ಕುಂದಾಪುರ: ಭಾರತ್ ವಿಕಾಸ್ ಸೌಹಾರ್ದ ಸಹಕಾರಿ ಉದ್ಘಾಟನೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಉಲ್ಲಾಸ್ ಬಿಲ್ಡಿಂಗ್ ಪ್ರಥಮ ಮಹಡಿಯಲ್ಲಿ ನೂತನ ಭಾರತ್ ವಿಕಾಸ ಸೌಹಾರ್ದ ಸಹಕಾರಿ ನಿಯಮಿತ ಕುಂದಾಪುರ ಇದರ ಉದ್ಘಾಟನೆ ನಡೆಯಿತು.

Call us

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಅಪ್ಪಣ್ಣ ಹೆಗ್ಗಡೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೂಕ್ತೇಸರಾದ ಎಸ್. ಸಚಿದಾನಂದ ಚಾತ್ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

ಕುಂದಾಪುರ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಉಮೇಶ್ ಪುತ್ರನ್ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ನಿರ್ದೇಶಕರಾದ ರಾಜು ಪೂಜಾರಿ ಭದ್ರತಾ ಕೋಶವನ್ನು ಉದ್ಘಾಟಿಸಿದರು

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಮೂಕ್ತೇಸರಾದ ಕೃಷ್ಣಪ್ರಸಾದ್ ಅಡ್ಯಂತಾಯ ಗಣಕಯಂತ್ರವನ್ನು ಉದ್ಘಾಟಿಸಿದರು.

Call us

ಕುಂದಾಪುರ ಉದ್ಯಮಿಯಾದ ದಿನೇಶ್ ಅಮೀನ್ ಮೋಹಿನಿ ನಶ್ಯ ನಗದು ಕಛೇರಿಯನ್ನು ಉದ್ಘಾಟಿಸಿದರು.

ಬೆಂಗಳೂರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ನಿರ್ದೇಶಕರಾದ ಮಂಜುನಾಥ ಎಸ್.ಕೆ ಠೇವಣಿ ಪತ್ರ ಬಿಡುಗಡೆಗೊಳಿಸಿದರು.

ಬೆಂಗಳೂರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ವೃತ್ತಿಪರ ನಿರ್ದೇಶಕರಾದ ಬೋಳಾ ಸದಾಶಿವ ಶೆಟ್ಟಿ ಡಿ.ಡಿ ಪತ್ರ ಬಿಡುಗಡೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲೆ ಸಹಕಾರಿ ಸಂಘಗಳ ಉಪನಿಬಂಧಕರಾದ ಪ್ರವೀಣ್.ಬಿ ನಾಯಕ್, ಕುಂದಾಪುರ ಪುರಸಭೆ ಅಧ್ಯಕ್ಷರಾದ ವೀಣಾ ಭಾಸ್ಕರ ಮೆಂಡನ್, ಉಲ್ಲಾಸ್ ಕ್ರಾಸ್ತ ಕಟ್ಟಡದ ಮಾಲೀಕರು, ಉಡುಪಿ ಜಿಲ್ಲಾ ಸೌಹಾರ್ದ ಸಂಯೋಜಕರಾದ ವಿಜಯ್ ಬಿ.ಎಸ್ ಉಪಸ್ಥಿತರಿದ್ದರು.

ಸಂಸ್ಥೆಯ ನಿರ್ದೇಶಕರಾದ ನಾಗೇಶ್ ನಾವಡ, ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿಯ ಪರವಾಗಿ ಧನ್ಯವಾದ ಸಮರ್ಪಿಸಿದರು. ಅಧ್ಯಕ್ಷರಾದ ಭಾಸ್ಕರ ಬಿ.ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಂದಾಪುರ ವಲಯ ಧರ್ಮಗುರುಗಳಾದ ಅತೀ ವಂದನಿಯ ಸ್ಟ್ಯಾನಿ ತಾವ್ರೋ ಆರ್ಶಿವಚನ ನೀಡಿದರು.

 

Leave a Reply

Your email address will not be published. Required fields are marked *

four − three =