ಕುಂದಾಪುರ: ವಿಜಯ್ ಎಸ್. ಪೂಜಾರಿಯವರಿಗೆ ಗೌರವ ಅಭಿನಂದನೆ.

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಸಹನಾ ಕನ್ವೆನ್ಷನ್ ಸೆಂಟರ್ ಹಾಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಿತ್ರಕೂಟ ಕುಂದಾಪುರ ಹಾಗೂ ಸ್ನೇಹಮಹಿ ಟ್ರಸ್ಟ್ ವತಿಯಿಂದ ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿಜಯ್ ಎಸ್ . ಪೂಜಾರಿ ಯವರಿಗೆ ಸಹನಾ ಸುರೇಂದ್ರ ಶೆಟ್ಟಿ ಹಾಗೂ ಸಂತ ಅಂತೋನಿ ಕಂಪನಿಯ ರೋವನ್ ಡಿಕೋಸ್ಟಾ ನೇತೃತ್ವದಲ್ಲಿ ಅಭಿನಂದಿಸಲಾಯಿತು.

Click Here

Call us

Call us

ಸನ್ಮಾನವನ್ನು ಮಾಡಿದ ಯುವ ಉದ್ಯಮಿ ರೋಟರಿ ಮಾಜಿ ಗವರ್ನರ್ ಅಭಿನಂದನ ಶೆಟ್ಟಿ ವಿಜಯರವರ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು. ಮುಖ್ಯಾಧಿಕಾರಿ ಗೋಪಾಲ ಕೃಷ್ಣ ಶೆಟ್ಟಿ ವಿಜಯ ರವರಿಗೆ ಜವಾಬ್ದಾರಿ ಹಾಗೂ ಕಾರ್ಯವನ್ನು ವಿವರಿಸಿದರು. ಲಕ್ಷ್ಮಣ ಶೆಟ್ಟಿ ಹಾಗೂ ವಿಕಾಸ ಹೆಗ್ಡೆ ಅಭಿನಂದಿಸಿದರು. ಸತೀಶ್ ಕೋಟ್ಯಾನ್ ಹಾಗೂ ರವಿಕಿರಣ ಡಿಕೋಸ್ಟಾ ಶುಭಾಶಯ ಸಲ್ಲಿಸಿದರು.

Click here

Click Here

Call us

Visit Now

ಸನ್ಮಾನಕ್ಕೆ ಉತ್ತರಿಸಿದ ವಿಜಯರವರು ತಾನು ನಡೆದು ಬಂದ ರಾಜಕೀಯ ಹಾಗೂ ಸಾಮಾಜಿಕ ಜೀವನದ ಬಗ್ಗೆ ಮನದಾಳದ ಮಾತುಗಳನ್ನಾಡಿ ತಮ್ಮ ಸೇವೆಯನ್ನು ಇನ್ನೂ ಮುಂದುವರೆಸುವುದಾಗಿ ಹೇಳಿ ಮಾನ್ಯ ಶಾಸಕರಾದ ಶ್ರೀನಿವಾಸ ಶೆಟ್ಟಿ ಹಾಗೂ ರವಿಕಿರಣ ಕೊಡ್ಗಿ ಯವರಿಗೆ ವಂದಿಸಿದರು.

ಸ್ನೇಹಮಹಿ ಟ್ರಸ್ಟ್ ಹಾಗೂ ಮಿತ್ರ ಕೂಟದ ಸದಸ್ಯರೆಲ್ಲ ಹಾಗೂ ಚಕ್ರವರ್ತಿ ಸದಸ್ಯರು ಉಪಸ್ಥಿತರಿದ್ದರು ಸುರೇಂದ್ರ ಶೆಟ್ಟಿ ಪ್ರಾಸ್ತವಿಕ ಮಾತುಗಳನ್ನಾಡಿ ಸ್ವಾಗತಿಸಿದರು ಹಾಗೂ ರಂಜಿತ್ ಶೆಟ್ಟಿ ವಂದಿಸಿದರು. ಕಾರ್ಯಕ್ರಮನ್ನು ಅಚ್ಚುಕಟ್ಟಾಗಿ ಕೋವಿಡ್ ನಿಯಮವನ್ನು ಪಾಲಿಸಿ ನೋಟರಿ ನ್ಯಾಯವಾದಿ ರಾಘವೇಂದ್ರ ಚರಣ್ ನಾವಡ ನಿರ್ವಹಿಸಿದರು.

Leave a Reply

Your email address will not be published. Required fields are marked *

13 + ten =