ಕುಂದಾಪುರ: ಮುದ್ದುಕಂದ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಸೌತ್ ಕೆನರಾ ಪೋಟೋಗ್ರಾಪರ್‍ಸ್ ಅಸೋಸಿಯೇಶನ್ ರಿ. ಕುಂದಾಪುರ ವಲಯ ಮುದ್ದುಕಂದ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಕುಂದಾಪುರದ ಅಕ್ಷತಾ ಸಭಾಂಗಣದಲ್ಲಿ ನಡೆಯಿತು.

Call us

ಆದ್ಯ ಜೋಯಿಸ್ ಪ್ರಥಮ, ಲಹರಿ ಕಿಣಿ ದ್ವಿತೀಯ, ಶ್ರೀಹಾನ್ ಎಸ್. ಶೆಟ್ಟಿ ತೃತೀಯ ಬಹುಮಾನವನ್ನು ಪಡೆದುಕೊಂಡರೇ. ಸಮಾಧಾನಕರ ಬಹುಮಾನವನ್ನು ಹರ್ಷಾಲಿ ಜಿ. ನಾಯಕ್, ಅಭಿಜ್ಞಾ ಆರ್. ಆಚಾರ್, ಅಕ್ಷೆಭ್ಯ ಜಿ. ಭಟ್, ಅಭಿನವ ಪೈ, ಪ್ರಥ್ವಿನ್ ಆರ್. ಶೆಟ್ಟಿ ಪಡೆದರು. ಬಸ್ರೂರು ಮಹತೋಬಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ವಿಜೇತರಿಗೆ ಬಹುಮಾನ ವಿತರಿಸಿದರು.

ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಇದರ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಸಂಸ್ಥೆಯ ಅಧ್ಯಕ್ಷರಾದ ಗ್ರೇಶನ್ ಡಯಾಸ್, ಕಾರ್ಯದರ್ಶಿ ಪ್ರಮೋದ್ ಚಂದನ್, ಕೋಶಾಧಿಕಾರಿ ಚಂದ್ರಕಾಂತ, ಛಾಯಾಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಸ್ಥೆಯ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಕಾರ್ಯಕ್ರಮದ ಪ್ರಾಯೋಜಕರಾದ ದೊಟ್ಟಯ್ಯ ಪೂಜಾರಿ, ಶೀನ ದೇವಾಡಿಗ ಉಪ್ಪುಂದ, ಶ್ರೀನಿವಾಸ ದೇವಾಡಿಗ, ವಿಠಲ ನಾಗೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುರೇಶ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

eighteen − 15 =