ಕುಂದಾಪುರ ಹೆಲ್ಪಿಂಗ್ ಹ್ಯಾಂಡ್ಸ್ ಟ್ರೋಫಿ – 2021: ಆಟಗಾರರ ಹರಾಜು ಪ್ರಕ್ರಿಯೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಹೆಲ್ಪಿಂಗ್ ಹ್ಯಾಂಡ್ಸ್ ಟ್ರೋಫಿ – 2021 ಆಟಗಾರರ ಹರಾಜು ಪ್ರಕ್ರಿಯೆ ಕೋಟೆಶ್ವರದ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯಿತು.

Click here

Click Here

Call us

Call us

Visit Now

Call us

Call us

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಅಶೋಕ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಹೆಲ್ಪಿಂಗ್ ಹ್ಯಾಂಡ್ಸ್ ಗೌರವಾಧ್ಯಕ್ಷರಾದ ಸತೀಶ್ ಸಾಲಿಯಾನ್ ಮಣಿಪಾಲ ವಹಿಸಿದ್ದರು.

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಅಶೋಕ ಪೂಜಾರಿ ಮಾತನಾಡಿ, ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥೆಯ ಸಮಾಜಪರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಲಾಕ್‌ಡೌನ್ ಸಮಯದಲ್ಲಿ ಸಂಸ್ಥೆ ಮಾಡಿದ ಕಾರ್ಯಗಳ ಬಗ್ಗೆ ಎಲ್ಲರಿಗೂ ತಿಳಿಸಿ , ಹೆಲ್ಪಿಂಗ್ ಹ್ಯಾಂಡ್ಸ್ ಟ್ರೋಪಿ ಆಯೋಜನೆ ಹಿಂದಿನ ಸಮಾಜಪರ ಕಾರ್ಯದ ಬಗ್ಗೆ ತಿಳಿಸಿದರು. ಹಾಗೂ ವೇದಿಕೆ ಮೇಲಿದ್ದ ಸಂಸ್ಥೆಯ ಪದಾಧಿಕಾರಿಗಳು ಹೆಲ್ಪಿಂಗ್ ಹ್ಯಾಂಡ್ಸ್ ನ ಎಲ್ಲಾ ಸಮಾಜಪರ ಕಾರ್ಯದ ಬಗ್ಗೆ ಮನವರಿಕೆ ಮಾಡಿ ನಮ್ಮ ತಂಡದೊಂದಿಗೆ ಕೈ ಜೋಡಿಸುವಂತೆ ವಿನಂತಿಸಿದರು.

ಮುಖ್ಯ ಅತಿಥಿಗಳಾಗಿ ಮೊಗವೀರ ಯುವ ಸಂಘಟನೆ ಕೋಟೆಶ್ವರ ಘಟಕದ ಅಧ್ಯಕ್ಷರಾದ ಸುನೀಲ್ ಜಿ ನಾಯ್ಕ್, ಕುಂದಾಪುರ ಹೆಲ್ಪಿಂಗ್ ಹ್ಯಾಂಡ್ಸ್ ಗೌರವಾಧ್ಯಕ್ಷರಾದ ಜ್ಞಾನಾನಂದ ಐರೋಡಿ, ಗೌರವ ಸಲಹೆಗರಾದ ರವೀಂದ್ರ ರಟ್ಟಾಡಿ, ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಪ್ರದೀಪ ಮೊಗವೀರ, ಕಾರ್ಯದರ್ಶಿ ಗುರುಪ್ರಸಾದ್ ಖಾರ್ವಿ, ಜೊತೆ ಕಾರ್ಯದರ್ಶಿ ಪ್ರಶಾಂತ್ ತಲ್ಲೂರು, ಛಾಯಾಗ್ರಾಹಕರಾಗಿ ಸಂಸ್ಥೆಯ ಸದಸ್ಯರಾದ ಗಿರೀಶ್ ಹೊದ್ರಾಳಿ, ಹಾಗೂ ಕಾರ್ಯಕ್ರಮದಲ್ಲಿ ಎಲ್ಲಾ ಹೆಲ್ಪಿಂಗ್ ಹ್ಯಾಂಡ್ಸ್ ಸದಸ್ಯರು ಉಪಸ್ಥಿತರಿದ್ದರು.

ಹೆಲ್ಪಿಂಗ್ ಹ್ಯಾಂಡ್ಸ್ ಟ್ರೋಫಿಯ ಎಲ್ಲಾ 14 ಫ಼್ರಾಂಚೈಸಿಯ ಮಾಲಿಕರು ಮತ್ತು ಐಕಾನ್ ಪ್ಲೆಯರ್ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ನಂತರ ಹೆಲ್ಪಿಂಗ್ ಹ್ಯಾಂಡ್ಸ್ ಅಧ್ಯಕ್ಷರಾದ ಪ್ರದೀಪ್ ಮೊಗವೀರ ಐ.ಪಿ.ಎಲ್ ಆಟಗಾರರ ಹರಾಜು ಮಾದರಿಯಲ್ಲಿ ಪ್ರಾಜೆಕ್ಟರ್ ಮೂಖಾಂತರ ರಿಜಿಸ್ಟರ್ ಆದ ಒಟ್ಟು 251 ಆಟಗಾರರ ಹರಾಜು ಪ್ರಕ್ರಿಯೆ ಯನ್ನು ನೆರವೆರಿಸಿದರು. ಕಾರ್ಯಕ್ರಮವನ್ನು ಶಿವಾನಂದ ದೊಡ್ಡೊಣಿ ನಿರೂಪಿಸಿದರು.

Call us

Leave a Reply

Your email address will not be published. Required fields are marked *

3 × 5 =