ಕುಂದಾಪುರ ತಾಲೂಕು ಹವ್ಯಕ ಸಭಾ ವಾರ್ಷಿಕೋತ್ಸವ, ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ಕುಂದಾಪುರ ತಾಲೂಕು ಹವ್ಯಕ ಸಭಾದ ೧೭ನೇಯ ವಾರ್ಷಿಕೋತ್ಸವ ಮತ್ತು ಸನ್ಮಾನ ಸಮಾರಂಭವು ಉಪ್ಪುಂದ ಶ್ರೀ ರಾಘವೆಂದ್ರ ಸ್ವಾಮೀ ಮಠದಲ್ಲಿ ಇತ್ತೀಚಿಗೆ ಜರಗಿತು.

ಉಡುಪಿ ಜಿಲ್ಲಾ ಹವ್ಯಕ ಪರಿಷತ್ತಿನ ಉಪಧ್ಯಕ್ಷರಾದ ಗುಣವಂತೇಶ್ವರ ಭಟ್ ಮಾತನಾಡಿ ಸಂಘಟನೆಗಳು ಸಮಾಜದ ಬೆಳವಣೆಗೆಗೆ ಪೂರಕವಾಗಬೇಕು ಹಾಗೂ ಎಲ್ಲರನ್ನೂ ತಲಪುವಂತರಾಗಬೇಕು ಮತು ನಿರಂತರತೆಯನ್ನು ಕಾಯ್ದು ಕೊಳ್ಳಬೇಕಾಗಿದೆ. ಸಂಘಟನೆಯ ಆರ್ಥಿಕ ಸದೃಡತೆಗಾಗಿ ಪ್ರತಿಯೊಬ್ಬರಿಗೆ ತಮ್ಮ ದುಡಿಮೆಯ ಒಂದು ಪಾಲನ್ನು ಸಮಾಜದ ಕಾರ್ಯಕ್ಕೆ ಮತ್ತು ಧರ್ಮ ಕಾರ್ಯಗಳಿಗೆ ವಿನಿಯೋಗಿಸಬೇಕು ಇದರಿಂದಾಗಿ ಬದುಕು ಸಾರ್ಥಕತೆ ಹೊಂದಲು ಸ್ಯಾಧವಾಗಲಿದೆ ಎಂದು ಹೇಳಿದರು.

ಈ ಸಮಾರಂಭದಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಾಲಯದ ತಂತ್ರಿ ಮತ್ತು ಹಾಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ವೇದಮೂರ್ತಿ ಮಂಜುನಾಥ ಅಡಿಗ ಕೊಲ್ಲೂರು ಮತ್ತು ಪಾಕಶಾಸ್ತ್ರ ಪ್ರವೀಣ ಬೈಂದೂರು ಶ್ರೀಧರ ಭಟ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರದ ಅಂಗವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೨ ಅಂಕಗಳೊಂದಿಗೆ ರಾಜ್ಯಕ್ಕೆ ೪ನೇ ರ‍್ಯಾಂಕ್ ಪಡೆದ ಚಿನ್ಮಯ ವಂಡ್ಸೆ ಹಾಗೂ ೬೦೦ ಕ್ಕೂ ಅಧಿಕ ಅಂಕಗಳಿಸಿದ ಶ್ವೇತಾ ಹೆಬ್ಬಾರ್, ಪ್ರಣವ ಶಂಕರ ಭಟ್, ಪೂಜಾ ಗುರುಮೂರ್ತಿ, ಮಾನಸ ಅಡಿಗ, ಸುಷ್ಮಾ ಹೆರಿಗುಡಿ ಅವರನ್ನು ಪಿಯು ವಿಭಾಗದಲ್ಲಿ ರಂಜನು ಬೈಂದೂರು, ಕೀರ್ತಿ ಬಿಜೂರು, ಅಂಬಿಕಾ ಕೊಲ್ಲೂರು, ಇವರುಗಳನ್ನು ಪ್ರಶಸ್ತಿ ಪತ್ರ, ಸ್ಮರಣಿಕೆ, ನಗದು ನೀಡಿ ಗೌರವಿಸಲಾಯಿತು.

ಹವ್ಯಕ ಸಭಾ ಅಧ್ಯಕ್ಷ ನಾಗರಾಜ್ ಭಟ್ ಮಕ್ಕಿದೇವಸ್ತಾನ ಸಮಾರಮಭದ ಅಧ್ಯಕ್ಷತೆ ವಹಿಸಿದ್ದರು, ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಳದ ಧರ್ಮದರ್ಶಿ ಬಾಲಚಂದ್ರ ಭಟ್, ಕೋಶಾಧಿಕಾರಿ ಶ್ರೀಧರ ಭಟ್ ಕಾರ್ಯದರ್ಶಿ ಯು. ಸಂದೇಶ್ ಭಟ್ ವೇದಿಕೆಯಲ್ಲಿದ್ದರು.

ಕೋಶಾಧಿಕಾರಿ ಶ್ರೀಧರ್ ಭಟ್ ಆಯ ವ್ಯಯ ವಾಚಿಸಿದರು, ನಿವೃತ್ತ ಬ್ಯಾಂಕ್ ಅಧಿಕಾರಿ ಯು. ವೆಂಕಟರಮಣ ಭಟ್ ಸನ್ಮಾನಿತರನ್ನು ಪರಿಚಯಿಸಿದರು, ವೇದ ಮೂರ್ತಿ ತಿರುಮಲೇರ್ಶವರ ಭಟ್ ಪ್ರಾರ್ಥಿಸಿದರಿ, ಕಾರ್ಯದರ್ಶಿ ಯು. ಸಂದೇಶ್ ಭಟ್ ವರದಿ ಮಂಡಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

12 + 18 =