ಕುಂದಾಪುರ: ಶ್ರೀಪಾದ ಹೆಗಡೆ ಕಂಪ್ಲಿಯವರ ಸುಶ್ರಾವ್ಯ ಗಾಯನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಸಂಗೀತ ಭಾರತಿ ಟ್ರಸ್ಟ್ ವತಿಯಿಂದ ಹೋಟೇಲ್ ಪಾರಿಜಾತದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾದ ಖ್ಯಾತ ಗಾಯಕ ಶ್ರೀಪಾದ ಹೆಗಡೆ ಕಂಪ್ಲಿ ಅವರ ಶಾಸ್ತ್ರೀಯ ಸಂಗೀತ ಶ್ರೋತ್ರವರ್ಗದ ಭಾರಿ ಮೆಚ್ಚುಗೆಗೆ ಪಾತ್ರವಾಯಿತು. ಆರಂಭದಲ್ಲಿ ಶ್ರೀಪಾದ ಹೆಗಡೆ ಕಂಪ್ಲಿಯವರು ಕಾರ್ಯಕ್ರಮವನ್ನು ನಂದಾದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಂಗೀತಭಾರತಿ ಟ್ರಸ್ಟ್‌ನ ನಿರ್ದೇಶಕ ಯು.ಎಸ್.ಶೆಣೈ ಸ್ವಾಗತಿಸಿದರು. ಹಿರಿಯ ನಿರ್ದೇಶಕ ಬಿ.ವಿ. ಬಿಳಿಯ ಕಲಾವಿದರನ್ನು ಗೌರವಿಸಿದರು.

Call us

Call us

ಶ್ರೀಪಾದ ಹೆಗಡೆಯವರಿಗೆ ತಬಲಾದಲ್ಲಿ ಹಿರಿಯ ಕಲಾವಿದ ಗೋಪಾಲಕೃಷ್ಣ ಹೆಗಡೆ, ಹಾರ್ಮೋನಿಯಂನಲ್ಲಿ ಶ್ರೀಪಾದ ಹೆಗಡೆಯವರ ಧರ್ಮಪತ್ನಿ ನಾಗವೇಣಿ ಹೆಗಡೆ, ಸಹಕಲಾವಿದರಾಗಿ ಶ್ರೀಪಾದ ಹೆಗಡೆಯವರ ಪುತ್ರ ವಿಶಾಲ ಹೆಗಡೆ, ತರುಣಗಾಯಕ ಅನಘ, ಹಾಗೂ ನೇಹಾ ಹೊಳ್ಳ ಸಹಕರಿಸಿದ್ದರು. ಸಂಗೀತ ಭಾರತಿ ಕಾರ್ಯದರ್ಶಿ ನಾರಾಯಣ ಕೆ. ಕಾರ್ಯಕ್ರಮ ನಿರೂಪಿಸಿದರು. ಹಿರಿಯ ನಿರ್ದೇಶಕ ಎ. ಭಾಸ್ಕರ ಹೆಬ್ಬಾರ ವಂದಿಸಿದರು.

Leave a Reply

Your email address will not be published. Required fields are marked *

nineteen − 14 =