ಕುಂದಾಪುರ ತಾಲೂಕು ಸ್ಥಾನಿಕ ಬ್ರಾಹ್ಮಣರ ಸಂಘದ ವಾರ್ಷಿಕೋತ್ಸವ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕುಂದಾಪುರ ತಾಲೂಕು ಸ್ಥಾನಿಕ ಬ್ರಾಹ್ಮಣರ ಸಂಘದ 27ನೇ ವಾರ್ಷಿಕೋತ್ಸವ ಮಟ್ನಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನ ನಾಯ್ಕನಕಟ್ಟೆ ಕೆರ್ಗಾಲ್‌ನಲ್ಲಿ ಜರುಗಿತು.

Call us

Click Here

Click here

Click Here

Call us

Visit Now

Click here

ಅಧ್ಯಕ್ಷರಾದ ಎಮ್. ಸತ್ಯನಾರಾಯಣ ಹೆಬ್ಬಾರ್ ಮಾತನಾಡಿ ಸಂಘದ ಸದಸ್ಯರೆಲ್ಲರೂ ಪರಸ್ಪರ ಸಹಕರಿಸಿದಾಗ ಮಾತ್ರ ಉತ್ತಮ ರೀತಿ ಸಂಘಟನೆ ಬೆಳೆಯಲು ಸಾಧ್ಯ ಎಂಬುದಾಗಿ ತಿಳಿಸಿದರು.

ಆನಂದ ರಾವ್ ಹೊಸ್ಕೋಟೆ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. 2021ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ ಪಡೆದವರ ಸನ್ಮಾನದಲ್ಲಿ ಎಮ್. ಸತ್ಯನಾರಾಯಣ ಹೆಬ್ಬಾರ್ ಮರೂರು. ಕೃಷ್ಣಮೂರ್ತಿ, ಪಿ.ಕೆ ಕೋಟೇಶ್ವರ, ಉಷಾ ಶೀಧರ ಹೆಬ್ಬಾರ್, ಅಲ್ಬಾಡಿ ಮಂಜುನಾಥ ಹೆಬ್ಬಾರ್ ಇವರುಗಳನ್ನು ಸನ್ಮಾನಿಸಲಾಯಿತು. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಗರತ್ನ ಹೆಬ್ಬಾರ್ ಅಬ್ಲಾಕಟ್ಟೆ ಸೂರಾಲು ಶ್ರೀ ಗುರುಪ್ರಸಾದ ರಾವ್ ಕಮಲಶಿಲೆ, ವಿಜಯ ಎಸ್. ರಾವ್ ಹೆರಂಜಾಲು, ಲೋಕೇಶ ಶ್ಯಾನುಬೋಗ್ ಇವರುಗಳನ್ನು ಸನ್ಮಾನಿಸಲಾಯಿತು. ಉದರಕುಮಾರ್ ಹೆಬ್ಬಾರ್ ಮ್ಯಾನೇಜಿಂಗ್ ಡೈರೆಕ್ಟ್ರರ್ ಕ್ರೆಡಿಟ್ ಗ್ರಾಮೀಣ ಲಿ. ಬೆಂಗಳೂರು ಇವರು ಕೊಡ ಮಾಡಿದ ವಿದ್ಯಾರ್ಥಿತಿ. ವೇತನವನ್ನು ವಿತರಿಸಲಾಯಿತು. ಉಮೇಶ ಶ್ಯಾನುಭೋಗ್, ಮೂಕಾಂಬಿಕಾ ಟಿಂಬರ‍್ಸ್ & ಮೂಕಾಂಬಿಕಾ ವುಡ್ ಇಂಡಸ್ಟ್ರೀಸ್ ಕಿರಿಮಂಜೇಶ್ಬರ ಇವರ ಕೊಡ ಮಾಡಿದ ಪ್ರತಿಭಾಪುರಸ್ಕಾರವನ್ನು ವಿತರಿಸಲಾಯಿತು. ೨೫ ವರ್ಷ ವೈವಾಹಿಕ ಜೀವನ ಪೂರೈಸಿದ ಮೂವರು ದಂಪತಿಗಳನ್ನು ಜಗಧೀಶ ರಾವ್ ಹೆಸ್ಕೋಟೆ, ರಮಾನಂದ ಹೆಗ್ಗಡೆ ಇಳಲಿ, ಹೆಚ್.ಎನ್ ಸುರೇಶ ದಂಪತಿಗಳನ್ನ ಸಾಂಪ್ರಾದಾಯಿಕವಾಗಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಡಾ. ಸತ್ಯನಾರಾಯಣ ರಾವ್ ವೈಧ್ಯಾಧಿಕಾರಿಗಳು ಸರ್ಕಾರಿ ಚಿಕಿತ್ಸಾಲಯ ನಾರ್ವೆ ಕೊಪ್ಪ ಇವರು ಮಾತನಾಡಿ ನಮ್ಮ ಸಂಪಾದನೆಯಲ್ಲಿ ಸ್ವಲ್ವವನ್ನಾದರು ಸಮಾಜಕ್ಕೆ ದಾನಮಾಡಬೇಕು ಎಂದು ತಿಳಿಸಿದರು. ನಾನು ಕೂಡ ಸಂಘಕ್ಕೆ ಮುಂದಿನ ದಿನಗಳ
ಲ್ಲಿ ನೆರವನ್ನು ನೀಡುತ್ತೇನೆಂದು ತಿಳಿಸಿದರು. ಕಾರ್ಯಕ್ರಮದ ಮೊದಲು ಸುಮಾರು 2 ಗಂಟೆಗಳ ಕಾಲ ಸಂಗೀತ, ಭರತನಾಟ್ಯ, ಭಜನೆ ಇತ್ಯಾದಿಗಳು ಸಂಘದ ಸದಸ್ಯರಿಂದ ಏರ್ಪಡಿಸಲಾಯಿತು. ಆತಿಥ್ಯ ವಹಿಸಿದ್ದ ಕೃಷ್ಣ ಗೋಪಾಲ ಹೆಬ್ಬಾರ್, ಆನಣದರಾವ್ ಹೊಸ್ಕೋಟೆ , ಗಣೇಶ ಹೆಬ್ಬಾರದ ಕುಂಛೇಸಿ ಇವರನ್ನು ಸಂಘದ ವತಿಯಿಂದ ಸನ್ಮಾಸಲಾಯಿತು.

ಅದೇ ವೇದಿಕೆಯಲ್ಲಿ ನಾಗರತ್ನ ಹೆಬ್ಬಾರ್ ಅಬ್ಲಕಟ್ಟೆ ಇವರು ಬರೆದ ನಗುವಿನ ಸಂಚಿ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಸುಮಾ ಅರುಂ ಶ್ಯಾನುಭೋಗ್ ಮತ್ತು ವಾಣಿ ಜಗದೀಶ ರಾವ್ ಪಾರ್ಥಿಸಿದರು. ಲಕ್ಷೀನಾರಾಯಣ ರಾವ್ ಸ್ವಾಗತಿಸಿದರು. ವೇದಿಕೆಯಲ್ಲಿ ಮಹಿಳಾ ಸಂಘದ ಗೌರವಾಧ್ಯಕ್ಷರಾದ ಪುಪ್ಪಲತಾ ಶ್ಯಾನುಭೋಗ್, ಕೃಷ್ಣಗೋಪಾಲ ಹೆಬ್ಬಾರ್ ಹಾಗೂ ಮಹಿಳಾ ಸಂಘದ ಅಧ್ಯಕ್ಷರಾದ ವಾಣಿ ಸುಭಾಶ್ಚಂದ್ರ ಬಳ್ಳೂರು ಉಪಸ್ಥಿತರಿದ್ದರು. ಕಾರ್ಯದರ್ಶಿಗಳಾದ ಸುಭಾಶ್ಚಂದ್ರ ಬಳ್ಳೂರು ವರದಿ ವಾಚಿಸಿದರು. ಅರುಣ ಕುಮಾರ್ ಶ್ಯಾನುಭೋಗ್ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಭಾ ಕಾರ್ಯಕ್ರಮವನ್ನು ಸುಬ್ರಹ್ಯಣ್ಯ ರಾವ್ ಇವರು ನಿರೂಪಿಸಿದರು. ಜಗದೀಶ ರಾವ್ ಹೊಸ್ಕೋಟ್ ಪ್ರಕಾಶರಾವ ಬೈಂದೂರು ಜಯಪ್ರಕಾಶ ಉಳ್ಳೂರು, ಸರೋಜ ಮರವಂತೆ ಸನ್ಮಾನಿತರ ಪರಿಚಯ ಮಾಡಿದರು. ಸ್ಮಿತಾ ಪ್ರಸಾದ & ಪೂರ್ಣಿಮಾ ಕಾರಬೈಲ್ ಸಹಕರಿಸಿದರು ಶ್ರೀ ದಯಾನಂದರಾವ್ ಶಂಕರನಾರಾಯಣ ಇವರು ಧನ್ಯವಾದ ಸಲ್ಲಿಸಿದರು.

Call us

Leave a Reply

Your email address will not be published. Required fields are marked *

three − two =