ಕುಂದಾಪುರ: ಸ್ವಯಂ ರಕ್ಷಣೆ ಪ್ರಾತ್ಯಕ್ಷಿಕೆ ಕಾರ್ಯಾಗಾರ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಫಿನಿಕ್ಸ್ ಅಕಾಡೆಮಿ ಇಂಡಿಯಾ ಆಶ್ರಯದಲ್ಲಿ ಮೂಡ್ಲಕಟ್ಟೆ ಕಾಲೇಜಿನಲ್ಲಿ ಪ್ರಥಮ ವರ್ಷದ ನರ್ಸಿಂಗ್ ಹಾಗೂ ಇಂಜಿನಿಯರಿಂಗ್ವಿದ್ಯಾರ್ಥಿಗಳಿಗಾಗಿ ಸ್ವಯಂ ರಕ್ಷಣೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ನಡೆಸಲಾಯಿತು.

Call us

Call us

Call us

ಸಂಪನ್ಮೂಲ ವ್ಯಕ್ತಿಯಾಗಿ ಕರಾಟೆ ಅಸೋಸಿಯೇಷನ್ ಕರ್ನಾಟಕ ಇದರ ಕಾರ್ಯದರ್ಶಿ, ಫಿನಿಕ್ಸ್ ಅಕಾಡೆಮಿ ಇಂಡಿಯ ಇದರ ಅಧ್ಯಕ್ಷರು, ಹಾಗು 5 ಡಾನ್ ಬ್ಲಾಕ್ ಬೆಲ್ಟ್ , ವರ್ಲ್ಡ್ ಕರಾಟೆ ಫೆಡರೇಶನ್ ತರಬೇತುದಾರ ಶ್ರೀ. ಕೀರ್ತಿ ಜಿ.ಕೆ ಇವರು ಆಗಮಿಸಿದ್ದು, ಅನಿರೀಕ್ಷಿತವಾಗಿ ನಡೆಯುವ ಘಟನೆ ಸಂದರ್ಭದಲ್ಲಿ ಹೇಗೆ ಪಾರಾಗಬೇಕು, ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳುವುದು ಎನ್ನುವ ಕುರಿತು ಸ್ವಯಂ ರಕ್ಷಣೆ ಕೌಶಲ ಪ್ರಾತ್ಯಕ್ಷಿಕೆ ನೀಡಿದರು. ಕರಾಟೆ ಇಂಡಿಯಾ ಸಂಸ್ಥೆಯ ರಾಷ್ಟ್ರೀಯ ಆಟಗಾರರಾಗಿರುವ ಮತ್ತು ಸ್ವಯಂ ರಕ್ಷಣಾ ತರಬೇತುದಾರರಾಗಿರುವ ಅಂಕಿತ ಬಿ. ಟಿ ಮತ್ತು ಉಡುಪಿ ಜಿಲ್ಲೆಯ ಕರಾಟೆ ಅಸೋಸಿಯೇಷನ್ ಡೈರೆಕ್ಟರ್ ಮತ್ತು ಮೂಡಲಕಟ್ಟೆ ಕಾಲೇಜಿನ ಸಿಬ್ಬಂದಿ ಆಗಿರುವ ಅಕ್ಷಯ್ ಪೂಜಾರಿ ಅವರು ಮಕ್ಕಳಿಗೆ ತರಬೇತಿ ನೀಡಿದರು.

Call us

Call us

ಕಾಲೇಜಿನ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಕಾಲೇಜಿನ ಡೀನ್, ಸಿಬಂದಿ ವರ್ಗ ಹಾಗು ಪ್ರಥಮ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರಾದ ಪ್ರೊಫೆಸರ್ ಸೂಕ್ಷ್ಮ ಅಡಿಗ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

six + sixteen =