ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿಂದೂ ಧರ್ಮೀಯರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ ಎಂಬ ಆರೋಪದಡಿ ನ್ಯಾಯಾಂಗ ಬಂಧಿತರಾಗಿದ್ದ ಕುಂದಾಪುರ ಹಳ್ಳಾಡಿ- ಹರ್ಕಾಡಿ ನಿವಾಸಿಗಳಾದ ಜ್ಯೋತಿ ಪ್ರಕಾಶ್, ರವಿ ಮನೋಹರ್, ಪ್ರಕಾಶ್ ಕುಂದರ್ ಅವರಿಗೆ ಪ್ರಥಮ ದರ್ಜೆ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.
ಬ್ರಹ್ಮಾವರ ಸ್ಯಾಬರಕಟ್ಟೆ ನಿವಾಸಿ ಆನಂದ (36) ಅವರು ಆರೋಪಿಗಳು ಎರಡು ಧರ್ಮಗಳ ನಡುವೆ ದ್ವೇಷವನ್ನುಂಟು ಮಾಡುವ ಉದ್ದೇಶದಿಂದ ಮತಾಂತರ ಮಾಡಲು ಪ್ರಯತ್ನಪಟ್ಟಿದ್ದರು ಎಂದು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಆರೋಪಿಗಳ ಪರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ವಕೀಲರು ರಾಜಕೀಯ ದುರುದ್ದೇಶದಿಂದ ಆರೋಪಿಗಳ ಮೇಲೆ ಸುಳ್ಳು ದೂರು ದಾಖಲಾಗಿದೆ ಎಂದು ವಾದ ಮಂಡಿಸಿದ್ದರು. ಆರೋಪಿಗಳ ಪರ ಉಡುಪಿ ಯುವ ನ್ಯಾಯವಾದಿಗಳಾದ ಅಸದುಲ್ಲಾ ಕಟಪಾಡಿ, ಪ್ರದೀಪ್ ಪಿ.ಜೆ ಮತ್ತು ಆದಿತ್ಯ ಬೈಲೂರು ವಾದಿಸಿದ್ದರು.