ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಲಾಕ್‌ಡೌನ್ ಹಿನ್ನಲೆಯಲ್ಲಿ ನೂರಾರು ಅಸಹಾಯಕ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ನೀಡುತ್ತಾ ನೆರವಿನ ಹಸ್ತ ಚಾಚುತ್ತಿರುವ ಗಂಗೊಳ್ಳಿಯ ’ಸೇವಾ ಸಂಕಲ್ಪ’ ತಂಡದ ಕಾರ್ಯವನ್ನು ಮೆಚ್ಚಿ ೨೫ ಕುಟುಂಬಗಳಿಗೆ ದೈನಂದಿನ ವಸ್ತುಗಳ ಕಿಟ್‌ಗಳನ್ನು ನೀಡಲು ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ೨೫ ಸಾವಿರ ರೂ.ಗಳನ್ನು ನೀಡಿದೆ.
ಸಹಕಾರಿ ಗುಜ್ಜಾಡಿ ಶಾಖೆಯಲ್ಲಿ ಚೆಕ್‌ನ್ನು ಹಸ್ತಾಂತರಿಸಿ ಮಾತನಾಡಿದ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಪೂಜಾರಿ ಸೇವಾ ಮನೋಭಾವದಿಂದ ಹುಟ್ಟಿಕೊಂಡ ಈ ಸಂಘಟನೆಯು ಸಹೃದಯಿ, ನಿಸ್ವಾರ್ಥ ದಾನಿಗಳ ನೆರವಿನೊಂದಿಗೆ ಬಡ ಕುಟುಂಬಗಳಿಗೆ ಅಗತ್ಯವಿರುವ ದೈನಂದಿನ ವಸ್ತುಗಳ ಕಿಟ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸೇವಾ ಸಂಕಲ್ಪ ತಂಡದ ಚರಣ್ ಖಾರ್ವಿ, ಕಾರ್ತಿಕ್ ಖಾರ್ವಿ, ಪತ್ರಕರ್ತ ಬಿ.ರಾಘವೇಂದ್ರ ಪೈ, ಗೋಪಾಲ ಪೂಜಾರಿ, ಗಿರೀಶ ಖಾರ್ವಿ, ದಿನಕರ ಪೂಜಾರಿ, ಸಹಕಾರಿಯ ಗುಜ್ಜಾಡಿ ಶಾಖಾ ಪ್ರಬಂಧಕ ವಿಷ್ಣು ಪೂಜಾರಿ, ಸಹಕಾರಿಯ ಸಿಬ್ಬಂದಿಗಳಾದ ರಜತ್ ಸಿ.ಎಸ್.ಪೂಜಾರಿ, ಭಾರತಿ ಬಿಲ್ಲವ ಮತ್ತಿತರರು ಉಪಸ್ಥಿತರಿದ್ದರು.