ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಗುಡುಗು ಮಿಂಚು ಸಹಿತ ಮಳೆಗೆ ಅಲ್ಲಲ್ಲಿ ನಷ್ಟ ಸಂಭವಿಸಿದ್ದರೇ, ಚಂದ್ರ ಎಂಬುವವರಿಗೆ ಸಿಡಿಲು ಎರಗಿ ಗಾಯಗಳಾಗಿದ್ದು ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿರೂರು ಗ್ರಾಪಂ ವ್ಯಾಪ್ತಿಯ ಮನೆಯ ಮೇಲೆ ಮರ ಬಿದ್ದು ನಷ್ಟ ಸಂಭವಿಸಿದೆ. ಗೋಪಾಡಿ ಗ್ರಾಪಂ ವ್ಯಾಪ್ತಿಯ ಮನೆಯೊಂದರ ಎದುರಿನ ಬಾವಿಯ ಮೇಲೆ ತೆಂಗಿನ ಮರ ಬಿದ್ದು ದಂಡೆ ಕುಸಿದಿದೆ. ಎರಡು ಮನೆಗಳ ಹೆಂಚು ಹಾರಿ ಹೋಗಿದೆ. ಕುಂದಾಪುರ ತಾಲೂಕಿನಾದ್ಯಂತ ಭಾರಿ ಗುಡುಗು ಸಹಿತ ಮಳೆ ಬಿದ್ದಿದ್ದು, ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕುಂದಾಪುರ, ಕೊಲ್ಲೂರು, ಜಡ್ಕಲ್, ವಂಡ್ಸೆ, ತಲ್ಲೂರು, ಹೆಮ್ಮಾಡಿ, ಕೋಡಿ, ಗಂಗೊಳ್ಳಿ, ಮರವಂತೆ, ಗಂಗೊಳ್ಳಿ, ಬೈಂದೂರು, ಶಿರೂರು ತೆಕ್ಕಟ್ಟೆ, ಶಂಕರನಾರಾಯಣ, ಸಿದ್ಧಾಪುರ, ಅಮಾಸೆಬೈಲು, ಹಾಲಾಡಿ ಮುಂತಾದೆಡೆ ಗುಡುಗು ಮಿಂಚು ಸಹಿತ ಮಳೆಯಾಗಿದೆ. ತಾಲೂಕಿನಾದ್ಯಂತ ಸುರಿದ ಮಳೆಗೆ ಸುಮಾರು ೨೫,೦೦೦ರೂ ನಷ್ಟ ಸಂಭವಿಸಿರಬಹುದೆಂದು ತಹಶೀಲ್ದಾರ್ ಗಾಯತ್ರಿ ನಾಯಕ್ ತಿಳಿಸಿದ್ದಾರೆ.