ಕುಂದಾಪುರ : ದೇವರಾಜು ಅರಸು ಪುಣ್ಯಸ್ಮರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಇಲ್ಲಿನ ಕಾಂಗ್ರೆಸ್ ಕಛೇರಿಯಲ್ಲಿ ದೇವರಾಜು ಅರಸು ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ಮಾಣಿ ಗೋಪಾಲ್ ಮಾತನಾಡಿ ಉಳುವವನೇ ಹೊಲದೊಡೆಯ ಘೋಷಣೆಯ ಮೂಲಕ ಭೂಸುಧಾರಣೆ ಮಸೂದೆ ಜಾರಿ ಮಾಡಿ ಜನಸಾಮಾನ್ಯರ ಬಾಳು ಹಸನಾಗಿಸಿದ ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ ದಿ. ದೇವರಾಜು ಅರಸುರವರು ಈ ನಾಡಿ ಜನಜೀವನದ ಚಿತ್ರಣವನ್ನೇ ಬದಲಾಯಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಹೊಟ್ಟೆಗೆ ಹಿಟ್ಟಿಲ್ಲದ ಜನರಿಗೆ ಕೃಷಿ ಭೂಮಿಯನ್ನು ನೀಡುವ ಮೂಲಕ ಆ ವರ್ಗದ ಜನರ ಪೀಳಿಗೆಯನ್ನು ಸಮಾಜದಲ್ಲಿ ಉನ್ನತ ಮಟ್ಟಕ್ಕೇರಿಸಿದ್ದಾರೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ವಾಗ್ಮಿ, ಚಿಂತಕ, ಉಪನ್ಯಾಸಕ ಜಯಪ್ರಕಾಶ್ ಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಕಾಂಗ್ರೆಸ್ ಐಟಿಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಚಂದ್ರ ಅಮೀನ್, ಕೇಶವ ಭಟ್, ಮುಖಂಡರಾದ ಶಿವಾನಂದ ಕೆ., ಅಶ್ವತ್ ಕುಮಾರ್, ರೇವತಿ ಶೆಡ್ತಿ, ಗೀತಾ ಶಂಬು ಪೂಜಾರಿ, ವಾಣಿ ಶೆಡ್ತಿ, ಚಂದ್ರಕಾಂತ ನಾಯ್ಕ, ಅರುಣ ಕುಮಾರ್ ಕೆ.ಪಿ, ವಿಠಲ ಕಾಂಚನ್, ಮುಂತಾದವರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

20 − nineteen =