ಕುಂದಾಪುರ ತಾಲೂಕು ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಫೆ. ೨೩ ರಂದು ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಾಲಯದ ಆವರಣದಲ್ಲಿ ನಡೆಯುವ ಕುಂದಾಪುರ ತಾಲೂಕು ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ವಿಶ್ರಾಂತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಸೋಮವಾರ ಬಿಡುಗಡೆ ಮಾಡಿ, ಪರಿಷತ್ ಘಟಕದ ಯುವ ಮತ್ತು ಉತ್ಸಾಹಿ ಅಧ್ಯಕ್ಷ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಕಿರಿಮಂಜೇಶ್ವರ ಪರಿಸರದ ಸಾಹಿತ್ಯಾಭಿಮಾನಿಗಳ ಸಹಕಾರದೊಂದಿಗೆ ಸಮ್ಮೇಳನವು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ತಾಲೂಕು ಕಸಾಪ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಬೈಂದೂರು ಸಮ್ಮೇಳನದ ರೂಪುರೇಷೆಗಳ ಮಾಹಿತಿ ನೀಡಿ, ಯಶಸ್ಸಿಗೆ ಎಲ್ಲ ಹೋಬಳಿ ಘಟಕ ಮತ್ತು ಸ್ಥಳೀಯರ ನೆರವು ಕೋರಿದರು. ಕಸಾಪ ಗೌರವ ಕಾರ್ಯದರ್ಶಿ ಡಾ. ಕಿಶೋರಕುಮಾರ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಗೌ. ಕೋಶಾಧ್ಯಕ್ಷ ರವೀಂದ್ರ ಎಚ್, ಅಗಸ್ತ್ಯೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಪರಶುರಾಮ್, ಸ್ಥಳೀಯ ಪ್ರಮುಖರಾದ ಕೆ. ಸದಾಶಿವ ಶ್ಯಾನುಭಾಗ್, ಎಸ್. ಎಸ್. ಭಗವತಿ, ಕೆ. ಬಾಲಕೃಷ್ಣ ಶ್ಯಾನುಭೋಗ್, ಕೆ. ವಾಸುದೇವ ಕಾರಂತ, ಬೈಂದೂರು ಹೋಬಳಿ ಕಸಾಪ ಅಧ್ಯಕ್ಷ ಗಣಪತಿ ಹೋಬಳಿದಾರ, ಸುಬ್ರಹ್ಮಣ್ಯ ಜಿ. ಉಪ್ಪುಂದ, ಸರ್ವೋತ್ತಮ ಭಟ್, ಮಹಿಳಾ ವಿವಿದ್ದೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಹೊಳ್ಳ, ಕೆ. ಎಂ. ಇರ್ಷಾದ್, ರತನ್ ಬಿಜೂರ್, ಮಂಜುನಾಥ ಉಡುಪ, ವಾಸುದೇವ ನಾವಡ, ರವಿ ಕಟ್ಕೆರೆ, ವೀಣಾ ಶ್ಯಾನುಭೋಗ್, ಪ್ರಕಾಶ ಹೆಬ್ಬಾರ್, ಅನ್ನಪೂರ್ಣ ಉಡುಪ, ಮಂಜುನಾಥ ದೇವಾಡಿಗ, ಅರುಣಕುಮಾರ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

Click Here

Call us

Call us

Visit Now

 

Click here

Click Here

Call us

Call us

Leave a Reply

Your email address will not be published. Required fields are marked *

5 × 2 =