ಕುಂದಾಪುರ: ಸಂವೇದನಾಶೀಲ ಬರಹಗಾರ್ತಿ ಸಾರಾ ಅಬೂಬಕ್ಕರ್ ಅವರಿಗೆ ನುಡಿ ನಮನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಮುದಾಯ ಕುಂದಾಪುರದ ತಿಂಗಳ ಓದು ಕಾರ್ಯಕ್ರಮ ಇತ್ತಿಚಿಗೆ ಜನಪ್ರತಿನಿಧಿ ಪತ್ರಿಕೆಯ ಸಹಯೋಗದೊಂದಿಗೆ ನಡೆಯಿತು.

Call us

Call us

ಈ ತಿಂಗಳ ಓದು ಕಾರ್ಯಕ್ರಮ ನಮ್ಮನ್ನೆಲ್ಲಾ ಅಗಲಿರುವ ಸಂವೇದನಾಶೀಲ ಬರಹಗಾರ್ತಿ, ನಾಡೋಜ ಸಾರಾ ಅಬೂಬಕ್ಕರ್ ಅವರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮವಾಗಿತ್ತು.

Click here

Click Here

Call us

Call us

Visit Now

ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಶಿಕ್ಷಕಿ ಅಶ್ವಿನಿ ಕನ್ನಂತ ಸಾರಾ ಅಬೂಬಕ್ಕರ್ ಅವರ ನಿಯಮ ನಿಯಮಗಳ ನಡುವೆ ಎಂಬ ಕತೆಯನ್ನು ಓದಿನೊಂದಿಗೆ ಕಥೆಯ ತಿರುಳು ಕೇಳುಗರ ಮನದಲ್ಲಿ ಒಂದು ಸುಂದರ ಅನುಭವವಾಗುವಂತೆ ಓದಿದರು.

ಸರಕಾರಿ ಪ್ರೌಢಶಾಲೆ ಹೆಸ್ಕತ್ತೂರ ಮುಖ್ಯೋಪಾಧ್ಯಾಯರಾದ ಅಬ್ದುಲ್ ರವೂಫ್ ರವರು ಸಾರಾ ಅಬೂಬಕ್ಕರ್ ಅವರ ಬದುಕು ಬರಹ ಕಥೆ ನಾಟಕ ಅವರ ಸಾಧನೆ ಇವುಗಳ ಬಗ್ಗೆ ಮಾತನಾಡಿದರು.

ಹಾಲಾಡಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರೋಷನ್ ಬೀಬಿಯವರು ತಮ್ಮನ್ನು ಒಳಗೊಂಡಂತೆ ಮುಸ್ಲಿಂ ಸಮುದಾಯದ ಮಹಿಳಾ ಲೇಖಕಿಯರ ಮೇಲೆ ಹಾಗೂ ಎಲ್ಲಾ ವರ್ಗದ ಲೇಖಕ ಲೇಖಕಿಯರ ಮೇಲೆ ಸಾರಾ ಅಬೂಬಕ್ಕರ್ ಅವರ ಬರಹ ಬದುಕಿನ ಪ್ರಭಾವದ ಕುರಿತು ಮಾತನಾಡಿದರು.

Call us

ಜನಪ್ರತಿನಿಧಿ ಪತ್ರಿಕಾ ಸಂಪಾದಕರಾದ ಸುಬ್ರಹ್ಮಣ್ಯ ಪಡುಕೋಣೆಯವರು ಕುಂದಾಪುರದಲ್ಲಿ ಸಾರಾ ಅಬೂಬಕ್ಕರ್ ಅವರು ಭಾಗವಹಿಸಿರುವ ಕಾರ್ಯಕ್ರಮ ಒಂದರ ಪರಿಚಯ ಮಾಡುತ್ತಾ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು.

ಒಟ್ಟಂದದಲ್ಲಿ ಸಾರಾ ಅಬೂಬಕ್ಕರ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಚಿಂತಕರು ಲೇಖಕರು ಸಹ ಹೃದಯ ಕೇಳುಗರೆಲ್ಲರೂ ಸಾರಾ ಅಬೂಬಕ್ಕರ್ ಅವರ ಬದುಕು ಬರಹ ಕಥೆಗಳ ಶೈಲಿ ಅವುಗಳು ಕೊಟ್ಟ ಅನುಭವದ ಕುರಿತು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸಮುದಾಯ ಕುಂದಾಪುರದ ಅಧ್ಯಕ್ಷರಾದ ಡಾ. ಸದಾನಂದ ಬೈಂದೂರ್ ರವರು ತಿಂಗಳ ಓದುವಿನ ಕುರಿತು ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು. ಸಮುದಾಯ ಕುಂದಾಪುರದ ಕಾರ್ಯದರ್ಶಿಯಾದ ವಾಸುದೇವ ಗಂಗೇರ ಕಾರ್ಯಕ್ರಮವನ್ನು ನಿರೂಪಿಸಿದರು. ಸಮುದಾಯ ಕುಂದಾಪುರದ ಉಪಾಧ್ಯಕ್ಷರಾದ ಸುಧಾಕರ ಕಾಂಚನ್ ರವರು ಧನ್ಯವಾದ ಸಮರ್ಪಿಸಿದರು.

ನಮ್ಮನ್ನಗಲಿರುವ ಸಂವೇದನಾಶೀಲ ಲೇಖಕಿ ಸಾರಾ ಅಬೂಬಕರ್ ಅವರ ನುಡಿ ನಮನ ಕಾರ್ಯಕ್ರಮಕ್ಕೆ ಸಮುದಾಯ ಕುಂದಾಪುರದ ಹಿತೈಷಿಗಳು ಸಮಾನ ಮನಸ್ಕ ಚಿಂತಕರು ಲೇಖಕರು ಕವಿಗಳು ಭಾಗವಹಿಸಿದ್ದು ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾದರು.

Leave a Reply

Your email address will not be published. Required fields are marked *

1 + 20 =