ಕುಂದಾಪುರ: ಮುಧುರ ಮಧುರವೀ ಮಂಜುಳಗಾನಕ್ಕೆ ಹಾಡಲು ಸುವರ್ಣವಕಾಶ

Call us

ಎ.30ಕ್ಕೆ ಧ್ವನಿಪರೀಕ್ಷೆ. ಮೇ.15ಕ್ಕೆ ಕಾರ್ಯಕ್ರಮ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಸುತ್ತಮುತ್ತಲಿನ ಯುವ ಗಾಯಕರಿಗೆ ಉತ್ತಮ ವೇದಿಕೆ ಕಲ್ಪಿಸಿದ ದೂರದರ್ಶನದ ಹಳೆಯ ಚಿತ್ರಗೀತೆಗಳ ವಿಶೇಷ ‘ಮಧುರ ಮಧುರವೀ ಮಂಜುಳಗಾನ’ ಕಾರ್ಯಕ್ರಮವು ಮೇ.15ರಂದು ಸತತ ಮೂರನೇ ಬಾರಿಗೆ ಕುಂದಾಪುರ ಕೊಟೆಶ್ವರದ ಯುವ ಮೆರಿಡಿಯನ್ ಕನ್ವೆನ್ಶನ್ ಸೆಂಟರ್ ನಲ್ಲಿ ದೂರದರ್ಶನ ಬೆಂಗಳೂರು ಚಂದನ ವಾಹಿನಿ , ಬೈಲೂರು ಎಜುಕೇಶನ್ ಟ್ರಸ್ಟ್ , ಎನ್.ಸಿ.ಆರ್ ಎಜುಕೇಶನ್ ಟ್ರಸ್ಟ್ ಹಾಗೂ ಯುವ ಇನ್ಪ್ರಾಸ್ಟ್ರಕ್ಚರ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ ಹಾಡುಗಾರರು, ನೃತ್ಯ ತಂಡಗಳು ತಮ್ಮ ಹೆಸರು, ವಯಸ್ಸು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಇತ್ತೀಚಿನ ಭಾವಚಿತ್ರ ಅರ್ಜಿಯೊಂದಿಗೆ ಎಪ್ರಿಲ್ 30ರ ಶನಿವಾರ ಬೆಳಿಗ್ಗೆ 9 ಗಂಟೆಗೆ ಕೋಟೇಶ್ವರ ಹಾಲಾಡಿ ರಸ್ತೆಯಲ್ಲಿರುವ ಯುವ ಮೆರಿಡಿಯನ್ ಕನ್ವೆನ್ಶನ್ ಸೆಂಟರ್‌ಗೆ ಇಲ್ಲಿ ಧ್ವನಿ ಪರೀಕ್ಷೆಗೆ ಹಾಜರಾಗಲು ಸಂಘಟಕರು ತಿಳಿಸಿದ್ದಾರೆ.

Call us

Call us

Leave a Reply

Your email address will not be published. Required fields are marked *

seven − three =