಶೀಲಿಸಿ ಸೈಟ್ ದಾಖಲೆ ನೀಡಲಾಗುತ್ತದೆ ಎಂದಿದರು. ಸದಸ್ಯರಾದ ನಾರಾಯಣ ಗುಜ್ಜಾಡಿ, ಜ್ಯೋತಿ ಪುತ್ರನ್ ತಾಲೂಕುನಲ್ಲಿ ಖಾಲಿ ಸೈಟ್ನಲ್ಲಿ ಕೂತವರಿಗೆ ದಾಖಲೆ ನೀಡುವಂತೆ ಒತ್ತಾಯಿಸಿದರು.
ತಾಲೂಕು ಪಂಚಾಯಿತಿ ಸದಸ್ಯರು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಗೆದ್ದವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು 15 ದಿನದ ಗಡವು ನೀಡಿದ್ದು, ಚುನಾವಣೆ ಆದ ನಂತರದ 15 ದಿನವೋ ಫಲಿತಾಂಶ ಬಂದ ನಂತರದ 15ದಿನವೋ ಎನ್ನುವ ಸ್ಪಷ್ಟತೆಯಿಲ್ಲ. ತಾಲೂಕು ಪಂಚಾಯಿತಿ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲದಿದ್ದರೆ ಹೊರೆ ಹೋಗುತ್ತೇನೆ ಎಂದು ತಾಪಂ ಸದಸ್ಯ ಉಮೇಶ್ ಶೆಟ್ಟಿ ಕಲ್ಗಿದ್ದೆ ತಿಳಿಸಿದ್ದು, ತಾಪಂ ಸ್ಥಾನಕ್ಕೆ ರಾಜಿನಾಮೆ ಕೊಡಲು ಇನ್ನು ಮೂರುದಿನ ಅವಕಾಶ ಇರುವುದರಿಂದ ಸಭೆಯಲ್ಲಿ ಪಾಲ್ಗೊಳ್ಳಲು ಅಧ್ಯಕ್ಷರು ಅವಕಾಶ ಮಾಡಿಕೊಟ್ಟರು.
ಕುಂದಾಪುರ ತಾಪಂ ಅಧ್ಯಕ್ಷ ಇಂದಿರಾ ಶೆಟ್ಟಿ ಹರ್ಕೂರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಮ್ಕಿಶನ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ಬಿ.ಪೈ, ಇಒ ಕೇಶವ ಶೆಟ್ಟಿಗಾರ್ ಇದ್ದರು. ಸಭೆ ಆರಂಭಕ್ಕೂ ಮುನ್ನಾ ಇತ್ತೀಚೆಗೆ ನಿಧನರಾದ ಮಾಜಿ ತಾಪಂ ಅಧ್ಯಕ್ಷ ಕಾಪು ದಿನಕರ ಶೆಟ್ಟಿ, ತಾಪಂ ಮಾಜಿ ಸದಸ್ಯ ಹದ್ದೂರು ರಾಜೀವ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ತಾಸೀಲ್ದಾರ್ ಕಚೇರಿ ಎದುರು ಧರಣಿ
ಗಂಗೊಳ್ಳಿ ಮಡಿವಾಳ ಕೆರೆ ಹಾಗೂ ಚೋಳಕೆರೆ ಒತ್ತುವರಿಯಾಗಿದ್ದು, ಒತ್ತುವರಿ ಇನ್ನು ತೆರವು ಮಾಡಿಲ್ಲ. ಒಮ್ಮೆ ಒತ್ತುವರಿ ಆಗಿದೆ ಎಂದು ಒಪ್ಪಿಕೊಂಡರೂ ಮತ್ತೊಮ್ಮೆ ಒತ್ತುವರಿ ಆಗಿಲ್ಲ ಎಂದು ಷರಾ ಬರೆಯಲಾಗುತ್ತದೆ. ಕೆರೆ ಒತ್ತುವರಿ ಮಾಡಿ ರಸ್ತೆ ನಿರ್ಮಾಣ ಮಾಡಲಾಗಿದೆ. ಎಂದು ಒತ್ತುವರಿ ತೆರವು
ಮಾಡಿತ್ತೀರಿ ಎಂದು ಸುರೇಂದ್ರ ಖಾರ್ವಿ ತಹಸೀಲ್ದಾರ್ ಅವರ ಪ್ರಶ್ನಿಸಿದರು. ಉತ್ತರಿಸಿದ ತಹಸೀಲ್ದಾರ್ ಆನಂದಪ್ಪ ಹೆಚ್.ನಾಯ್ಕ್, ಒಂದು ಕೆರೆ ಒತ್ತುವರಿಯಾಗಿದ್ದು, ಅದನ್ನು ತೆರವು ಮಾಡುವಂತೆ ನೊಟೀಸ್ ನೀಡಿದ್ದು, ಒತ್ತುವರಿ ತೆರವು ಮಾಡುವುದಾಗಿ ಒತ್ತುವರಿದಾರರು ತಿಳಿಸಿದ್ದಾರೆ. ಮತ್ತೊಂದು ಕೆರೆ
ಒತ್ತುವರಿ ಆಗಿಲ್ಲ ಎಂದರು. ಎರಡೂ ಕೆರೆ ಒತ್ತುವರಿಯಾಗಿದೆ. ಆದರೆ ಒತ್ತುವರಿ ಆಗಿಲ್ಲ ಎನ್ನೋದು ಸರಿಯಲ್ಲ. ಹೀಗೆ ಒತ್ತುವರಿ ಮಾಡಿಕೊಳ್ಳುತ್ತಿರುವುದ ತೆರವು ಮಾಡದಿದ್ದರೆ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಒತ್ತುವರಿದಾರರಿಗೆ ಮತ್ತೊಮ್ಮೆ ನೊಟೀಸ್ ನೀಡಿ ಒತ್ತುವರಿ ತೆರವು ಮಾಡುವುದಾಗಿ ತಹಸೀಲ್ದಾರ್ ಭರವಸೆ ನೀಡಿದರು.