ಕೃಷಿ ವಿಶ್ವವಿದ್ಯಾನಿಲಯಗಳು ರೈತರ ದಿಕ್ಕು ತಪ್ಪಿಸುತ್ತಿವೆ: ವರ್ತೂರು ನಾರಾಯಣ ರೆಡ್ಡಿ

Call us

Call us

Click here

Click Here

Call us

Call us

Visit Now

ಮೂಡುಬಿದಿರೆ: ಕೃಷಿ ವಿಶ್ವವಿದ್ಯಾನಿಲಯಗಳು ರೈತರ ಬದುಕನ್ನು ಹಾಳುಮಾಡಿ, ಕೈಗಾರಿಕರಣವನ್ನು ಪರೋಕ್ಷವಾಗಿ ಉತ್ತೇಜಿಸುತ್ತಿದೆ. ಈ ವ್ಯವಸ್ಥಿತ ಶಡ್ಯಂತ್ರದಿಂದ ರೈತನ ಬದುಕು ದುಸ್ಥಿರವಾಗುತ್ತಿದೆ. ದುಡ್ಡು ಮಾಡುವ ದಂಧೆಗಿಳಿದು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ದಿನದಿಂದ ದಿನಕ್ಕೆ ಆರೋಗ್ಯ ನೆಮ್ಮದಿ ಕುಸಿಯುತ್ತಿದೆ ಎಂದು ರೈತ ವರ್ತೂರು ನಾರಾಯಣ ರೆಡ್ಡಿ ಅಭಿಪ್ರಾಯಪಟ್ಟರು.

Call us

Call us

ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ಕೃಷಿ: ಹೊಸತನದ ಹುಡುಕಾಟ’ ಎಂಬ ವಿಷಯದಲ್ಲಿ ಮಾತನಾಡಿದರು. ವ್ಯವಸಾಯದಲ್ಲಿ ಮರಗಿಡ, ದನಕರು, ತಿಪ್ಪೆಗುಂಡಿ ಎಲ್ಲವೂ ಬೇಕೆಬೇಕು. ಉತ್ತಮ ಕೃಷಿಗೆ ರಾಸಾಯನಿಕ ಗೊಬ್ಬರಗಳ ಅವಶ್ಯಕತೆ ಇಲ್ಲವೇ ಇಲ್ಲ. ಮಣ್ಣಿನಲ್ಲಿನ ಸೂಕ್ಷ್ಮಜೀವಿಗಳನ್ನು ಉಳಿಸಿಕೊಂಡರೆ ಸಾಕು. ಎಕರೆಗೆ ಕನಿಷ್ಠ ೨೫ ವಿವಿಧ ಜಾತಿ ಮರ, ಒಂದು ದನವಿದ್ದರೇ ಅವರಷ್ಟು ಶ್ರೀಮಂತ ಮತ್ತೊಬ್ಬರಿಲ್ಲ.

ಕಬ್ಬಿನ ಸೋಗೆ, ಅಡಿಕೆ ಸಿಪ್ಪೆಯನ್ನು ಸುಡುವ ಬದಲಿಗೆ ಅದನ್ನೇ ಗೊಬ್ಬರವಾಗಿ ಬಳಸಿಕೊಂಡರೇ ರೈತ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು. ಸತ್ತ ದನಗಳನ್ನು ನಮ್ಮ ಮಣ್ಣಿನಲ್ಲಿಯ ಹೂತರೆ ೨೦ವರ್ಷಕ್ಕೆ ಬೇಕಾದ ಗೊಬ್ಬರ ಪಡೆಯಬಹುದು. ಮೀನಿನ ತ್ಯಾಜ್ಯವನ್ನು ರಸಗೊಬ್ಬರವನ್ನಾಗಿಸಿಕೊಳ್ಳಬಹುದು. ಆದರೆ ನಮ್ಮ ಸರಕಾರ ಇದ್ಯಾವುದಕ್ಕೂ ಪ್ರೋತ್ಸಾಹಿಸುತ್ತಿಲ್ಲ ಎಂದು ತಮ್ಮ ಅಸಮಾಧಾನ ಹೊರಗೆಡವಿದರು.

Leave a Reply

Your email address will not be published. Required fields are marked *

4 × 3 =