ಕುಂದಾಪುರ: ಹಿಂದೂಗಳ ಮೇಲಿನ ದೌರ್ಜನ್ಯವನ್ನು ಸಹಿಸುವುದಿಲ್ಲ – ಬೈಕಾಡಿ ಸುಪ್ರಸಾದ್ ಶೆಟ್ಟಿ

Call us

Call us

ಕುಂದಾಪುರ: ಕೇವಲ ಅಲ್ಪಸಂಖ್ಯಾತರನ್ನೇ ಓಲೈಸುವುದರಲ್ಲಿ ಮುಳುಗಿರುವ ಕಾಂಗ್ರೆಸ್ ಸರಕಾರಕ್ಕೆ ನಡುಬೀದಿಯಲ್ಲಿ ಹತ್ಯೆಯಾದ ಪ್ರಶಾಂತ ಬಗೆಗಾಗಲಿ, ಆತನ ಕುಟುಂಬದ ಬಗೆಗಾಗಲಿ ಒಂದಿಷ್ಟೂ ಕನಿಕರವಿಲ್ಲ. ಮೂಡುಬಿದಿಯವರೇ ಆದ ಸಚಿವರು ಸೌಜನ್ಯಕ್ಕಾದರೂ ಆತನ ಮನೆಗೆ ತೆರಳಿ ಸಂತಾಪ ಸೂಚಿಸಿಲ್ಲ. ಸಚಿವರ ಈ ನಡೆ ಸರಕಾರದ ತಾರತಮ್ಯ ನೀತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಹೇಳಿದರು.

Call us

Call us

Visit Now

ಅವರು ಮೂಡುಬಿದಿರೆಯಲ್ಲಿ ಪ್ರಶಾಂತ ಪೂಜಾರಿಯವರ ಹತ್ಯೆಯನ್ನು ವಿರೋಧಿಸಿ ನಗರದ ಶಾಸ್ತ್ರಿ ವೃತ್ತದ ಬಳಿ ವಿಶ್ವ ಹಿಂದೂ ಪರಿಷತ್, ಸಂಸ್ಕಾರ ಭಾರತಿ ಹಾಗೂ ಭಜರಂಗದಳದ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

Click here

Call us

Call us

ಕಾಂಗ್ರೆಸ್ ಸರಕಾರದ ಇಬ್ಬಗೆಯ ನೀತಿಯನ್ನು ವಿಶ್ವ ಹಿಂದೂ ಪರಿಷತ್ ವಿರೋಧಿಸುತ್ತದೆ. ತನ್ನೂರಿನ್ನಲೇ ಕೊಲೆ ಪ್ರಕರಣ ನಡೆದಿದ್ದರೂ ಆ ಕುಟುಂಬಕ್ಕೆ ಸಾಂತ್ವಾನ ಹೇಳದ ಸಚಿವ ಅಭಯಚಂದ್ರ ಜೈನ್ ಭಾಗವಹಿಸುವ ಎಲ್ಲಾ ಕಾರ್ಯಕ್ರಮದಲ್ಲೂ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಪ್ರತಿಭಟಸಲಿದೆ ಎಂದವು ಹೇಳಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಹಿಂದೂಗಳ ಮೇಲಿನ ದೌರ್ಜನ್ಯ ಸಹಿಸೋಲ್ಲ:
ಇತ್ತಿಚಿನ ದಿನಗಳಲ್ಲಿ ಹಿಂದೂ ಸಮಾಜದ ವಿರುದ್ದ ದೌರ್ಜನ್ಯ ನಡೆಸಲಾಗುತ್ತಿದೆ. ವಿನಾಕಾರಣ ಹಿಂದೂ ಯುವಕರ ಮೇಲೆ ದೌರ್ಜನ್ಯ ನಡೆಸುವ ಮತ್ತು ಅದನ್ನು ಪ್ರಚೋದಿಸುವ ಶಕ್ತಿಗಳು ಹೆಚ್ಚುತ್ತಿದೆ. ಮಾವಿನಕಟ್ಟೆಯ ಬಳಿ ಆಕ್ರಮವಾಗಿ ದನದ ಮಾಂಸ ಪ್ರಕರಣದ ತನಿಖೆಗೆ ತೆರಳಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ಭೂಗತ ವ್ಯಕ್ತಿಗಳು ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಕಂಡ್ಲೂರಿನ ಅಮಾಯಕ ಯುವಕರ ಮೇಲೆ ದೌರ್ಜನ್ಯ ನಡೆಸಲಾಗಿದೆ. ಆದರೆ ಇದು ಹೀಗೆಯೇ ಮುಂದುವರಿಯಲು ಬಿಡುವುದಿಲ್ಲ. ಕಂಡ್ಲೂರಿನಲ್ಲಿ ಮತ್ತೆ ಹಿಂದೂಗಳ ಮೇಲೆ ದೌರ್ಜನ್ಯ ನಡೆದರೇ ಹಿಂದು ಯುವಕರ ಶಕ್ತಿಯನ್ನು ಪ್ರದರ್ಶಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಗೋ ಹತ್ಯೆ ಹಾಗೂ ಲವ್ ಜಿಹಾದ್ ವಿರುದ್ದ ನಮ್ಮ ಸಂಘಟನೆಗಳ ಹೋರಾಟ ನಿರಂತರವಾಗಿರುತ್ತದೆ ಪುನರುಚ್ಚರಿಸಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಸಂಸ್ಕಾರ ಭಾರತಿಯ ಜಿಲ್ಲಾ ಸಂಘಟಕ ವಾಸುದೇವ ಭಟ್ ಪಾರಂಪಳ್ಳಿ, ತಾಲ್ಲೂಕು ಸಂಘಟಕ ಸಂತೋಷ್ ಶೆಟ್ಟಿ, ರಾಜ್ಯ ಬಿಜೆಪಿ ಮೀನುಗಾರರ ಪ್ರಕೋಷ್ಠದ ಸಂಚಾಲಕ ಬಿ. ಕಿಶೋರಕುಮಾರ, ನೀಲಾವರ ಗೋ ಶಾಲೆಯ ಟ್ರಸ್ಟಿ ಲಕ್ಷ್ಮೀ ನಾರಾಯಣ ರಾವ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ್ ಮೆಂಡನ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ಬಿಲ್ಲವ, ಮಾಜಿ ಅಧ್ಯಕ್ಷೆ ದೀಪಿಕಾ ಶೆಟ್ಟಿ, ಕಿದಿಯೂರು ಸತೀಶ್ ಶೆಟ್ಟಿ, ವಿಜಯ್ ಪೂಜಾರಿ, ಹರೀಶ್ ತೋಳಾರ್ ಕೊಲ್ಲೂರು, ಪ್ರದೀಪ್ ಸಂಗಮ್ ಮತ್ತಿತರರು ಉಪಸ್ಥಿತರಿದ್ದರು. ( Kundapraa.com news )

ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಮೃತ ಪ್ರಶಾಂತ ಪೂಜಾರಿಯವರ ಕುಟುಂಬಕ್ಕಾಗಿ ನಿಧಿ ಸಂಗ್ರಹಿಸಿದರು. ಹಿಂದೂ ಸಂಘಟನೆಯ ಪ್ರಮುಖ ಶಂಕರ ಅಂಕದಕಟ್ಟೆ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು, ಸುರೇಂದ್ರ ಕೋಟೇಶ್ವರ ನಿರೂಪಿಸಿದರು, ರಜತ್ ತೆಕ್ಕಟ್ಟೆ ವಂದಿಸಿದರು.

VHP, Bajrang Dal and Sanskara Bharati near Shastri circle Kundapura (2)

Leave a Reply

Your email address will not be published. Required fields are marked *

19 − 14 =