ಕುಂದಾಪುರ: ಬೋರ್ಡ್ ಹೈಸ್ಕೂಲು ಎನ್.ಎಸ್.ಎಸ್. ಘಟಕದ ಆಶ್ರಯದಲ್ಲಿ ಹರ್ ಘರ್ ತಿರಂಗಾ ಮಾಹಿತಿ ಕಾರ್ಯಾಗಾರ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವಿಶ್ವದಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರು ದೇಶದಲ್ಲಿ ಹರ್ ಘರ್ ತಿರಂಗಾ ಕಾರ್ಯಕ್ರಮ ನಡೆಸುವುದು ನಮ್ಮ ಆತ್ಮ ಗೌರವದ ಸಂಕೇತ. ಪ್ರತಿ ಮನೆಯಲ್ಲಿಯೂ ರಾಷ್ಟ್ರಧ್ವಜ ಹಾರಿಸುವುದರ ಹಿಂದೆ ರಾಷ್ಟ್ರದ ತ್ರಿವರ್ಣ ಧ್ವಜದೊಂದಿಗೆ ನಾಗರಿಕರ ವೈಯಕ್ತಿಕ ಸಂಬಂಧವನ್ನು ಸ್ಥಾಪಿಸುವುದು, ರಾಷ್ಡ್ರ ನಿರ್ಮಾಣಕ್ಕಾಗಿನ ಬಧ್ದತೆಯನ್ನು ಸಾಕಾರಗೊಳಿಸುವುದಾಗಿದೆ ಎಂದು ಉಡುಪಿ ಜಿಲ್ಲಾ ಭಾರತ್ ಸೇವಾದಳ ಘಟಕದ ಜಿಲ್ಲಾ ಸಂಘಟಕ ಫಕೀರ್ ಗೌಡ ಹೇಳಿದರು.

Call us

Call us

ಅವರು ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ರಾಷ್ಡ್ರೀಯ ಸೇವಾ ಯೋಜನೆಯ ಘಟPದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಹಾಗೂ ಹರ್ ಘರ್ ತಿರಂಗಾ ಮಾಹಿತಿ ಕಾರ್ಯಾಗಾರದಲ್ಲಿ ಅಬಿಪ್ರಾಯಪಟ್ಟರು.

Call us

Call us

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಸಂಪನ್ಮೂಲ ಕಛೇರಿಯ ಸಮನ್ವಯಾಧಿಕಾರಿಗಳಾದ ಅಶೋಕ್ ನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಣದೊಂದಿಗೆ ವ್ಯಕ್ತಿ ವಿಕಸನ ಮತ್ತು ಶಿಕ್ಷಣದೊಂದಿಗೆ ಸೇವೆ ಎನ್ನುವ ಮೂಲ ಮುಖ್ಯ ಧ್ಯೇಯದೊಂದಿಗೆ ಸಮಾಜ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಬೆಸೆಯುವಾ ರಾಷ್ಡ್ರೀಯ ಸೇವಾ ಯೋಜನೆಯ ಘಟPಗಳು ಪ್ರತಿಯೊಂದು ಶಾಲೆಗಳನ್ನು ತಲುಪುವಂತಾಗಬೇಕು ಎಂದರು.

ನಿರಂತರ ಎರಡು ವರ್ಷಗಳ ಕಾಲ ಸ್ವಯಂ ಸೇವಕರಾಗಿ ದುಡಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಹಾಗೆ ಹೊಸತಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಮಹಿತಿ ಕೈಪಿಡಿ ಮತ್ತು ಬ್ಯಾಡ್ಜ್ ಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸತೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು ಸಭೆಯಲ್ಲಿ ಆತಿಥಿಯಾಗಿ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜಿ, ಉಪ ಪ್ರಾಂಶುಪಾಲರಾದ ಕಿರಣ್ ಹೆಗ್ಡೆ, ಎನ್ ಎಸ್ ಎಸ್ ಘಟಕದ ನಾಯಕಿ ಕುಮಾರಿ ಭೂಮಿಕ ಉಪಸ್ಥಿತರಿದ್ದರು.

ರಾಷ್ಡ್ರೀಯ ಸೇವಾ ಯೋಜನೆ ಎನ್ ಎಸ್ ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಉದಯ ಮಡಿವಾಳ ಎಂ ಅವರು ಘಟPz ಹಿಂದಿ ವರ್ಷದ ಕಾರ್ಯಕ್ರಮಗಳ ವರದಿಯೊಂದಿಗೆ ಪ್ರಾಸ್ತಾವಿಕವಾದ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ವಯಂ ಸೇವಕಿ ಸುಶ್ಮಿತಾ ಕಾರ್ಯಕ್ರಮ ನಿರ್ವಹಿಸಿ ಸುಜಲ್ ಅತಿಥಿಗಳನ್ನು ಸ್ವಾಗತಿಸಿದರು, ಚೈತ್ರ ವಂದಿಸಿದರು

Leave a Reply

Your email address will not be published. Required fields are marked *

3 × 5 =