ಕುಂದಾಪುರ: ರಾಷ್ಟ್ರೀಯ ಯುವ ಸಾಪ್ತಾಹದ ಅಂಗವಾಗಿ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ವಾಮಿ ವಿವೇಕಾನಂದರ ಸಂದೇಶ ಜಾಥಾ ಜರುಗಿತು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ. ನಾರಾಯಣ ಶೆಟ್ಟಿ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಶುಪಾಲ ಜಿ.ಎಂ ಗೊಂಡ ಅವರ ನೇತೃತ್ವದಲ್ಲಿ ಸಾವಿರಾರು ವಿಧ್ಯಾರ್ಥಿಗಳು ಜಾಥಾದಲ್ಲಿ ಭಾವಹಿಸಿದ್ದರು. ಕಾಲೇಜು ಆವರಣದಿಂದ ಹೊರಟ ಜಾಥಾ ಕುಂದಾಪುರ ಮಾಸ್ತಿ ಕಟ್ಟೆಯವರೆಗೆ ಸಾಗಿ ಪುರಸಭೆ ರಸ್ತೆ ಮೂಲಕ ಮತ್ತೆ ಸ್ವಸ್ಥಾನಕ್ಕೆ ತೆರಳುವ ಮೂಲಕ ಸಮಾಪನಗೊಂಡಿತು.
ಕುಂದಾಪುರ: ಭಂಡಾರ್‌ಕಾರ್ಸ್ ಕಾಲೇಜು ವಿದ್ಯಾರ್ಥಿಗಳಿಂದ ವಿವೇಕಾನಂದರ ಸಂದೇಶ ಜಾಥಾ
