ಕುಂದಾಪುರ: ಭೂಮಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭೂಮಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿ. ಸೊಸೈಟಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್. ರಾಜು ಪೂಜಾರಿ ಉದ್ಘಾಟಿಸಿದರು.

ಭದ್ರತಾ ಕೋಶವನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕರಾದ ಮಂಜುನಾಥ್ ಎಸ್ ಕೆ. ಉದ್ಘಾಟಿಸಿ, ಉಡುಪಿ ಜಿಲ್ಲಾ ಸೌಹಾರ್ದ ಸಂಯೋಜಕರಾದ ವಿಜಯ್ ಬಿ.ಎಸ್ ಇ ಬ್ಯಾಂಕಿಂಗ್ ಸೌಲಭ್ಯಕ್ಕೆ ಚಾಲನೆ ನೀಡಿದರು.

ಸಭಾ ಕಾರ್ಯದಲ್ಲಿ ಮಾತನಾಡಿದ ಎಸ್. ರಾಜು ಪೂಜಾರಿ, ಭೂಮಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸುಸಜ್ಜಿತವಾಗಿ ರೂಪುಗೊಂಡಿದ್ದು, ಬಡವರಿಗೆ ಉತ್ತಮ ರೀತಿಯಲ್ಲಿ ನೆರವಾಗಲಿದೆ ಎಂದರು.

ಸೊಸೈಟಿಯ ಅಧ್ಯಕ್ಷರಾದ ವೀರೇಂದ್ರ ಎಸ್. ಪೂಜಾರಿ ಮಾತನಾಡಿ, ಉತ್ತಮ ಕೆಲಸಕ್ಕೆ ಕೈ ಹಾಕಿದ್ದು,ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ಮಂಜುನಾಥ್ ಎಸ್ ಕೆ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಿಭಿನ್ನ ಆಲೋಚನೆ ಮೂಲಕ ಸಹಕಾರಿ ಕ್ರಾಂತಿ ಮಾಡುವ ಕೆಲಸ ಪ್ರಶಂಸನಾರ್ಹ. ಉತ್ತಮ ಸೇವೆ ಜನರಿಗೆ ನೀಡಿ ಕುಂದಾಪುರ ಭಾಗದಲ್ಲಿ ಭೂಮಿ ಕೋ-ಆಪರೇಟಿವ್ ಸೊಸೈಟಿ ಉತ್ತಮ ಹೆಸರು ಪಡೆಯಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಉದ್ಯಮಿ ಬಿಜೂರು ಗೋವಿಂದ ಬಾಬು ಪೂಜಾರಿ, ಪಡುಕೋಣೆ ನರಸಿಂಹ ಪೂಜಾರಿ, ಭೂಮಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ವೀರೇಂದ್ರ ಎಸ್ ಪೂಜಾರಿ, ಸಿಇಓ ರಕ್ಷತ್, ನಿರ್ದೇಶಕರಾದ ರೂಪೇಶ್ ಬೈಂದೂರು, ಮಾಧವಿ ಮೊಗವೀರ ಬಂಟ್ವಾಡಿ, ಭಾಸ್ಕರ್ ಕೆ. ಪೂಜಾರಿ, ಅಭಿಷೇಕ್ ದೇವಾಡಿಗ, ಜಿ. ಮಂಜುನಾಥ್ ಪೂಜಾರಿ, ರಾಜು ಪೂಜಾರಿ, ಮಹೇಶ್ ಪೂಜಾರಿ, ರಾಜು, ಸುಜಾತ, ಸುಗುಣ, ರಾಧಿಕಾ ನಾಯ್ಕ್ ಮಾರಣಕಟ್ಟೆ ಹಾಗೂ ಸಿಬ್ಬಂದಿಗಳಾದ ನಿರ್ಮಲಾ, ಶಿಲ್ಪಾ, ಶ್ರೇಯಸ್,ರಚನಾ ಸೇರಿ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

four + fourteen =