ಕುವೈತ್: ಇಂಡಿಯಯನ್ ಸೋಷಿಯಲ್ ಫೋರಂ ಲೋಕಾರ್ಪಣೆ

Call us

ಕುವೈತ್ ನಲ್ಲಿ ನೆಲೆಸಿರುವ ಸಮಸ್ತ ಅನಿವಾಸಿ ಭಾರತೀಯರ ಸಮಾನ ವೇದಿಕೆಯಾಗಿ ಇಂಡಿಯನ್ ಸೋಷಿಯಲ್ ಫೋರಂ, ಮಾ. 13 ರಂದು ಅಧಿಕೃತವಾಗಿ ಲೋಕಾರ್ಪಣೆಗೊಂಡಿತು. ಅಬ್ಬಾಸಿಯಾದ ಇಂಟೆಗ್ರೇಟೆಡ್ ಇಂಡಿಯನ್ ಸ್ಕೂಲ್ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಸಾವಿರಾರು ಜನತೆಯ ಮುಂದೆ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾದ ಎ. ಸಯೀದ್ ಇಂಡಿಯನ್ ಸೋಷಿಯಲ್ ಫೋರಂನ್ನು ಅನಿವಾಸಿ ಭಾರತೀಯರಿಗಾಗಿ ಸಮರ್ಪಿಸಿದರು.

ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ಭಾರತದ ಪ್ರಸಕ್ತ ರಾಜಕೀಯ ಸ್ಥಿತಿಗತಿಗಳ ಕಡೆ ಬೆಳಕು ಚೆಲ್ಲಿದರು. ಅಭಿವೃದ್ಧಿಯ ಮಂತ್ರದೊಂದಿಗೆ ಒಳ್ಳೆಯ ದಿನಗಳು ಬರಲಿವೆ ಎಂದು ದೇಶದ ಆಡಳಿತದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ನೇತ್ರತ್ವದ ಸರಕಾರದಿಂದ ಒಳ್ಳೆಯ ದಿನಗಳು ಅಧಾನಿ, ಅಂಬಾನಿ ಯಂತಹ ಉದ್ದಿಮೆದಾರರಿಗೆ ಬಂದಿದೆ ಹೊರತು ಬಡವರಿಗೆ, ಶೋಷಿತ ವರ್ಗಕ್ಕಲ್ಲ ಎಂದು ಅವರು ಹೇಳಿದರು.

ದೇಶದ ಜಾತ್ಯಾತೀತತೆ, ಸಂವಿದಾನ ಅಪಾಯದಲ್ಲಿದ್ದು, ಅಲ್ಪಸಂಖ್ಯಾತ ಬ್ರಾಹ್ಮಣರ ಆಹಾರ ಪದ್ದತಿಯನ್ನು ಬಹುಸಂಖ್ಯಾತ ಭಾರತೀಯರ ಮೇಲೆ ಹೇರುವ ಷಡ್ಯಂತ್ರ ನಡೆಯುತ್ತಿದ್ದು, ಜವಾಬ್ದಾರಿಯುತ ವಿರೋಧಪಕ್ಷವಾಗಿ ಕಾರ್ಯನಿರ್ವಹಿಸಬೇಕಿದ್ದ ಕಾಂಗ್ರೆಸ್ ಗಾಢ ಮೌನಕ್ಕೆ ಶರಣಾಗಿದ್ದು, ಕಾಂಗ್ರೆಸ್ ನ ಯುವರಾಜ ಕಾಣದಂತೆ ಮಾಯವಾಗಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

Call us

ಇಂಡಿಯನ್ ಸೋಷಿಯಲ್ ಫೋರಂ, ಕುವೈಟ್ ನ ಕೇಂದ್ರ ಮತ್ತು ವಿವಿಧ ರಾಜ್ಯ ಸಮಿತಿಗಳ ಪದಾದಿಕಾರಿಗಳನ್ನು ಈ ಸಂಧರ್ಭದಲ್ಲಿ ಈ ಕೆಳಗಿನಂತೆ ಘೋಷಿಸಲಾಯಿತು.

ಕೇಂದ್ರ ಸಮಿತಿ : ಅಬ್ದುಲ್ ಸಲಾಂ (ಕೇರಳ) –ಅಧ್ಯಕ್ಷರು, ಅಲ್ಲಾವುದ್ದೀನ್ (ಬಿಹಾರ)- ಉಪಾಧ್ಯಕ್ಷರು, ಅಂಜದ್ ಅಲಿ (ತಮಿಳುನಾಡು)- ಪ್ರಧಾನ ಕಾರ್ಯದರ್ಶಿಗಳು, ತಾಯಿಫ್ ಅಹ್ಮದ್ (ಕೇರಳ) ಕಾರ್ಯದರ್ಶಿಗಳು, ಶಮೀರ್ ಅಮಾನ್ (ಕರ್ನಾಟಕ) ಕಾರ್ಯದರ್ಶಿಗಳು. ನಾರ್ತ್ ಝೋನ್ : ಶಾಜಹಾನ್ ತಿರುಪತಿ (ಆಂಧ್ರಪ್ರದೇಶ) – ಅಧ್ಯಕ್ಷರು, ಅಮಾನುಲ್ಲಾ ಕುರ್ನೂಲ್ (ಆಂಧ್ರಪ್ರದೇಶ)- ಪ್ರ. ಕಾರ್ಯದರ್ಶಿಗಳು, ಕರ್ನಾಟಕ : ರಫೀಕ್ ಮಂಚಿ – ಅಧ್ಯಕ್ಷರು, ಇಮ್ತಿಯಾಝ್ ಅಹ್ಮದ್ – ಪ್ರ. ಕಾರ್ಯದರ್ಶಿಗಳು, ತಮಿಳುನಾಡು : ಶಕೀಲ್ ಅಹ್ಮದ್ – ಅಧ್ಯಕ್ಷರು, ಸಿಕಂದರ್ ಪಾಶ – ಪ್ರ. ಕಾರ್ಯದರ್ಶಿಗಳು, ಕೇರಳ : ಮುಹಮ್ಮದ್ ಮುಸ್ತಫಾ- ಅಧ್ಯಕ್ಷರು, ಶಾನವಾಜ್ – ಪ್ರ. ಕಾರ್ಯದರ್ಶಿಗಳು

ಜನಾಬ್. ಅಬ್ದುಲ್ ಸಲಾಂ, ಐ‌ಎಸ್‌ಎಫ್ ಕೇಂದ್ರೀಯ ಅಧ್ಯಕ್ಷರು ಸಂಘಟನೆಯನ್ನು ಸಭಿಕರಿಗೆ ಪರಿಚಯಿಸಿದರು. ವೃತ್ತಿ, ಭಾಷೆ, ಧರ್ಮ ಮತ್ತು ಪ್ರಾದೇಶಿಕತೆಯ ಬಂಧನವನ್ನು ತೊಡೆದು ಹಾಕಿ ಭಾರತೀಯ ಎಂಬ ನೆಲೆಯಲ್ಲಿ ಜನರನ್ನು ಒಗ್ಗೂಡಿಸಲು ಒಂದು ಸಮರ್ಥ ವೇದಿಕೆಯಾಗಿ ಸಂಘಟನೆಯು ಕಾರ್ಯನಿರ್ವಹಿಸಲಿದೆ ಎಂದು ಶ್ರೀಯುತರು ಹೇಳಿದರು. ಅನಿವಾಸಿ ಭಾರತೀಯರ ಸಂಪೂರ್ಣ ಶ್ರೇಯೋಭಿವ್ರದ್ದಿಗಾಗಿ ಸೋಷಿಯಲ್ ಫೋರಂ ದಿಟ್ಟ ಹೆಜ್ಜೆಗಳೊಂದಿಗೆ ಮುನ್ನುಗ್ಗಲಿದೆ ಎಂದು ಭರವಸೆಯನ್ನಿತ್ತ ಅವರು ಮುಂದುವರಿದು ವೇದಿಕೆಯ ಮುಖ್ಯ ಉದ್ದೇಶವು ಅನಿವಾಸಿ ಭಾರತೀಯರಲ್ಲಿನ ದುರ್ಬಲ ವರ್ಗಗಳ ಸಮಸ್ಯೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅವುಗಳ ನಿವಾರಣೆಗಾಗಿ ಸರಕಾರಿ ಮತ್ತು ಕಾನೂನು ಮಾರ್ಗೋಪಾಯಗಳ ಮುಖಾಂತರ ಶ್ರಮಿಸುವುದು ಆಗಿದೆ ಎಂದರು.

ಎಸ್‌ಡಿ‌ಪಿ‌ಐ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಜನಾಬ್ ಇಲ್ಯಾಸ್ ಮುಹಮ್ಮದ್ ತುಂಬೆ, ಜನಾಬ್ ಎಮ್‌ಕೆ ಫೈಝಿ, ಜನಾಬ್ ಮುಹಮ್ಮದ್ ಶಾಫಿ, ಎಸ್‌ಡಿ‌ಪಿ‌ಐ ತಮಿಳುನಾಡು ರಾಜ್ಯ ಕಾರ್ಯದರ್ಶಿಗಳಾದ ಜನಾಬ್ ಅಬ್ದುಲ್ ಹಮೀದ್, ಕೆ‌ಐ‌ಎಫ್‌ಎಫ್ ಅಧ್ಯ್ಕ್ಷರಾದ ಸೈಫುದ್ದೀನ್ ನಾಲಕತ್, ಐ‌ಎಸ್‌ಎಫ್ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಅಲ್ಲಾವುದ್ದೀನ್ ಬಿಹಾರ ಈ ಸಂಧರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದರು. ಖ್ಯಾತ ಕವಿ ಪೀತನ್ ಕೆ. ವಯನಾಡ್ ರವರ ಕವಿತೆಯೊಂದು ಜನಮನಸೂರೆಗೊಳಿಸಿತು.
ಐ‌ಎಸ್‌ಎಫ್ ಪ್ರಧಾನ ಕಾರ್ಯದರ್ಶಿಗಳದ ಜನಾಬ್ ಅಮ್ಜದ್ ಅಲಿ ಆರಂಭದಲ್ಲಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ಐಎಸ್ಎಫ್ ಕಾರ್ಯದರ್ಶಿ ಜನಾಬ್ ತಾಯಿಫ್ ಅಹ್ಮದ್ ವಂದಿಸಿದರು. ಶಮೀರ್ ಅಮಾನ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

sixteen − two =