ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂಭಾಶಿಯ ಫ್ರೆಂಡ್ಸ್ ಕ್ರಿಕೆಟರ್ಸ್ ಆಶ್ರಯದಲ್ಲಿ ನಡೆದ 40 ಗಜಗಳ ಕ್ರಿಕೆಟ್ ಪಂದ್ಯಾಟ ‘ಕುಂಭಾಶಿ ಪ್ರೀಮಿಯರ್ ಲೀಗ್’ನ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿ ಸುಧೀರ್ ಶೆಟ್ಟಿ, ಅರ್ಜುನ್ ದಾಸ್, ದಯಾಶಂಕರ್, ಗಿರೀಶ್ ಗಾಣಿಗ, ಶರತ್, ಪ್ರಸನ್ನ ದೇವಾಡಿಗ ಹಾಗೂ ವಸಂತ ಭಾಗವಹಿಸಿದ್ದರು.
ಪ್ರಥಮ ಸ್ಥಾನ ಪಡೆದುಕೊಂಡ ‘ರೈನಸ್ ಹೀರೋಸ್’ ಹಾಗೂ ದ್ವಿತೀಯ ಸ್ಥಾನ ಪಡೆದುಕೊಂಡ ‘ಸ್ಯಾಮ್ ಕ್ರಿಕೆಟರ್ಸ್’ ತಂಡಗಳಿಗೆ ಪ್ರಶಸ್ತಿ ಹಾಗೂ ಬಹುಮಾನ ನೀಡಲಾಯಿತು.
ರೈನಸ್ ಹಿರೋಸ್ ತಂಡದ ಅಶ್ವಿನ್ ಆಚಾರ್ ಸರಣಿ ಶ್ರೇಷ್ಠ, ಸ್ಯಾಮ್ ಕ್ರಿಕೆಟರ್ಸ್ ತಂಡದ ಶಾನ್ ಉತ್ತಮ ದಾಂಡಿಗ ಹಾಗೂ ದೀಪಕ್ ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಪಡೆದುಕೊಂಡರು. ಪ್ರದೀಪ್ ಆಚಾರ್ ನಿರೂಪಿಸಿದರು.