ಕುಂದಾಪುರ ಸಾಂತ್ವಾನ ಕೇಂದ್ರದಲ್ಲಿ ಅಂತರ್ಜಾತಿ ಪ್ರೇಮಿಗಳಿಗೆ ಕಂಕಣ ಭಾಗ್ಯ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪೋಷಕರ ವಿರೋಧ ಹಿನ್ನೆಲೆಯಲ್ಲಿ ಅಂತರ್ಜಾತಿ ಪ್ರೇಮಿಗಳಿಗೆ ಕುಂದಾಪುರ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಶುಕ್ರವಾರ ಗಣ್ಯರ ಸುಮ್ಮುಖದಲ್ಲಿ ವಿವಾಹ ನೆರವೇರಿಸಲಾಯಿತು.

Call us

Call us

ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ನಾಗಸಂಪಿಗೆ ಜನಾಂಗಕ್ಕೆ ಸೇರಿದ ಮಂಜುನಾಥ ಎಂಬವರ ಪುತ್ರ ಶ್ಯಾಮ ಪ್ರಸಾದ್ ಹಾಗೂ ಶಿಕಾರಿಪುರ ಎಸ್ಸಿ ಜನಾಂಗಕ್ಕೆ ಸೇರಿದ ಗೋಣಿ ಬಸಪ್ಪ ಎಂಬವರ ಪುತ್ರಿ ರೇಖಾ (೨೦) ಸತಿ,ಪತಿಗಳಾದ ಪ್ರೇಮಿಗಳು.

ಶ್ಯಾಮ್ ಪ್ರಸಾದ್ ಹಾಗೂ ರೇಖಾ ಒಂದೇ ಊರಿನವರಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದು, ಒಂದೂವರೆ ವರ್ಷದಿಂದ ಒಬ್ಬರೂ ಪ್ರೀತಿ ಪಾಶಕ್ಕೆ ಬಿದ್ದಿದ್ದರು. ಶ್ಯಾಮ್‌ಪ್ರಸಾದ್ ಕೊಟೇಶ್ವರ ಬಳಿ ಬಾಡಿಗೆ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಈ ಇಬ್ಬರ ಮದುವೆಗೆ ಎರಡೂ ಮನೆಯವರ ಕಡೆಯಿಂದ ವಿರೋಧವಿತ್ತು.

Call us

Call us

ಕಳೆದ ಒಂದೂವರೆ ತಿಂಗಳ ಹಿಂದೆ ಕುಂದಾಪುರ ಮಹಿಳಾ ಸಾಂತ್ವಾನ ಕೇಂದ್ರ ಸಂಪರ್ಕಿಸಿದ ಯುವ ಜೋಡಿ ತಮ್ಮ ಮದುವೆ ಮಡುವಂತೆ ಅಧ್ಯಕ್ಷೆ ರಾಧಾದಾಸ್ ಅವರಲ್ಲಿ ವಿನಂತಿಸಿತ್ತು. ಮಹಿಳಾ ಸಾಂತ್ವಾನ ಕೇಂದ್ರ ದಿಂದ ಧಾರೆ ಸೀರೆ ಕಾಲುಂಗುರು, ಹಾಗೂ ಕರಿಮಣಿ ನೀಡಿದ್ದು, ಸಮಾಜದ ಗಣ್ಯರ ಸಮ್ಮುಖದಲ್ಲಿ ವಿವಾಹ ನೆರವೇರಿಸಲಾಯಿತು. ಮಹಿಳಾ ಸಾಂತ್ವಾನ ಕೇಂದ್ರ ಅಧ್ಯಕ್ಷ ರಾಧಾದಾಸ್ ನೇತೃತ್ದಲ್ಲಿ ನಡೆದ ೧೨೩ನೇ ಮದುವೆ ಇದಾಗಿದೆ.

ಉದ್ಯಮಿ ಆವರ್ಸೆ ಸುಧಾಕರ ಶೆಟ್ಟಿ, ಅಭಿಯಂತರ ರವಿಶಂಕರ ಭಟ್, ಯಡ್ತರೆ ಮಂಜಯ್ಯ ಶೆಟ್ಟಿ ಟ್ರಸ್ಟ್ ಗೌತಮ ಹೆಗ್ಡೆ, ಕರುಣಾಕರಣ ಶೆಟ್ಟಿ, ಸಾಂತ್ವಾನ ಕೇಂದ್ರ ಕಾರ‍್ಯದರ್ಶಿ ಜಯಂತಿ ಎನ್.ಐತಾಳ್, ಸಮಾಜಿಕ ಕಾರ‍್ಯಕರ್ತೆ ಶಶಿಕಲಾ ಆಚಾರ್ಯ ನಾಗೂರು, ಸಾಂತ್ವಾನ ಕೇಂದ್ರದ ಸುಲೋಚನಾ ಭಟ್, ಮನೋರಮಾ ಶೆಟ್ಟಿ, ಲೀನಾ, ಲೋನಿ, ಸಿಬ್ಬಂದಿಗಳಾದ ಅಶ್ವಿನಿ, ಆರತಿ,ರೇವತಿ, ವಿದ್ಯಾ, ಸಿಂಗಾರಿ ಟೀಚರ್, ಮಾರಿಯಾ ಡಿಸಿಲ್ವಾ ನೂತನ ದಂಪತಿ ಅಭಿನಂದಿಸಿದರು.

 

Leave a Reply

Your email address will not be published. Required fields are marked *

13 − 13 =