ಕುಂದಾಪುರ ವ್ಯಾಸರಾಜ ಮಠದ ಲಕ್ಷ್ಮೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸದ ಪೂರ್ವಭಾವಿ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಮತ್ತು ಕುಂದಾಪುರ ವ್ಯಾಸರಾಜ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ವ್ಯಾಸರಾಜ ಮಠದ ಮಠಾಧೀಶರಾದ ಶ್ರೀಶ್ರೀಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಪಾದಂಗಳವರ ಚಾತುರ್ಮಾಸ ಕಾರ್ಯಕ್ರಮದ ಪೂರ್ವಭಾವಿ ಸಭೆಯು ನಡೆಯಿತು.

ಕುಂದಾಪುರ ವ್ಯಾಸರಾಜ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ.ಎಂ.ಲಕ್ಷ್ಮಣ್ ಮಾತನಾಡಿ ಮುನ್ನೂರು ವರ್ಷಗಳ ಬಳಿಕ ಕುಂದಾಪುರ ವ್ಯಾಸರಾಜ ಮಠದಲ್ಲಿ ಈಗೀನ ಸ್ವಾಮೀಜಿ ಲಕ್ಷ್ಮೀಂದ್ರ ತೀರ್ಥರ ಚಾತುರ್ಮಾಸ ಕಾರ್ಯಕ್ರಮ ನಡೆಯುತ್ತಿರುವುದು ಗಾಣಿಗ ಸಮಾಜದವರಾದ ನಮಗೆಲ್ಲರಿಗೂ ಹೆಮ್ಮೆ ಎನಿಸಿದೆ. ಈ ಪುಣ್ಯ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರ ಮೂಲಕ ಗಾಣಿಗ ಸಮಾಜದವರಾದ ನಾವೆಲ್ಲ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು.

ಸ್ವಾಮೀಜಿವರ ಚಾತುರ್ಮಾಸಕ್ಕೆ ಪ್ರತಿಯೋರ್ವರು ಒಗ್ಗಟ್ಟಿನಿಂದ ಕೆಲಸ ಮಾಡಿ ಈ ಕಾರ್ಯಕ್ರಮದ ಯಶಸ್ವಿಗೆ ದುಡಿಯಬೇಕು. ಜತೆಗೆ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆಯುವುದರ ಮೂಲಕ ಸಮಾಜವನ್ನು ಬಲಪಡಿಸಬೇಕು ಎಂದರು.

ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಕೆ.ಗೋಪಾಲ್ ಕಿನ್ನಿಮೂಲ್ಕಿ, ಕುಮಟ ಗಾಣಿಗ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ, ಭಟ್ಕಳ ಗಾಣಿಗ ಸಂಘದ ಅಧ್ಯಕ್ಷ ನಾರಾಯಣ ಮಣಿ ಶೆಟ್ಟಿ, ಶಿರಸಿ ಗಾಣಿಗ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಬಂಟ್ವಾಳ ಗಾಣಿಗ ಸಂಘದ ಅಧ್ಯಕ್ಷ ರಘು, ಉಳ್ಳಾಲ ಗಾಣಿಗ ಸಂಘದ ಅಧ್ಯಕ್ಷ ಲಕ್ಷ್ಮಣ ಎಸ್. ಕಲ್ಲಡ್ಕ ಗಾಣಿಗ ಸಂಘದ ಅಧ್ಯಕ್ಷ ನಾಗೇಶ್, ಮಂಜೇಶ್ವರ ಗಾಣಿಗ ಸಮಾಜದ ಅಧ್ಯಕ್ಷ ವಿಶ್ವನಾಥ್, ಬೆಳ್ತಂಗಡಿ ಗಾಣಿಗ ಯುವ ಸಂಘಟನೆಯ ಅಧ್ಯಕ್ಷ ತುಕರಾಮ, ಮುಖ್ಯ ಶಿಕ್ಷಕ ತಗ್ಗರ್ಸೆ ತಿಮ್ಮಪ್ಪ ಗಾಣಿಗ, ಇಂಜಿನೀಯರ್ ರಮಾನಂದ ಕೆ.ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಉಪಾಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ,ಶಿಕ್ಷಕ ಸುಬ್ರಹ್ಮಣ್ಯ ಜಿ.ಉಪ್ಪುಂದ ಮೊದಲಾದವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಕೋಶಾಧಿಕಾರಿ ಪರಮೇಶ್ವರ ಗಾಣಿಗ, ವ್ಯಾಸರಾಜ ಸೇವಾ ಟ್ರಸ್ಟ್‌ನ ಕೋಶಾಧಿಕಾರಿ ಗಣಪಯ್ಯ ಗಾಣಿಗ, ಕಾರ್ಯಕ್ರಮದ ಮಹಾ ಪೋಷಕ ಸುಧೀರ್ ಪಂಡಿತ್ ಮೊದಲಾದವರು ಉಪಸ್ಥಿತರಿದ್ದರು.

ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೆ.ಕೊಗ್ಗ ಗಾಣಿಗ ಸ್ವಾಗತಿಸಿದರು. ವ್ಯಾಸರಾಜ ಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಕನ್ಯಾನ ಶ್ರೀನಿವಾಸ ಗಾಣಿಗ ಪ್ರಾಸ್ತಾವನೆಗೈದರು. ಕುಂದಾಪುರ ಗಾಣಿಗ ಸೇವಾ ಸಂಘದ ಕಾರ್ಯದರ್ಶಿ ವಂದಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

 

Leave a Reply

Your email address will not be published. Required fields are marked *

6 + 17 =