ಕುಂದಾಪುರ: ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಶಿಬಿರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಮೃತೇಶ್ವರಿ ಎಜುಕೇಶನಲ್ ಟ್ರಸ್ಟಿನ ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಆಯೋಜಿಸಲಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಿಬಿರವನ್ನು ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದು. ಈ ಶಿಬಿರದ ಮುಖೇನ ನೂರಾರು ಸಾರ್ವಜನಿಕರಿಗೆ ಉಚಿತ ಆರೋಗ್ಯ ಪರೀಕ್ಷೆ ಮತ್ತು ವ್ಯಾದಿಕ್ಷಮತ್ವವನ್ನು ಹೆಚ್ಚಿಸುವ ಔಷಧಿಯನ್ನು ವಿತರಿಸಲಾಯಿತು.

ಈ ಸುಸಂದರ್ಭದ ಸದುಪಯೋಗವನ್ನು ಕುಂದಾಪುರ, ಕೋಟೇಶ್ವರದ ಸುತ್ತಮುತ್ತ ಅನೇಕ ಹಳ್ಳಿಗಳ ಸಾರ್ವಜನಿಕರು ಈ ಶಿಬಿರದ ಉಪಯೋಗವನ್ನು ಪಡೆದುಕೊಂಡಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಹತ್ತು ಹಲವಾರು ಉಚಿತ ಆರೋಗ್ಯ ಶಿಬಿರವನ್ನು ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಿರ್ವಹಿಸಲು ಉದ್ದೇಶಿಸಲಾಗಿದೆ, ಈ ಶಿಬಿರದಲ್ಲಿ ಒಟ್ಟು 350 ಜನ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾರೆ.

Leave a Reply

Your email address will not be published. Required fields are marked *

four × two =