ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ರೋಟರಿ ವಲಯ 1ರ ಎಲ್ಲಾ 8 ರೋಟರಿ ಕಬ್ಲ್‌ಗಳ ವತಿಯಿಂದ ಗ್ರಾಮೀಣ ಜನರ ತುರ್ತು ಆರೋಗ್ಯ ಸೇವೆಗೆ ಪೂರಕವಾಗಿ ಅಗತ್ಯವಿರುವ ಪಲ್ಸ್ ಆಕ್ಸಿ ಮಿಟರ್, ವೈದ್ಯಕೀಯ ಉಪಕರಣಗಳನ್ನು ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯತೆಗೆ ಅನುಗುಣವಾಗಿ ಹಸ್ತಾಂತರಿಸಲಾಯಿತು.
ಕುಂದಾಪುರದ ತಾಲೂಕು ಆರೋಗ್ಯ ಕೇಂದ್ರದಲ್ಲಿ ಮಾಜಿ ರೋಟರಿ ಜಿಲ್ಲಾ ಗವರ್ನರ್ ಅಭಿನಂದನೆ ಶೆಟ್ಟಿ ತಾಲೂಕು ವೈದ್ಯಾಧಿಕಾರಿಗಳಾದ ಹಾಗೂ ರೋಟರಿ ವಲಯ 1ರ ಸಹಾಯಕ ಗವರ್ನರ್ ಡಾಕ್ಟರ್ ನಾಗಭೂಷಣ್ ಉಡುಪ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ರೋಟರಿ ವಲಯ 1ರ ನಿಯುಕ್ತ ಸಹಾಯಕ ಗವರ್ನರ್ ಜಯಪ್ರಕಾಶ್ ಶೆಟ್ಟಿ ಮತ್ತು ರೋಟರಿ ವಲಯ 1 ರ ಪದಾಧಿಕಾರಿಗಳಾದ ಕೆಕೆ. ಕಾಂಚನ್, ಡಾಕ್ಟರ್ ಸಂದೀಪ್ ಶೆಟ್ಟಿ, ಡಾಕ್ಟರ್ ರಾಜಾರಾಮ್ ಶೆಟ್ಟಿ ಹಾಗೂ ಗಣೇಶ್ ಕಾರ್ಯದರ್ಶಿಗಳು ರೋಟರಿ ಕ್ಲಬ್ ಕುಂದಾಪುರ ಸನ್ ರೈಸ್ ಉಪಸ್ಥಿತರಿದ್ದರು.