ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಮೋಹನ ಸಾರಂಗ್: ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಇಲ್ಲಿನ ಕಲೈಕಾರ್ ಮಠ ಶ್ರೀ ನಗರ ಮಹಾಕಾಳಿ ಅಮ್ಮನವರ ಮತ್ತು ಶ್ರೀ ಕಲ್ಲುಕುಟ್ಟಿಗ ದೇವಸ್ಥಾನದ ಶ್ರೀದೇವರ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಂದರ್ಭದಲ್ಲಿ ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಮೋಹನ ಸಾರಂಗ್ ಅವರನ್ನು ದೇವಸ್ಥಾನದ ಶ್ರೀ ವರಮಹಾಲಕ್ಷ್ಮೀ ಮಹಿಳಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಸರಸ್ವತಿ ಕಲೈಕಾರ್ ಅವರು ವಸಂತಿ ಮೋಹನ ಸಾರಂಗ್ ಅವರನ್ನು ಸನ್ಮಾನಿಸಿ ಗೌರವಿಸಿದರು. ದೇವಸ್ಥಾನದ ಆಡಳಿತ ಧರ್ಮದರ್ಶಿ ಜಿ.ಭಾಸ್ಕರ ಕಲೈಕಾರ್, ಅಧ್ಯಕ್ಷ ಕೆ.ಸುಭಾಶ್ ಖಾರ್ವಿ, ಶ್ರೀ ವರಮಹಾಲಕ್ಷ್ಮೀ ಮಹಿಳಾ ಸಮಿತಿ ಅಧ್ಯಕ್ಷೆ ಯಶೋಧ ಕೃಷ್ಣ ಖಾರ್ವಿ, ಸುಮಲತಾ ಮಂಜುನಾಥ ಖಾರ್ವಿ, ಲಲಿತಾ ಮಂಜುನಾಥ ಖಾರ್ವಿ, ಮೀನಾ ಜನಾರ್ದನ ಕಲೈಕಾರ್, ಸಕು ಉದಯ ಜಿ., ಅನನ್ಯ ಖಾರ್ವಿ, ಪ್ರೇಮಾ ಜಿ.ಖಾರ್ವಿ, ರತ್ನಿ ಭಾಸ್ಕರ ಖಾರ್ವಿ, ಲಲಿತಾ ಖಾರ್ವಿ, ಸಾವಿತ್ರಿ ಜನಾರ್ದನ ಖಾರ್ವಿ, ಶೋಭಾ ಕಲೈಕಾರ್, ಜಿ.ನಾಗೇಶ ಕಲೈಕಾರ್, ಕಾಂತು ಮಂಜುನಾಥ ಖಾರ್ವಿ, ಮಡಿಕಲ್ ಜನಾರ್ದನ ಖಾರ್ವಿ, ಮೋಹನ ಸಾರಂಗ್, ಜಗನ್ನಾಥ ಕಲೈಕಾರ್ ಮತ್ತಿತರರು ಉಪಸ್ಥಿತರಿದ್ದರು.ರವಿಕುಮಾರ್ ಗಂಗೊಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

 

Leave a Reply

Your email address will not be published. Required fields are marked *

3 × 2 =