ಕುಂದಾಪುರ: ವಿಶ್ವ ಓಝೋನ್ ದಿನಾಚರಣೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ವಿಶ್ವ ಓಝೋನ್ ದಿನವನ್ನು ಆಚರಿಸಿದರು.

Click Here

Call us

Call us

ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಾದ ರವೀಂದ್ರ ಉಪಾಧ್ಯ ಮಾತನಾಡಿ ಭೂ ವಾತಾವರಣದ ಸ್ತರಗೋಳದಲ್ಲಿ ಸಕಲ ಜೀವರಾಶಿಗಳಿಗೂ ಸುರಕ್ಷಾ ಕೊಡೆಯಂತಿರುವ ಓಝೋನ ಪದರದ ಮಹತ್ವವನ್ನು ತಿಳಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಓಝೋನ್ ಪದರ ತೆಳುಗೊಳ್ಳಲು ಕಾರಣವಾದ ಮಾನವ ಚಟುವಟಿಕೆಗಳ ಕುರಿತು ಮತ್ತು ನೇರಳಾತೀತ ಕಿರಣಗಳು ಉಂಟುಮಾಡುವ ಜೈವಿಕ ಅಪಾಯಗಳ ಕುರಿತು ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು ಎಂದರು.

Click here

Click Here

Call us

Visit Now

ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಷಿ ವಹಿಸಿದ್ದರು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಸಂಧ್ಯಾ ನಾಯಕ್ ಸ್ವಾಗತಿಸಿದರು. ವಿದ್ಯಾರ್ಥಿನಿ ರಕ್ಷಿತಾ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ನಾಯಕಿ ನಿಶ್ಮಿತಾ ಕಾರ‍್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

20 + 19 =