ಕುಂದಾಪುರ: ಯುವತಿಯ ನಗ್ನ ವಿಡಿಯೋ ಚಿತ್ರಿಸಿ ಬ್ಲಾಕ್ ಮೇಲ್. ಓರ್ವ ವಶಕ್ಕೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯುವತಿಯೋರ್ವಳು ಯಾಮಾರಿಸಿ ಅವಳ ಗೆಳೆಯನೇ ತೆಗೆದ ನಗ್ನ ವಿಡಿಯೋ ಇಟ್ಟುಕೊಂಡು ತಮ್ಮೊಡನೆ ಲೈಂಗಿಕವಾಗಿ ಸಹಕರಿಸಬೇಕು, ಇಲ್ಲದಿದ್ದರೆ ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹರಿಯಬಿಡುವುದಾಗಿ ಯುವತಿಯನ್ನು ಬ್ಲಾಕ್ ಮೇಲ್ ಮಾಡಿದ ಆರೋಪಿಗಳ ಪೈಕಿ ಓರ್ವನನ್ನು ಪೋಲಿಸರು ವಶಕ್ಕೆ ಪಡೆದುಕೊಂಡರೆ ಪ್ರಮುಖ ಆರೋಪಿ ನಾಪತ್ತೆಯಾಗಿದ್ದಾನೆ. ಸೆರೆಯಾದ ಆರೋಪಿ ಸಂತೋಷ ಪೂಜಾರಿ, ನಾಪತ್ತೆಯಾದ ಆರೋಪಿ ಸುದರ್ಶನ ಶೆಟ್ಟಿ.

Call us

Call us

Call us

ಘಟನೆಯ ವಿವರ:
ಮೂರು ವರ್ಷಗಳ ಹಿಂದೆ ಇದೀಗ ಪ್ರಕರಣದ ಕಿಂಗ್ ಪಿನ್ ಆಗಿರುವ ಸುದರ್ಶನ ಶೆಟ್ಟಿ ಎಂಬಾತ ತನ್ನ ಹಾಲಾಡಿ ಪರಿಸರದ ತನ್ನ ಗೆಳತಿಯನ್ನು ಕರೆದುಕೊಂಡು ಕೊಲ್ಲೂರಿಗೆ ಜಾಲಿ ಟೂರ್ ಹೋಗಿದ್ದ. ಆಕಸ್ಮಿಕವೋ, ಕರಾರುವಾಕ್ಕೋ ಎಂಬಂತೆ ಮಾರ್ಗಮಧ್ಯದಲ್ಲಿ ಆಕೆಗೆ ಋತುಸ್ರಾವ ಆದ ಕಾರಣದಡಿ ಇಬ್ಬರೂ ಕೊಲ್ಲೂರಿನ ಲಾಡ್ಜ್ ಒಂದರಲ್ಲಿ ಕೋಣೆಯನ್ನು ಬಾಡಿಗೆಗೆ ಪಡೆಯುತ್ತಾರೆ. ಇದೀಗ ಯುವತಿ ದೂರಿನಲ್ಲಿ ಹೇಳಿದಂತೆ ಅಂದು ಲಾಡ್ಜಿನ ಬಾತ್ ರೂಮಿನಲ್ಲಿ ಆಕೆ ಸ್ನಾನ ಮಾಡಿ ಬಟ್ಟೆ ಬದಲಾಯಿಸುವ ದೃಶ್ಯವನ್ನು ಆಕೆಗೆ ತಿಳಿಯದಂತೆ ಸುದರ್ಶನ ಶೆಟ್ಟಿ ವಿಡಿಯೊ ಮಾಡಿಕೊಂಡಿದ್ದಂತೆ. ಇದು ಆ ಸಮಯದ ಮಾತಾಗಿತ್ತು.

Call us

Call us

ನಂತರದ ದಿನಗಳಲ್ಲಿ ಅವಳ ಗೆಳೆಯ ಸುದರ್ಶನ್ ಶೆಟ್ಟಿ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದ್ದ. ಮೂರು ವರ್ಷಗಳ ಬಳಿಕ ವಿದೇಶದಿಂದ ಊರಿಗೆ ಬಂದಿದ್ದ ಸುದರ್ಶನ್ ಅಂದು ಕೊಲ್ಲೂರು ಲಾಡ್ಜ್ ನಲ್ಲಿ ತನ್ನ ಗೆಳತಿಯನ್ನು ಯಮಾರಿಸಿ ಕ್ಲಿಕ್ಕಿಸಿದ ವಿಡಿಯೊವನ್ನು ತನ್ನ ಸ್ನೇಹಿತ ಸಂತೋಷ ಪೂಜಾರಿಯ ಜೊತೆ ಪಾನ ಗೋಷ್ಟಿ ನಡೆಯುತ್ತಿದ್ದಾಗ ಹಂಚಿಕೊಂಡಿದ್ದ. ತಲೆಗೇರಿದ ಅಮಲು ಯುವತಿಯ ನಗ್ನ ವಿಡಿಯೋ ಕಣ್ಣಿನಾಳದಲ್ಲಿ ಇಳಿಯುತ್ತಲೇ ನಾಭಿಯ ಕೆಳಗೆ ಮಿಂಚನ್ನು ಹರಿಸಿಕೊಂಡಂತಾದ ಸಂತೋಷ ಪೂಜಾರಿ ಆ ಕೂಡಲೇ ಯುವತಿಯ ಮೊಬೈಲಿಗೆ ರಿಂಗನ್ನು ನೀಡಲಾರಂಭಿಸಿದ್ದ ಹೇಳಿ ಕೇಳಿ ಇದಕ್ಕೆ ಆತನಿಗೆ ಹುರಿದುಂಬಿಸಿದವನು ಇದೇ ಸುದರ್ಶನ ಶೆಟ್ಟಿ. ಆರಂಭದಲ್ಲಿ ಸೌಜನ್ಯದಿಂದಲೇ ಮಾತನಾಡಿದ ಯುವತಿ ಯಾವಾಗ ಇಬ್ಬರೂ ತಮ್ಮ ಸಂಗಡ ಬರುವಂತೆ ಆಫರ್ ನೀಡತೊಡಗಿದರೊ ಅಲ್ಲಿಗೆ ಬೆಚ್ಚಿ ಬಿದ್ದಿದ್ದಾಳೆ, ನಿರಾಕರಿಸಿ ಬೈದಿದ್ದಾಳೆ, ಆಗ ತಮ್ಮ ಅಸಲಿ ರೂಪವನ್ನು ಬಿಚ್ಚಿಟ್ಟ ಧೂರ್ತರು ತಮ್ಮ ಬಳಿ ಇದ್ದ ಆಕೆಯ ನಗ್ನ ವಿಡಿಯೋ ದೃಶ್ಯವನ್ನು ಆಕೆಗೆ ಸೆಂಡ್ ಮಾಡಿ ಬರದಿದ್ದರೆ ಎಲ್ಲ ವಾಟ್ಸ್ಯಾಪ್ ಗುಂಪುಗಳಲ್ಲಿ ಈ ವಿಡಿಯೋವನ್ನು ಶೇರ್ ಮಾಡುತ್ತೇವೆಂದು ಬೆದರಿಸುತ್ತಿದ್ದರು ಎನ್ನಲಾಗಿದೆ.

ಆದರೆ ಸಾವರಿಸಿಕೊಂಡ ಯುವತಿ ಇವರ ಬೆದರಿಕೆಗೆ ಮಣಿಯದಿದ್ದಾಗ ಆರೋಪಿ ಸಂತೋಷ ಪೂಜಾರಿ ಸ್ಯಾಂಪಲ್ ಎಂಬಂತೆ ಆ ವಿಡಿಯೊವನ್ನು ವಾಟ್ಸ್ಯಾಪ್‌ನಲ್ಲಿ ಶೇರ್ ಮಾಡಿದ್ದಾನೆ. ಈ ವಿಷಯ ಯುವತಿಯ ಸಹೋದರನಿಗೂ ತಲುಪಿ ರಾಣಾರಂಪವಾಗಿದೆ . ಕಟ್ಟ ಕಡೆಗೆ ಪ್ರಕರಣವು ಶಂಕರನಾರಾಯಣ ಠಾಣೆಯ ಮೆಟ್ಟಿಲೇರಿದೆ. ಸಂತೋಷ ಪೂಜಾರಿಯನ್ನು ಬಂಧಿಸಲಾಗಿದ್ದು ಸುದರ್ಶನ ಶೆಟ್ಟಿಯ ಬಂಧನಕ್ಕೆ ಪೊಲೀಸರು ತಂಡ ರಚಿಸಿದ್ದಾರೆ.

Leave a Reply

Your email address will not be published. Required fields are marked *

ten + seven =