ಕುಂದಾಪುರ: ವಕೀಲರ ಸಂಘದಿಂದ ಉಚಿತ ಹೃದಯ ರೋಗ ತಪಾಸಣೆ ಶಿಬಿರ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಶಸ್ಸಿಗೆ ಕೇವಲ ಸಂಪತ್ತು ಒಂದೇ ಇದ್ದರೆ ಸಾಲದು ಆರೋಗ್ಯವೂ ಬಹಳ ಮುಖ್ಯ. ರೋಗಗಳ ಬಗ್ಗೆ ಮಾಹಿತಿ ಹಾಗೂ ಅವುಗಳ ನಿಯಂತ್ರಣಕ್ಕೆ ಜನರಲ್ಲಿ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಈ ಶಿಬಿರಗಳು ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದು ಕುಂದಾಪುರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಹೇಳಿದರು.

Call us

Call us

Call us

ಕುಂದಾಪುರ ವಕೀಲರ ಸಂಘದಲ್ಲಿ ಕುಂದಾಪುರ ಬಾರ್ ಅಸೋಸಿಯೇಶನ್ (ರಿ.), ಕುಂದಾಪುರ, ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್ ಲಿ. ಮಂಗಳೂರು ಸಂಯುಕ್ತ ಆಶ್ರಯದಲ್ಲಿ ವಕೀಲರುಗಳಿಗೆ ಮತ್ತು ನ್ಯಾಯಾಲಯದ ಸಿಬ್ಬಂದಿಗಳಿಗಾಗಿ ಉಚಿತ ಹೃದಯ ರೋಗ ತಪಾಸಣಾ ಶಿಬಿರ ಮತ್ತು ಮೈ ಇಂಡಿಯಾನಾ ಹೆಲ್ತ್ ಕಾರ್ಡ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತಾನಾಡಿದರು.

Call us

Call us

ಕುಂದಾಪುರ ಬಾರ್ ಅಸೋಸಿಯೇಶನ್ ರಿ. ಕುಂದಾಪುರ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿ ಕಾನೂನು ಮತ್ತು ರಕ್ತದಾನ ಶಿಬಿರಗಳನ್ನು ಹಲವು ಬಾರಿ ಸಂಘಟಿಸಿದ್ದೇವೆ. ಇದೊಂದು ಹೊಸ ಪ್ರಯೋಗ, ನಮ್ಮ ವೃತ್ತಿ ಬಾಂಧವರಿಗೆ ಒಂದೇ ಸೂರಿನಲ್ಲಿ ಹೃದಯಕ್ಕೆ ಸಂಬಂಧಪಟ್ಟ ಅನೇಕ ರೀತಿಯ ತಪಾಸಣೆಯನ್ನು ಉಚಿತವಾಗಿ ಸಿಗಬೇಕೆಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದರು.

ಮುಖ್ಯ ಅತಿಥಿಗಳಾಗಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಲಾವಣ್ಯ ಎಚ್.ಎನ್, ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್ ಲಿ. ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಯೂಸೂಪ್ ಕುಂಬ್ಳೆ, ಇಂಡಿಯಾನಾ ಆಸ್ಪತ್ರೆಯ ನಿರ್ದೇಶಕಿ ನಿಪ್ರೀ ಯೂಸೂಪ್ ಕುಂಬ್ಳೆ, ಇಂಡಿಯಾನಾ ಬಿಸ್‌ನೆಸ್ ಡೆವಲೆಪ್‌ಮೆಂಟ್ ವೈಸ್ ಪ್ರಸಿಡೆಂಟ್ ಬನ್ನಾಡಿ ರೂಪೇಶ್ ಕುಮಾರ್ ಶೆಟ್ಟಿ ಮತ್ತು ಇಂಡಿಯಾನಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದೇವನಾಂದ ಶೆಟ್ಟಿ, ಉಪಸ್ಥಿತರಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಶ್ರೀನಿವಾಸ ಸುವರ್ಣ ಅವರು ಮೈ ಇಂಡಿಯಾನಾ ಹೆಲ್ತ್ ಕಾರ್ಡ್ ಬಿಡುಗಡೆಗೊಳಿಸಿದರು. ಕುಂದಾಪುರ ಬಾರ್ ಅಸೋಸಿಯೇಶನ್‌ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರವೀಶ್ಚಂದ್ರ ಶೆಟ್ಟಿ ವಂದಿಸಿದರು. ನ್ಯಾಯಾವಾದಿ ವನಿತಾ ಕಾರ್ಕಡ ಪ್ರಾರ್ಥಿಸಿ, ವಕೀಲ ರಾಘವೇಂದ್ರ ಚರಣ್ ನಾವುಡ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

20 − 13 =