ಕುಂದಾಪುರ ಬ್ಲಾಕ್ ಕಾಂಗ್ರೆಸ್: ಇಂದಿರಾಗಾಂಧಿ ಜನ್ಮದಿನಾಚರಣೆ, ಸದಸ್ಯತ್ವ ನೋಂದಾವಣೆ ಕಾರ್ಯಕ್ರಮ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾಗಾಂಧಿ ಜನ್ಮದಿನಾಚರಣೆ, ಸದಸ್ಯತ್ವ ನೋಂದಾವಣೆ ಕಾರ್ಯಕ್ರಮ ನಡೆಯಿತು.

Click here

Click Here

Call us

Call us

Visit Now

Call us

Call us

ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಮಾತನಾಡಿ ‘ದೇಶಕ್ಕೆ ಇಂದಿರಾಗಾಂಧಿ ಯವರ ಕೊಡುಗೆ ಅಪಾರವಾದುದು. ಪಕ್ಷದ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಪಕ್ಷದ ಮೇಲೆ ಹಾಗೂ ನಾಯಕತ್ವದ ಮೇಲೆ ಗೌರವ ಹೆಮ್ಮೆ ಇರಬೇಕು. ಭೂಮಸೂದೆ, ಬ್ಯಾಂಕ್ ರಾಷ್ಟ್ರೀಕರಣ, ಇಪ್ಪತ್ತು ಅಂಶಗಳ ಕಾರ್ಯಕ್ರಮ ಮುಂತಾದ ಜನಪರ ಕಾರ್ಯಕ್ರಮಗಳ ಮೂಲಕ ಈ ದೇಶದ ದೀನದಲಿತರ ಉದ್ಧಾರಕ್ಕಾಗಿ ಯೋಜನೆಗಳನ್ನು ನೀಡಿದವರು ಇಂದಿರಾಗಾಂಧಿ. ಇದೀಗ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಸರಕಾರಿ ಆಸ್ತಿಗಳು ಖಾಸಗೀಕರಣ ಆಗುತ್ತಿರುವುದು ಖೇಧಕರವಾದುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಷ್ಟದಲ್ಲಿರುವ ಸಂಸ್ಥೆಗಳನ್ನು ಖಾಸಗೀಕರಣ ಮಾಡುವುದು ತಪ್ಪಾಗದು ಆದರೆ ಲಾಭದಲ್ಲಿರುವ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿರುವುದು ಸರಿಯಲ್ಲ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ, ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತೀ ಬೂತ್ ನಲ್ಲಿ ಕನಿಷ್ಠ ಐವತ್ತು ಸದಸ್ಯರನ್ನು ನೇಮಕಗೊಳಿಸುವಂತೆ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಲ್ಲಿ ವಿನಂತಿಸಿದರು.

ಈ ಸಂಧರ್ಭದಲ್ಲಿ ಹಿರಿಯ ನಾಯಕ ಮಲ್ಯಾಡಿ ಶಿವರಾಮ್ ಶೆಟ್ಟಿ, ಕೆಪಿಸಿಸಿ ಸೋಶಿಯಲ್ ಮೀಡಿಯಾ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಚಂದ್ರಶೇಖರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ವಿಕಾಸ್ ಹೆಗ್ಡೆ ಬಸ್ರೂರು, ಪುರಸಭಾ ಸದಸ್ಯರಾದ ಪಿ. ದೇವಕಿ ಶೆಟ್ಟಿ, ಪ್ರಭಾವತಿ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರೆಗಾರ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೋಡಿ ಸುನಿಲ್ ಪೂಜಾರಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಅಧ್ಯಕ್ಷ ರೋಶನ್ ಶೆಟ್ಟಿ, ಮುಖಂಡರಾದ ಗಂಗಾಧರ್ ಶೆಟ್ಟಿ, ದೇವಾನಂದ್ ಶೆಟ್ಟಿ, ಅಶೋಕ್ ಸುವರ್ಣ, ಸುಭಾಷ್ ಪೂಜಾರಿ, ಚಂದ್ರ ಅಮಿನ್, ವಾಣಿ ಆರ್ ಶೆಟ್ಟಿ, ಚಂದ್ರ ಅಮಿನ್, ಶೋಭಾ ಸಚ್ಚಿದಾನಂದ, ಕೇಶವ್ ಭಟ್, ದೀಪಕ್ ಕುಮಾರ್ ಶೆಟ್ಟಿ, ಅಶೋಕ್ ಭಂಡಾರಿ, ರಘುರಾಮ ನಾಯ್ಕ್ ಹೇರಿಕುದ್ರು, ಜನಾರ್ಧನ ಖಾರ್ವಿ, ಸದಾನಂದ ಖಾರ್ವಿ, ರಾಘವೇಂದ್ರ ಪೂಜಾರಿ, ಮುನಾಪ್ ಕೊಡಿ, ಅಶ್ವಥ್ ಕುಮಾರ್, ಅಡಾಲ್ಫ್ ಡಿ’ಕೋಸ್ಟಾ, ಕೆ. ಶಿವಕುಮಾರ್, ಅಶೋಕ್ ಶೆಟ್ಟಿ, ವಿನೋದ್ ಪೂಜಾರಿ, ದಿನೇಶ್ ನಾಯ್ಕ್, ಗೀತಾ ಅನಗಳ್ಳಿ, ಕೆ ಧರ್ಮ ಪ್ರಕಾಶ್, ಸ್ಟ್ಯಾನಿ ಡಿ’ಕೋಸ್ಟಾ, ಅಲ್ಫೋನ್ಸ್ ಡಿ’ಕೋಸ್ಟಾ, ರಘುರಾಮ್ ನಾಯ್ಕ್, ಕುಮಾರ್ ಖಾರ್ವಿ, ಸಚಿನ್ ಕುಮಾರ್, ಪಿಲಿಪ್ ಡಿ’ಮೆಲ್ಲೋ, ಅಭಿಜಿತ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಅಧ್ಯಕ್ಷರಾಗಿ ವಕ್ವಾಡಿ ರಾಕೇಶ್ ಶೆಟ್ಟಿ ಅಧಿಕಾರ ಸ್ವೀಕರಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಕಾರ್ಯಕ್ರಮ ನಿರೂಪಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ನಾರಾಯಣ್ ಆಚಾರ್ ಸ್ವಾಗತಿಸಿದರು. ಪುರಸಭಾ ಸದಸ್ಯ ಚಂದ್ರಶೇಖರ ಖಾರ್ವಿ ವಂದಿಸಿದರು.

Call us

Leave a Reply

Your email address will not be published. Required fields are marked *

12 + eleven =