ಕೃಷಿ ಸಾಲ ಮನ್ನಾ ಬಗ್ಗೆ ತಾಲೂಕು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರುಗಳ ಸಭೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ:  ಸರ್ಕಾರದ ಕೃಷಿ ಸಾಲ ಮನ್ನಾ ಬಗ್ಗೆ ಕುಂದಾಪುರ ತಾಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರುಗಳ ಸಭೆಯು 19-06-2018 ರಂದು ಟಿ.ಎ.ಪಿ.ಸಿ.ಎಂ.ಎಸ್. ಸಭಾಂಗಣದಲ್ಲಿ ಜರುಗಿತು.

Call us

Call us

Visit Now

ಸರ್ಕಾರದ ಸಂಪೂರ್ಣ ಸಾಲಮನ್ನಾ ಯೋಜನೆಯನ್ನು ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಸ್ವಾಗತಿಸುವುದರೊಂದಿಗೆ ರೈತರಲ್ಲಿ ವರ್ಗಿಕರಣ ಮಾಡದೇ ಸಾಲ ಮನ್ನಾ ಮಾಡಬೇಕು, ಕೃಷಿ ಪತ್ತಿನ ಸಂಘದಲ್ಲಿ ಪಡೆದಿರುವ ಕೃಷಿ ಸಂಬಂಧಿಸಿದ ದೀರ್ಘಾವಧಿ ಸಾಲ, ಮಧ್ಯಮಾವಧಿ ಸಾಲ ಮನ್ನಾ ಮಾಡಬೇಕೆಂತಲೂ. ಈ ವರೆಗಿನ ಮಾಹಿತಿ ಪ್ರಕಾರ ಸರ್ಕಾರವು 31-12-2017 ರ ವರೆಗಿನ ಸಾಲಪಡೆದವರಿಗೆ ಮಾತ್ರ ಮನ್ನಾ ಮಾಡುವುದಾಗಿ ಸಮಿಕ್ಷೆ ನಡೆಸುತ್ತಿದ್ದು, ಅದನ್ನು ಆರ್ಥಿಕ ವರ್ಷ ಅಂದರೆ 31 ಮಾರ್ಚಿ 2018ವರೆಗಿನ ಪಡೆದಿರುವ ಹಾಗೂ ಮರುಪಾವತಿಸಿರುವ ಎಲ್ಲಾ ಕೃಷಿ ಸಾಲದ ರೈತರಿಗೆ ದೊರಕಿಸುವಂತೆ ವ್ಯವಸ್ಥೆ ಮಾಡಬೇಕೆಂತಲೂ, ನೊಡೇಲ್ ಅಧಿಕಾರಿಗಳನ್ನು ನೇಮಿಸಿ ರೈತರಿಗೆ ಕಿರುಕುಳ ಹಾಗೂ ವಿಳಂಭ ನೀಡುವ ಸಾಧ್ಯತೆ ಇರುವುದರಿಂದ, ಈ ಹಿಂದೆ ಬೆಳೆ ಸಾಲ ಮನ್ನಾ ಮಾಡಿದ ಮಾದರಿಯಂತೆ ಸಹಕಾರಿ ಇಲಾಖೆಯ ಮೂಲಕವೇ ನೀಡುವಂತೆಯೂ. ಸಾಲ ಮನ್ನಾ ಮಾಡಿದ ಹಣವನ್ನು ಈ ಪ್ರಸಕ್ತ ಸಾಲಿನಲ್ಲಿ ಬಿಡುಗಡೆಗೊಳಿಸಿದ ರೀತಿಯಲ್ಲಿ ಪಾವತಿಸುವಂತೆ ಸಂಘಕ್ಕೆ ಕೋಡಿಸಬೇಕಾಗಿಯೂ. ರೈತ ಸಂಘಟನೆಗಳ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಹಾಗೂ ಬಜೆಟ್ ಪೂರ್ವ ತಯಾರಿಯಲ್ಲಿರುವ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಯವರನ್ನು, ಸಹಕಾರಿ ಸಚಿವರನ್ನು ನಿಯೋಗದೊಂದಿಗೆ ಭೇಟಿ ಮಾಡಿ ಮನವರಿಕೆ ಮಾಡಿಕೊಳ್ಳುವುದೆಂದು ನಿರ್ಣಯಿಸಲಾಯಿತು.

Click here

Call us

Call us

ಸಭೆಯಲ್ಲಿ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಇವರು ಸ್ವಾಗತಿಸಿ ವಿಷಯ ಮಂಡಿಸಿದರು. ಟಿ.ಎ.ಪಿ.ಸಿ.ಎಂ.ಎಸ್‌ನ ಅಧ್ಯಕ್ಷರಾದ ಹರಿಪ್ರಸಾದ ಶೆಟ್ಟಿ, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಬಿ. ರಘುರಾಮ ಶೆಟ್ಟಿ, ಎಸ್. ರಾಜು ಪೂಜಾರಿ, ವಿಶೇಷ ಆಹ್ವಾನಿತರಾದ ಉಡುಪಿ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ವಿಕಾಸ ಹೆಗ್ಡೆ, ಹಾಗೂ ಸಂತೋಷಕುಮಾರ ಶೆಟ್ಟಿ ಬಾಲಾಡಿ ಮತ್ತು ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರುಗಳು ಹಾಗೂ ಜಿಲ್ಲಾ ಬ್ಯಾಂಕ್‌ನ ಅಧಿಕಾರಿಗಳು ಮತ್ತು ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

9 + six =