ಕುಂದಾಪುರ: ನೇಣು ಬಿಗಿದ ಸ್ಥಿತಿಯಲ್ಲಿ ಹೋಟೆಲ್ ಕಾರ್ಮಿಕನ ಮೃತದೇಹ ಪತ್ತೆ

Call us

Call us

Click here

Click Here

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ
: ಪಟ್ಟಣದ ಹೋಟೆಲ್ ಒಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಯುವಕನೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಮುದೂರು ಸಮೀಪದ ಬಸ್ರಿಬೇರು ನಿವಾಸಿ ಪ್ರಶಾಂತ್ (19) ಮೃತ ದುರ್ದೈವಿ. ಮಗನ ಸಾವಿನ ಬಗ್ಗೆ ಪೋಷಕರು ಶಂಕೆ ವ್ಯಕ್ತಪಡಿಸಿದ್ದು, ಇದು ಆತ್ಮಹತ್ಯೆಯಲ್ಲ ಎಂದಿದ್ದಾರೆ.

Call us

Call us

ಬಸ್ರಿಬೇರಿನ ಲಚ್ಚು ನಾಯ್ಕ್ – ಗೌರಿ ದಂಪತಿಗಳ ಮೂವರು ಮಕ್ಕಳಲ್ಲಿ ಕೊನೆಯವನಾದ ಪ್ರಶಾಂತ್ ಎಸ್.ಎಸ್.ಎಲ್.ಸಿ. ಬಳಿಕ ಹೋಟೆಲ್ ಕೆಲಸಕ್ಕೆ ಸೇರಿದ್ದ. ಅ.20 ಬುಧವಾರ ಸಂಜೆ ಮನೆಯವರಿಗೆ ಕರೆ ಮಾಡಿ ಲವಲವಿಕೆಯಿಂದಲೇ ಮಾತನಾಡಿದ್ದಲ್ಲದೇ, ಆತನ ಸಹೋದರನ ಖಾತೆಗೆ 5000 ಹಣ ಜಮಾ ಮಾಡಿದ್ದ. ಮುಂದಿನ ತಿಂಗಳು ಮನೆಗೆ ಬರುವುದಾಗಿ ಈ ವೇಳೆ ತಿಳಿಸಿದ್ದ ಎನ್ನಲಾಗಿದೆ.

ಗುರುವಾರ ಮುಂಜಾನೆ ಹೋಟೆಲ್ ಸಿಬ್ಬಂದಿ ಮನೆಯವರಿಗೆ ಕರೆ ಮಾಡಿ ಪ್ರಶಾಂತ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಪೋಷಕರು, ಸಂಬಂಧಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಇನ್ನು ಮಧ್ಯರಾತ್ರಿ ವೇಳೆ ಯುವಕ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದು‘ ಏನು ಇಲ್ಲದವನ ಮುಂದೆ ಎಲ್ಲಾ ಇದ್ದವನ ಒಂದು ಆಟ’ ಎಂದು ಬರೆದುಕೊಂಡಿದ್ದಾನೆ. ಆತ ಆತ್ಮಹತ್ಯೆ ಮಾಡಿಕೊಳ್ಳುವ ಯುವಕನಲ್ಲ. ಏನೋ ನಡೆದಿದೆ ಎನ್ನುವ ಅನುಮಾನವಿದೆ. ಪೊಲೀಸರು ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಪ್ರಶಾಂತ್ ಪೋಷಕರು ಕಣ್ಣೀರಿಟ್ಟಿದ್ದಾರೆ. ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆ ಮಣಿಪಾಲ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ಬಳಿಕ ನಿಜಾಂಶ ಹೊರಬೀಳಲಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಪೋಷಕರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆ ಮಣಿಪಾಲ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ರವಾನಿಸಲಾಗಿದೆ.

Leave a Reply

Your email address will not be published. Required fields are marked *

3 − one =