ಕುಂದಾಪುರ: ವ್ಯಾಸರಾಜ ಮಠದ ಕಾರ್ತಿಕ ದೀಪೋತ್ಸವ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಗಾಣಿಗ ಸೇವಾ ಸಂಘ ಇವರ ನೇತೃತ್ವದಲ್ಲಿ ಗಾಣಿಗ ಸೇವಾ ಸಂಘ ಬೈಂದೂರು ಘಟಕ, ಉಪ್ಪುಂದ ಘಟಕ, ಗಂಗೊಳ್ಳಿ ಘಟಕ, ಹೆಮ್ಮಾಡಿ ಘಟಕ, ಬಸ್ರೂರು ಘಟಕ, ಗಾಣಿಗ ಯುವ ಸಂಘಟನೆ ಕೋಟೇಶ್ವರ, ಗಾಣಿಗ ಯುವ ಸಂಘಟನೆ ತೆಕ್ಕಟ್ಟೆ, ಗಾಣಿಗ ಯುವ ಸಂಘಟನೆ ಕುಂದಾಪುರ, ಗಾಣಿಗ ಯುವ ಸಂಘಟನೆ ಆಜ್ರಿ-ನೇರಳಕಟ್ಟೆ ಇವರ ಸಹಕಾರದೊಂದಿಗೆ ಕುಂದಾಪುರ ನವೀಕೃತ ಶ್ರೀ ವ್ಯಾಸರಾಜ ಮಠದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ವಿಜೃಂಬಣೆಯಿಂದ ಜರುಗಿತು.

Call us

ವೇದಮೂರ್ತಿ ವಿಜಯ ಪೇಜತ್ತಾಯ ಧಾರ್ಮಿಕ ವಿಧಿವಿದಾನ ನೆರವೇರಿಸಿದರು. ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಕಾರ್ಯದರ್ಶಿ ಜಿ.ಶಿವಾನಂದ ರಾವ್, ಕೋಶಾಧಿಕಾರಿ ಶಂಕರನಾರಾಯಣ ಗಾಣಿಗ, ಹೋಟಲ್ ಉದ್ಯಮಿ ಚಂದ್ರಯ್ಯ ಬೆಂಗಳೂರು, ಮುಂಬೈ ಉದ್ಯಮಿ ವಿಜಯೇಂದ್ರ ಹಾಗೂ ಸಮಾಜ ಭಾಂದವರೂ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಾಲಂಬೇರು ಚಂದನ ಸೋಮಲಿಂಗೇಶ್ವರ ಭಜನಾ ಮಂದಿರ ಇಲ್ಲಿನ ತಂಡದವರಿಂದ ಕುಣಿತ ಭಜನೆ ಮತ್ತು ಶ್ರೀನಿವಾಸ ಚೇರ್ಕಾಡಿ ಇವರಿದಂದ ಹರಿಸಂರ್ಕೀತನೆ ಕಾರ್ಯಕ್ರಮ ಜರುಗಿತು.
ಚಿತ್ರಗಳು: ವಂಶಿ ಬೀಜಾಡಿ.

Leave a Reply

Your email address will not be published. Required fields are marked *

four + 15 =