ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆಗಿಂತ ಗೌಜು ಗದ್ದಲವೇ ಹೆಚ್ಚು

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪುರಸಭೆಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಸಾಮಾನ್ಯ ಸಭೆ ಅರಂಭವಾಗುತ್ತಿದ್ದಂತೆ ಗೌಜು ಗದ್ದಲವೂ ಆರಂಭವಾಯಿತು. ವಿರೋಧ ಪಕ್ಷದ ಚಂದ್ರಶೇಖರ ಖಾರ್ವಿ, ಸದಸ್ಯರು ಮಧ್ಯಪಾನ ಮಾಡಿ ಸಭೆಗೆ ಬರುತ್ತಾರೆ ಎಂದು ಹೇಳುವ ಮೂಲಕ ಸದಸ್ಯರ ಅವಮಾನಿಸಿದ್ದಾರೆ. ಅದಕ್ಕೆ ಉಪಾಧ್ಯಕ್ಷರು ಉತ್ತರ ಕೊಡಲಿ ಎಂದು ಒತ್ತಾಯಿಸಿದ್ದು, ಸಾಮಾನ್ಯ ಸಭೆ ನಡೆಯುವಾಗಿ ಎಲ್ಲಾ ಸದಸ್ಯರನ್ನು ಗೌರವದಿಂದ ನೋಡಿಕೊಳ್ಳಲಾಗಿದೆ. ಹೊರಗೆ ನಡೆದ ವಿಷಯಕ್ಕೆ ಸಭೆಯಲ್ಲಿ ಉತ್ತರ ಕೊಡಲು ಬರೋದಿಲ್ಲ ಎಂದು ಉಪಾಧ್ಯಕ್ಷ ರಾಜೇಶ್ ಕಾವೇರಿ ಉತ್ತರ ನಂತರ ಸಭೆಯಲ್ಲಿ ಗೌಜು ಗದ್ದಲ ನಡೆಯಿತು. ಸಭೆಯಲ್ಲಿ ಏನು ನಡೆಯುತ್ತದೆ ಎನ್ನೋದು ಅರ್ಥವಾಗಲಿಲ್ಲ.

Call us

Call us

Visit Now

ಕಳೆದ ಆರು ತಿಂಗಳಿಂದ ನೋಡುತ್ತಿದ್ದೇನೆ ಯಾವುದದಾರೂ ಒಂದು ಕಾರಣ ಹಿಡಿದು ಕೊಂಡು ವಿರೋಧ ಪಕ್ಷದವರು ಗಲಾಟೆ ಮಾಡುವ ಮೂಲಕ ಸಾಮಾನ್ಯ ಸಭೆ ಸಮಯ ಹಾಳಾಗುತ್ತಿದೆ. ಅಜೆಂಡ ಮುಂದಿವರಿಯಲು ಅವಕಾಶ ಮಾಡಿಕೊಡುತ್ತಿಲ್ಲ. ಸದಸ್ಯರು ಎಲ್ಲೋ ನಡೆದ ವಿಷಯ ಹಿಡಿದುಕೊಂಡು ಸದನದಲ್ಲಿ ಪ್ರಶ್ತಾಪಿಸುವುದು ತರವಲ್ಲ. ಸದನದಲ್ಲಿ ಸದಸ್ಯರಿಗೆ ಅಗೌರವ ಆಗಿಲ್ಲ ಎಂದು ಚಂದ್ರಶೇಖರ್ ಖಾರ್ವಿ ಪ್ರಶ್ನೆಗೆ ಅಧ್ಯಕ್ಷರು ಸಮಜಾಯಸಿ ನೀಡಿದರು.

Click Here

Click here

Click Here

Call us

Call us

ಪುರಸಭೆ ಸರಿಹದ್ದಿನಲ್ಲಿ ಕಾಮಗಾರಿಗಳಿಗೆ ಪರವಾನಿಗೆ ಇಲ್ಲಿದ್ದರೂ ಕಾಮಗಾರಿ ನಡೆಯುತ್ತದೆ.ಅಧಿಕಾರಿಗಳ ಕೇಳಿದರೆ ಪರವಾನಿಗೆ ಇದೆ ಎಂದು ಹೇಳುತ್ತಾರೆ. ಅನಧಿಕೃತ ಕಾಮಗಾರಿ ನಡೆಯುವ ಸ್ಥಳಕ್ಕೆ ಅಧ್ಯಕ್ಷರು ಭೇಟಿ ಮಾಡಿ ಪ್ರಶ್ನಿಸಿದರೆ ಅವರಿಗೆ ಅವಮಾನ ಮಾಡಲಾಗುತ್ತದೆ. ಅನಧಿಕೃತ ಕೆಲಸ ನಿಲ್ಲಿಸದಿದ್ದರೆ ರಾಜಿನಾಮೆ ನೀಡಿ ಹೊರ ನಡೆಯುತ್ತೇನೆ. ಅನಧಿಕೃತ ಕಾಮಗಾರಿ ನಿಲ್ಲಿಬೇಕು. ಪುರಸಭೆ ಪರವಾನಿಗೆ ಇಲ್ಲದ ನಡೆಯುತ್ತಿರುವ ಕಾಮಗಾರಿ ನಿಲ್ಲಿಸಲು ನಿರ್ಣಯ ಮಂಡಿಸುವಂತೆ ಸದಸ್ಯೆ ಪುಷ್ಪಾ ಶೇಟ್ ಒತ್ತಾಯಿಸಿದರು.

ಪುರಸಭೆ ಪರಿಸರದಲ್ಲಿ ಮೂರು ಇಲಿ ಜ್ವರ ಪ್ರಕರಣ ಪತ್ತೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಮತ್ತಿಬ್ಬರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಪುರಸಭೆ ಇಲಿಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಏನು ಕ್ರಮ ಕೈಗೊಂಡಿದೆ ಎಂದು ಕುಂದಾಪುರ ಪುರಸಭೆ ಸದಸ್ಯ ಸತೀಶ್ ಶೆಟ್ಟಿ ಪ್ರಶ್ನಿಸಿದರು.

ಕುಂದಾಪುರ ಸರಕಾರಿ ಸಾರ್ವಜನಿಕ ಆಸ್ಪತ್ರೆಯಿಂದ ಪುರಸಭೆಗೆ ಪತ್ರ ಬರೆದು ಪುರಸಭೆ ಹಾಗೂ ಆಸ್ಪತ್ರೆ ಒಟ್ಟಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುವ. ಈ ಬಗ್ಗೆ ಕರಪತ್ರ ವಿತರಿಸಿ, ಜನರಲ್ಲಿ ಇಲಿ ಜ್ವರದ ಮಾಹಿತಿ ನೀಡುವ ಕೆಲಸ ಮಾಡುವ ಸಲಹೆಗೆ ಪುರಸಭೆ ಹೇಗೆ ಸ್ಪಂದಿಸಿದೆ. ಜನರಲ್ಲಿ ಇಲಿ ಜ್ವರದ ಬಗ್ಗೆ ಮೂಡಿಸ ಬೇಕು. ಇಲ್ಲದಿದ್ದರೆ ಅಪಾಯ ಸಂಭವಿಸುವ ಅಯಾಪವಿದೆ ಎಂದು ಅವರು ಎಚ್ಚರಿಸಿದರು.

ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉತ್ತರಿಸಿ, ಆಸ್ಪತ್ರೆಯಿಂದ ಮಾಹಿತಿ ಬಂದಿದೆ. ಅದಕ್ಕೆ ಪೂರಕವಾಗಿ ಸ್ಪಂದಿಸಲಾಗಿದೆ. ಈಗಾಗಲೇ ಪುರಸಭೆಯಲ್ಲಿ ಸ್ವಚ್ಛೆತೆ ಒತ್ತು ನೀಡಿವ ಕೆಲಸ ಆಗಿತ್ತಿದೆ. ಹಾಗೂ ಸೊಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಹಾಗೂ ಸ್ಪ್ರೇ ಮಾಡಲಾಗುತ್ತದೆ. ಸರಕಾರಿ ಆಸ್ಪತ್ರೆ ವೈದಾಧಿಕಾರಿಗಳ ಸಹಕಾರದಲ್ಲಿ ಪುರಸಭೆ ಇಲಿ ಜ್ವರದ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದು ಹೇಳಿದರು.

ಕುಂದಾಪುರ ಪುರಸಭೆ ಅಧ್ಯಕ್ಷ ವಾಸಂತಿ ಮೋಹನ್ ಸಾರಂಗ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜೇಶ್ ಕಾವೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ಗೀತಾ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

Leave a Reply

Your email address will not be published. Required fields are marked *

19 − 12 =