ಕುಂಭಾಶಿಗೆ ಬಂತು ಸುರತ್ಕಲ್! ಗೊಂದಲ ಹುಟ್ಟಿಸುವ ಹೆದ್ದಾರಿ ಪ್ರಾಧಿಕಾರದ ನಾಮಫಲಕ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯವೂ, ಟೆಂಡರ್ ಪಡೆದ ಕಂಪೆನಿಗಳ ಮಾಹಿತಿ ಕೊರತೆಯೋ ಆದರೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಕೋಟೇಶ್ವರ, ಕುಂಭಾಶಿಯ ಪಶುಚಿಕಿತ್ಸಾ ಕೇಂದ್ರದ ಎದುರು, ತೆಕ್ಕಟ್ಟೆ, ಕೋಟ ಮುಂದಾದೆಡೆ ಕೂಡು ರಸ್ತೆಗಳಿರುವಲ್ಲಿ ಅಳವಡಿಸಿರುವ ನಾಮಫಲಕಗಳು ಪ್ರಯಾಣಿಕರ ಗೊಂದಲ ಹುಟ್ಟಿಸುತ್ತವೆ.

Click Here

Call us

Call us

ಸುರತ್ಕಲ್‌ನಿಂದ ಕುಂದಾಪುರದ ತನಕ ರಾಷ್ಟ್ರೀಯ ಹೆದ್ದಾರಿ-66ರ ಚಥುಷ್ಪತ ಕಾಮಗಾರಿಯನ್ನು ನವಯುಗ ಕಂಪೆನಿ ವಹಿಸಿಕೊಂಡಿದ್ದು ಕಳೆದ ನಾಲ್ಕು ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿದೆ. ಅಂಡರ್ ಪಾಸ್, ಡಿವೈಡರ್, ಟರ್ನಿಂಗ್ ಪಾಯಿಂಟ್‌ಗಳನ್ನು ಜನಸಂದಣಿಯಗೆ ಅನುಗುಣವಾಗಿ ನೀಡದೇ ತಮ್ಮದೇ ಲೆಕ್ಕಾಚಾರದಲ್ಲಿ ಹೆದ್ದಾರಿ ಪ್ರಾಧಿಕಾರವು ಕಾಮಗಾರಿಯನ್ನು ನಡೆಸುತ್ತಿರುವುದು ಒಂದೆಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದರೇ, ಅಲ್ಲಲ್ಲಿ ಹಾಕಿರುವ ನಾಮಫಲಕಗಳು ಗೊಂದಲ ಹುಟ್ಟುಹಾಕಿದೆ.

Click here

Click Here

Call us

Visit Now

ವಿಷ್ಯ ಏನಪ್ಪಾ ಅಂದ್ರೆ, ನವಯುಗ ಕಂಪೆನಿಯವರಿಗೆ ಸುರತ್ಕಲ್ ನಿಂದ ಕುಂದಾಪುರದವರೆಗೆ ಟೆಂಡರ್ ನೀಡಲಾಗಿದೆ. ಹಾಗಾಗಿ ಕುಂದಾಪುರದಿಂದ ಮಂಗಳೂರು ತೆರಳುವವರಿಗೆ ಕೋಟೇಶ್ವರ, ಕುಂಭಾಶಿ, ತೆಕ್ಕಟ್ಟೆ ಹೀಗೆ ಸುರತ್ಕಲ್ ತನವೂ ಕೂಡರಸ್ತೆಗಳಿರುವಲ್ಲಿಯೂ ಮಾರ್ಗಸೂಚಿ ಹಾಕಲಾಗಿದೆ. (ಕುಂಭಾಶಿಯ ಪಶು ಆಸ್ಪತ್ರೆಯ ಎದುರು ಬೋರ್ಡ್ ಹಾಕಲಾಗಿದೆ.) ಆ ಮಾರ್ಗಸೂಚಿಗಳಲ್ಲಿ ಎತ್ತ ಸಾಗಬೇಕೆಂದೂ ತಿಳಿಸಿ ಸುರತ್ಕಲ್ ಎಂದು ನಮೂದಿಸಿದ್ದಾರೆ. ಸುರತ್ಕಲ್ ಒಂದು ಜಿಲ್ಲಾ ಕೇಂದ್ರವೂ ಅಲ್ಲ, ಅಥವಾ ಮುಂದಿನ ನಗರವೂ ಇಲ್ಲ. ಕೂಡು ರಸ್ತೆಗಳಿರುವಲ್ಲಿ ಅಳವಡಿಸಿರುವ ಈ ಫಲಕಗಳಲ್ಲಿ ಆಯಾ ಊರಿನ ಹೆಸರು ಅಥವಾ ಮುಂದೆ ತೆರಳಿದರೆ ಎದುರಾಗುವ ದೊಡ್ಡ ನಗರಗಳ ಹೆಸರು ನಮೂದಿಸುವುದನ್ನು ಬಿಟ್ಟು, (ಉಡುಪಿ – ಮಂಗಳೂರು) ಕಾಮಗಾರಿ ಆರಂಭಿಸಿದ ಸುರತ್ಕಲ್ ನಿಂದ ಎಂಬ ಕಾರಣಕ್ಕೆ ಅದೇ ಊರಿನ ಹೆಸರು ಹಾಕಿರುವುದು ಹಾಸ್ಯಾಸ್ಪದ.

Leave a Reply

Your email address will not be published. Required fields are marked *

sixteen + nineteen =