ಕುಂದಾಪುರ: ರೋವರ‍್ಸ್ ಮತ್ತು ರೇಂಜರ‍್ಸ್ ಘಟಕದ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಹೋದರತ್ವದ ಬಾವನೆ ಇಡೀ ಜಗತ್ತಿನಲ್ಲಿ ಬೆಳೆಯಬೇಕು. ರೋವರ‍್ಸ್ ಮತ್ತು ರೇಂಜರ‍್ಸ್ ಗಳು ಈ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡು ದೇಶದ ಉಜ್ವಲ ಭವಿಷ್ಯಕ್ಕಾಗಿ ದುಡಿಯುವ ಮನೋಭಾವನೆಯನ್ನು ಹೊಂದಬೇಕು ಎಂದು ಜಿಲ್ಲಾ ಗೌರವಾಧ್ಯಕ್ಷರಾಗಿರುವ ಗುಣರತ್ನ ಅವರು ಹೇಳಿದರು.

ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನ ರೋವರ‍್ಸ್ ಮತ್ತು ರೇಂಜರ‍್ಸ್ ಘಟಕದ ಉದ್ಘಾಟನಾ ಮತ್ತು ವನಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾಲೇಜಿನಲ್ಲಿ ಗಿಡ ನೆಡುವ ಮೂಲಕ ಜಿಲ್ಲಾ ರೋವರ‍್ಸ್ ಮತ್ತು ರೇಂಜರ‍್ಸ್ ಜಿಲ್ಲಾ ತರಬೇತುದಾರಾದ ಕೊಗ್ಗ ಗಾಣಿಗ ಮತ್ತು ಗುಣರತ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೋವರ‍್ಸ್ ಮತ್ತು ರೇಂಜರ‍್ಸ್ ನ ಕೊಗ್ಗ ಗಾಣಿಗ ರೋವರ‍್ಸ್ ಮತ್ತು ರೇಂಜರ‍್ಸ್ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ರಸಾಯನಶಾಸ್ತ್ರ ವಿಭಾಗದ ನಿಶಾ ಎಂ, ಕಾಲೇಜಿನ ರೋವರ‍್ಸ್ ಮತ್ತು ರೇಂಜರ‍್ಸ್ ಘಟಕದ ರಿತಿನ್ ಶೆಟ್ಟಿ ಮತ್ತು ಪ್ರಬಾಶ್ರೀ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಹನಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

18 − seventeen =