ಕುಂದಾಪುರ: ಲಕ್ಷಾಂತರ ರೂ. ಮೌಲ್ಯದ ಟಯರುಗಳ ಕಳ್ಳತನ!

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಗರದ ಅಂಕದಕಟ್ಟೆ ಹೆದ್ದಾರಿ ಪಕ್ಕದಲ್ಲಿರುವ ಏಮ್ ಆರ್ ಏಫ್ ಶೋ ರೂಮಿಗೆ ಲಗ್ಗೆಯಿಕ್ಕಿರುವ ಕಳ್ಳರು ಅಂಗಡಿಯ ಸೆಂಟ್ರಲ್ ಲಾಕ್ ಮುರಿದು ಸುಮಾರು ಹದಿನೈದಕ್ಕೂ ಹೆಚ್ಚಿನ ಟಯರುಗಳನ್ನು ಅನಾಯಸವಾಗಿ ಸಾಗಿಸಲು ಯಶಸ್ವಿಯಾಗಿದ್ದಾರೆ. ಕಳ್ಳತನವಾದ ಟಯರುಗಳ ಒಟ್ಟು ಮೌಲ್ಯ ೧.೬೫ಲಕ್ಷ ಎಂದು ಅಂದಾಜಿಸಲಾಗಿದೆ.

Click Here

Call us

Call us

Visit Now

ಪಕ್ಕದಲ್ಲಿಯೇ ಸೋಲಾರ್ ಉಪಕರಣಗಳ ಮಳಿಗೆಯಿದ್ದರೂ ಕೇವಲ ಟಯರುಗಳ ಕಳ್ಳತನವನ್ನೇ ಟಾರ್ಗೆಟ್ ಆಗಿರಿಸಿದ ಕಳ್ಳರು ಕದ್ದ ಟಯರುಗಳನ್ನು ಸಾಗಿಸಲು ಪಿಕ್ ಅಪ್ ವಾಹನವನ್ನು ಬಳಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು ಹೆದ್ದಾರಿಯಲ್ಲಿ ಅಲ್ಲಲ್ಲಿ ಪೋಲಿಸ್ ತಪಾಸಣೆ ಇರುವುದರಿಂದ ಒಳದಾರಿ ಬಳಸಿ ತಮ್ಮ ಗಮ್ಯವನ್ನು ಸೇರುವಲ್ಲಿ ಯಶಸ್ವಿಯಾಗಿದ್ದರೆ. ಸುಮಾರು ಐದು ಜನರಿಗಿಂತಲೂ ಹೆಚ್ಚು ಜನರು ಇದರಲ್ಲಿ ಭಾಗಿಯಾಗಿದ್ದಾರೆಂದು ಸಂಶಯಿಸಲಾಗಿದೆ. ಆದರೆ ಹೆದ್ದಾರಿ ಪಕ್ಕದಲ್ಲಿಯೇ ಇಂತಹ ಬೃಹತ್ ಪ್ರಮಾಣದ ದರೋಡೆ ಜರಗಿದ್ದರೂ ಮುಂಜಾನೆ ಬಳಿಕವೇ ಕಳ್ಳತನದ ವಿಷಯ ಬೆಳಕಿಗೆ ಬಂದಿದೆ. ಇಷ್ಟರ ತನಕ ಕೇವಲ ದೇವಸ್ಥಾನಗಳನ್ನು ಮಾತ್ರ ಗುರಿಯಾಗಿರಿಸುತ್ತಿದ್ದ ಕಳ್ಳರು ಈ ಬಾರಿ ತಮ್ಮ ವರಸೆ ಬದಲಿಸಿ ಟಯರ್ ಶೋ ರೂಮಿಗೆ ಲಗ್ಗೆಯಿಕ್ಕಿರುವುದು ವಿಶೇಷವಾಗಿದೆ. ಕುಂದಾಪುರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Click here

Click Here

Call us

Call us

Leave a Reply

Your email address will not be published. Required fields are marked *

15 + 14 =